ನ್ಯೂಯಾರ್ಕ್: ವಿಶ್ವಸಂಸ್ಥೆ ಸೋಮವಾರ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರ ಭೇಟಿಯಾಗಿದ್ದು, ಉಭಯ ನಾಯಕರು ಪರಸ್ಪರ ಬಿಗಿ ಅಪ್ಪುಗೆ ನೀಡುವ ಮೂಲಕ ತಮ್ಮ ಬಾಂಧವ್ಯವನ್ನು ವ್ಯಕ್ತಪಡಿಸಿದರು.
ಇದು ಮೋದಿ ಮತ್ತು ಒಬಾಮ ಅವರ 5ನೇ ಭೇಟಿಯಾಗಿದ್ದು, ಈ ಹಿಂದೆ ನವದೆಹಲಿ, ವಾಷಿಂಗ್ಟನ್, ಬರ್ಮಾ ಮತ್ತು ಬ್ರಿಸ್ಬೇನ್ನಲ್ಲಿ ಇವರಿಬ್ಬರು ಭೇಟಿಯಾಗಿ ಮಾತುಕತೆ ನಡೆಸಿದ್ದರು.
ದ್ವಿಪಕ್ಷೀಯ ಮಾತುಕತೆ, ಹವಮಾನ ವೈಪರೀತ್ಯ, ಆರ್ಥಿಕತೆ, ರಕ್ಷಣೆಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಇಬ್ಬರು ನಾಯಕರು ಮಾತುಕತೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಭಾರತ ಮತ್ತು ಅಮೆರಿಕ ನೈಸರ್ಗಿಕ ಪಾಲುದಾರರು ಎಂದು ಬಣ್ಣಿಸಿರುವ ಬರಾಕ್ ಒಬಾಮ, ಉಭಯ ದೇಶಗಳು ತಮ್ಮ ಬಾಂಧವ್ಯವನ್ನು ಎತ್ತರಕ್ಕೆ ಕೊಂಡೊಯ್ದಿವೆ. ಅಲ್ಲದೇ ಹೊಸ ಪಾಲುದಾರಿಕೆಗೆ ಬದ್ಧವಾಗಿದೆ ಎಂದರು.
‘ನಾನು ನಮ್ಮ ಸ್ನೇಹ, ದೂರದೃಷ್ಟಿತ್ವವನ್ನು ಅಪಾರವಾಗಿ ಗೌರವಿಸುತ್ತೇನೆ. ನಮ್ಮ ದೇಶಗಳ ಸ್ನೇಹ ಬಾಂಧವ್ಯಕ್ಕೆ ಬದ್ಧವಾಗಿದ್ದೇನೆ. ದ್ವಿಪಕ್ಷೀಯ ಬಾಂಧವ್ಯ ಮತ್ತು ಅಂತಾರಾಷ್ಟ್ರೀಯ ಪಾಲುದಾರಿಕೆಯಲ್ಲಿ ನಾವು ಸಾಕಷ್ಟು ಸಾಧಿಸಿದ್ದೇವೆ’ ಎಂದು ಮೋದಿ ಮಾಧ್ಯಮ ಹೇಳಿಕೆ ನೀಡಿದ್ದಾರೆ.
ಇದೇ ವೇಳೆ ವಿಶ್ವಸಂಸ್ಥೆಯಲ್ಲಿ ಖಾಯಂ ಸದಸ್ಯತ್ವಕ್ಕೆ ಪ್ರಯತ್ನಿಸುತ್ತಿರುವ ಭಾರತಕ್ಕೆ ಒಬಾಮ ಬೆಂಬಲ ಘೋಷಿಸಿದ್ದಾರೆ. ಇದಕ್ಕಾಗಿ ಮೋದಿ ಅವರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.