ನವದೆಹಲಿ: 2024 ರ ಜನವರಿ 22 ರಂದು ಅಯೋಧ್ಯೆಯ ರಾಮ ಮಂದಿರದಲ್ಲಿ ಭಗವಾನ್ ರಾಮನನ್ನು ಪ್ರತಿಷ್ಠಾಪಿಸುವ ಶುಭ ಸಂದರ್ಭದಲ್ಲಿ ರಾಷ್ಟ್ರದಾದ್ಯಂತ ಸುಮಾರು 5 ಲಕ್ಷ ದೇವಾಲಯಗಳಲ್ಲಿ ಏಕಕಾಲದಲ್ಲಿ ಪ್ರಾರ್ಥನೆಗಳನ್ನು ನಡೆಸಲಾಗುವುದು ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಘೋಷಿಸಿದೆ.
ಈ ಹಿನ್ನೆಲೆಯಲ್ಲಿ ನವೆಂಬರ್ 5 ರಂದು ಸುಮಾರು 45 ಪ್ರಾಂತ್ಯಗಳ ಕಾರ್ಯಕರ್ತರಿಗೆ ‘ಪೂಜಿಸಲ್ಪಟ್ಟ ಅಕ್ಷತೆ’ಯ ವಿತರಣೆಯನ್ನು ಪ್ರಾರಂಭಿಸಲಾಗುವುದು ಟ್ರಸ್ಟ್ ಸದಸ್ಯರು ಹೇಳಿದ್ದಾರೆ. ದೇಶಾದ್ಯಂತ ಪೂಜಿತ್ ಅಕ್ಷತೆ ವಿತರಣೆ ಕಾರ್ಯವನ್ನು ದೇಶಾದ್ಯಂತ ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ವ್ಯವಸ್ಥಿತವಾಗಿ ಮಾಡಲಿದ್ದಾರೆ.
ಮುಂದಿನ ವರ್ಷ, ಹಲವು ಶತಮಾನಗಳ ನಂತರ, ಶ್ರೀರಾಮನ ನಗರವಾದ ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ರಾಮಲಲ್ಲಾ ಪ್ರತಿಮೆಯನ್ನು ಸ್ಥಾಪಿಸಲಾಗುತ್ತಿದೆ. ರಾಮಲಲ್ಲಾ ವಿಗ್ರಹದ ಪ್ರತಿಷ್ಠಾಪನೆಯನ್ನು ಆಚರಿಸಲು ರಾಮಲಲ್ಲಾ ಮುಂದೆ ಅಕ್ಷತೆ ಪೂಜೆಯನ್ನು ಮಾಡಲಾಗುತ್ತದೆ.
ಶ್ರೀರಾಮ ಜನ್ಮಭೂಮಿ ದೇಗುಲದ ‘ಪ್ರಾಣಪ್ರತಿಷ್ಠಾ’ದಂದು ದೇಶಾದ್ಯಂತ 5 ಲಕ್ಷಕ್ಕೂ ಹೆಚ್ಚು ದೇವಸ್ಥಾನಗಳಲ್ಲಿ ಆಯೋಜಿಸುವ ಕಾರ್ಯಕ್ರಮದ ಆಹ್ವಾನಕ್ಕಾಗಿ ನವೆಂಬರ್ 5 ರಂದು ದೇಶದ 45 ಪ್ರಾಂತ್ಯಗಳಿಂದ ಅಯೋಧ್ಯಾ ಧಾಮಕ್ಕೆ ಆಗಮಿಸುವ ಕಾರ್ಯಕರ್ತರಿಗೆ “ಪೂಜಿಸಲ್ಪಟ್ಟ ಅಕ್ಷತೆ” ಸಮರ್ಪಿಸಲಾಗುತ್ತದೆ. ಆ ಎಲ್ಲಾ ಕಾರ್ಯಕರ್ತರುಈ ಅಕ್ಷತೆಯನ್ನು ತಮ್ಮ ಪ್ರಾಂತ್ಯಗಳಿಗೆ ಕೊಂಡೊಯ್ಯುತ್ತಾರೆ. ಈ ಅಕ್ಷತೆಯ ಮೂಲಕ ದೇಶದ ಎಲ್ಲಾ ನಗರಗಳು ಮತ್ತು ಹಳ್ಳಿಗಳಲ್ಲಿ ಜನರನ್ನು ಸಮಾರಂಭಕ್ಕೆ ಆಹ್ವಾನಿಸಲಾಗುತ್ತದೆ” ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಹೇಳಿದೆ.
श्रीराम जन्मभूमि मंदिर प्राणप्रतिष्ठा दिवस अर्थात 22 जनवरी 2024 पर देश भर के पांच लाख से अधिक मंदिरों में आयोजित होने वाले कार्यक्रम के लिए आमंत्रण हेतु 'पूजित अक्षत' 5 नवंबर को देश भर के 45 प्रांतों से अयोध्या धाम पधारे कार्यकर्ताओं को समर्पित किये जायेंगे।
इस पूजित अक्षत को वे…
— Shri Ram Janmbhoomi Teerth Kshetra (@ShriRamTeerth) October 31, 2023
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.