ಟೆಲ್ ಅವಿವ್: ಹಮಾಸ್ ಅನ್ನು ತೊಡೆದುಹಾಕುವ ಇಸ್ರೇಲ್ ಸೇನೆಯ ಅಭಿಯಾನವು ಆರನೇ ವಾರಕ್ಕೆ ಪ್ರವೇಶಿಸುತ್ತಿದ್ದಂತೆ ಗಾಜಾದಲ್ಲಿನ ಆಸ್ಪತ್ರೆಗಳ ಮೇಲೆ ಇಸ್ರೇಲಿ ಮಿಲಿಟರಿಯ ಗಮನವು ಹೆಚ್ಚು ತೀವ್ರವಾಗುತ್ತಿದೆ.
ಇಸ್ರೇಲ್ ರಕ್ಷಣಾ ಪಡೆಗಳು ನಿನ್ನೆ ಮಕ್ಕಳಿಗಾಗಿನ ವೈದ್ಯಕೀಯ ಕೇಂದ್ರಕ್ಕೆ ಭೇಟಿ ನೀಡಲು ಸುದ್ದಿ ಮಾಧ್ಯಮವನ್ನು ಆಹ್ವಾನಿಸಿತು, ಅಲ್ಲಿ ನೆಲಮಾಳಿಗೆಯಲ್ಲಿ ಹಮಾಸ್ “ಕಮಾಂಡ್ ಮತ್ತು ಕಂಟ್ರೋಲ್ ಸೆಂಟರ್” ಇರುವುದನ್ನು ತೋರಿಸಿದರು ಮತ್ತು ಒತ್ತೆಯಾಳುಗಳನ್ನು ಹಿಡಿದಿಡಲು ಅವುಗಳನ್ನು ಬಳಸಿರಬಹುದು ಎಂಬ ಶಂಕೆ ವ್ಯಕ್ತಪಡಿಸಿದ್ದಾರೆ.
ಅಲ್-ರಾಂಟಿಸಿ ಮಕ್ಕಳ ಆಸ್ಪತ್ರೆಯ ಕೆಳಗಿರುವ ಒಂದು ಕೋಣೆಯಲ್ಲಿ ಬಂದೂಕುಗಳು ಮತ್ತು ಸ್ಫೋಟಕಗಳ ಸಂಗ್ರಹ ಇರುವುದನ್ನು ಇಸ್ರೇಲ್ ಪಡೆಗಳು ತೋರಿಸಿವೆ. ಇದನ್ನು ಹಮಾಸ್ “ಶಸ್ತ್ರಾಗಾರ” ಎಂದು ಇಸ್ರೇಲ್ ಕರೆದಿದೆ.
ಈ ಶಸ್ತ್ರಗಾರಕ್ಕೆ ಸೋಲಾರ್ ಮೂಲಕ ವಿದ್ಯುತ್ ಸಂಚಾರವಾಗುತ್ತಿದ್ದು, ಇದು ಸುಮಾರು 20 ಅಡಿ ಆಳವಿದೆ. ಈ ಮಾರ್ಗ ನೇರವಾಗಿ ಆಸ್ಪತ್ರೆಯ ನೆಲಮಹಡಿ ತಲುಪಿರುವುದನ್ನು ಇಸ್ರೇಲ್ ಪಡೆ ಮತ್ತೆ ಮಾಡಿದೆ. ಸುರಂಗದ ಬಾಗಿಲು ಬುಲೆಟ್ ಪ್ರೂಫ್ ಹಾಗೂ ದಾಳಿಯನ್ನು ತಡೆದುಕೊಳ್ಳಬಹುದುದಾಗಿದ್ದು, ಮೇಲಿನಿಂದ ಸುರಂಗ ಪತ್ತೆ ಮಾಡಲು ಕಷ್ಟವಾಗುವ ರೀತಿ ರಚಿಸಲಾಗಿದೆ.
EXCLUSIVE RAW FOOTAGE: Watch IDF Spokesperson RAdm. Daniel Hagari walk through one of Hamas' subterranean terrorist tunnels—only to exit in Gaza's Rantisi hospital on the other side.
Inside these tunnels, Hamas terrorists hide, operate and hold Israeli hostages against their… pic.twitter.com/Nx4lVrvSXH
— Israel Defense Forces (@IDF) November 13, 2023
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.