ಅಯೋಧ್ಯೆ: ಅಯೋಧ್ಯೆಯಲ್ಲಿ ದೀಪಾವಳಿಗೆ ಸಿದ್ಧತೆಗಳು ಭರದಿಂದ ಸಾಗಿದ್ದು, ದೇಗುಲ ನಗರಿಯ 51 ಘಾಟ್ಗಳಲ್ಲಿ ಏಕಕಾಲಕ್ಕೆ 24 ಲಕ್ಷ ದೀಪಗಳನ್ನು ಬೆಳಗಿಸುವ ಮೂಲಕ ವಿಶ್ವದಾಖಲೆ ನಿರ್ಮಿಸಲು ಆಡಳಿತ ಸಜ್ಜಾಗಿದೆ.
ಶನಿವಾರ ಬೆಳಿಗ್ಗೆ, ಉತ್ತರ ಪ್ರದೇಶದ ಪ್ರವಾಸೋದ್ಯಮ ಸಚಿವ ಜೈವೀರ್ ಸಿಂಗ್ ಅವರು ರಾಜ್ಯದಾದ್ಯಂತ ಕುಶಲಕರ್ಮಿಗಳ ಕರಕುಶಲತೆಯನ್ನು ಬಿಂಬಿಸುವಟ್ಯಾಬ್ಲೋ ಮೆರವಣಿಗೆಗೆ ಸಾಕೇತ್ ಪದವಿ ಕಾಲೇಜಿನಿಂದ ಚಾಲನೆ ನೀಡಿರೆ. ಟ್ಯಾಬ್ಲೋಗಳು ರಾಮ ಕಥಾ ಪಾರ್ಕ್ ಅನ್ನು ಮಧ್ಯಾಹ್ನ 2.30 ಕ್ಕೆ ತಲುಪಿವೆ.
ಮೆರವಣಿಗೆಯಲ್ಲಿ ಉತ್ತರ ಪ್ರದೇಶ ಪ್ರವಾಸೋದ್ಯಮ ಇಲಾಖೆಯಿಂದ ಏಳು ಟ್ಯಾಬ್ಲೋಗಳು ಮತ್ತು ಒಂದು ರಾಮ ರಥ, ವಾರ್ತಾ ಇಲಾಖೆಯಿಂದ 11 ಟ್ಯಾಬ್ಲೋಗಳು ಇವೆ. ಈ ಟ್ಯಾಬ್ಲೋಗಳಲ್ಲಿ ರಾಮಾಯಣದ ವಿವಿಧ ಕಥೆಗಳನ್ನು ಚಿತ್ರಿಸಲಾಗಿದೆ.
ಇದಲ್ಲದೆ, ಮೆರವಣಿಗೆಯಲ್ಲಿ ಅಜಂಗಢದಿಂದ ಧೋಬಿಯಾ ನೃತ್ಯ, ಹಿಮಾಚಲ ಪ್ರದೇಶದ ಕುಲು ನಾಟಿ, ಪಂಜಾಬ್ನ ಗಟ್ಕಾ ಮತ್ತು ಭಾಂಗ್ರಾ ನೃತ್ಯ, ಗುಜರಾತ್ನ ಗರ್ಬಾ, ನಾಗ್ಪುರದ ಧೋಲ್ ತಾಶಾ ಮತ್ತು ದೇಶದಾದ್ಯಂತದ ಹಲವಾರು ನೃತ್ಯ ಪ್ರಕಾರಗಳನ್ನು ಮೆರವಣಿಗೆಯಲ್ಲಿ ಪ್ರಸ್ತುತಪಡಿಸಲಾಗಿದೆ.
ಅವಧ್ ವಿಶ್ವವಿದ್ಯಾನಿಲಯ ಮತ್ತು ಅಯೋಧ್ಯೆ ಜಿಲ್ಲಾಡಳಿತದ ಸುಮಾರು 25,000 ಸ್ವಯಂಸೇವಕರನ್ನು ಒಂದೇ ಸಮಯದಲ್ಲಿ ದೀಪಗಳನ್ನು ಬೆಳಗಿಸಲು ಸಜ್ಜುಗೊಳಿಸಲಾಗಿದೆ. ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ತಂಡವು ಡ್ರೋನ್ ಕ್ಯಾಮೆರಾದ ಸಹಾಯದಿಂದ ದೀಪಗಳನ್ನು ಎಣಿಸಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.