ಇಸ್ಲಾಮಾಬಾದ್: ಭಾರತದ ಪ್ರಧಾನಿ ನರೇಂದ್ರ ಮೋದಿಯವರನ್ನು ಅಮೆರಿಕಾ ಸ್ಟಾರ್ ರೀತಿಯಲ್ಲಿ ಸ್ವಾಗತಿಸಿದೆ ಎಂದು ಪಾಕಿಸ್ಥಾನದ ’ದಿ ನೇಷನ್’ ಪತ್ರಿಕೆ ತನ್ನ ವರದಿಯಲ್ಲಿ ಉಲ್ಲೇಖಿಸಿದೆ.
ರಾಜಕೀಯ ಹಾಗೂ ಮಿಲಿಟರಿಯಲ್ಲಿ ಭಾರತ ಪ್ರಾಬಲ್ಯ ಮೆರೆಯುವಂತೆ ಮಾಡುವುದು ಮೋದಿಯವರ ಉದ್ದೇಶ. ಈ ವಿಷಯದಲ್ಲಿ ಅಮೆರಿಕಾ ಭಾರತಕ್ಕೆ ಬೆಂಬಲ ನೀಡುತ್ತಿದೆ. ಹೀಗಾದರೆ ಸದ್ಯದಲ್ಲೇ ಪಾಕಿಸ್ಥಾನದ ಏಕೈಕ ಸಾಮರ್ಥ್ಯ ಮಿಲಿಟರಿ ಬಲವೂ ಕುಗ್ಗಲಿದೆ. ಇದು ಮೋದಿ ಗುರಿ.
ಮೋದಿಯವರು ಎದುರಾಳಿಗಳನ್ನು ಚಾತುರ್ಯದಿಂದ ನಿಭಾಯಿಸುವ ಸಾಮರ್ಥ್ಯ ಹೊಂದಿರುವ ವಿಶೇಷ ವ್ಯಕ್ತಿತ್ವದ ರಾಜಕಾರಣಿ. ಆದರೆ ಪಾಕಿಸ್ಥಾನ ಯಶಸ್ಸಿನ ಬಗೆಗಿನ ತನ್ನ ಪುರಾತನ ನೀತಿಗಳನ್ನೇ ನಂಬಿ ಕುಳಿತಿದೆ.
ಮೋದಿಯವರು ಅಮೆರಿಕಾದಲ್ಲಿ ಪ್ರಸಿದ್ಧ ಸ್ಟಾರ್ ರೀತಿಯ ಸ್ವಾಗತ ಪಡೆದು, ಸಭೆ, ಸಮಾರಂಭಗಳಲ್ಲಿ ಭಾಗವಹಿಸಿದರು ಆದರೆ ನವಾಝ್ ಶರೀಫ್ ಅವರಿಗೆ ತನ್ನ ಸಾಮರ್ಥ್ಯ ಪ್ರದರ್ಶನಕ್ಕೆ ಸಿಕ್ಕಿದ್ದು ವಿಶ್ವಸಂಸ್ಥೆಯ ವೇದಿಕೆ ಮಾತ್ರ. ಎಲ್ಲವೂ ಪಾಕಿಸ್ಥಾನಕ್ಕೆ ವಿರುದ್ಧವಾಗಿತ್ತು’ .
ಮೋದಿ ಕೇವಲ ಸಿಲಿಕಾನ್ ವ್ಯಾಲಿಯ ದಿಗ್ಗಜರನ್ನು ಭೇಟಿಯಾಗಲಿಲ್ಲ, ಫೇಸ್ಬುಕ್ ಹೆಡ್ಕ್ವಾಟರ್ನಲ್ಲಿ 1.5 ಬಿಲಿಯನ್ ಫಾಲೋವರ್ಗಳಿಂದ ಪ್ರಶ್ನೆಗಳನ್ನೂ ಸ್ವೀಕರಿಸಿದರು. 30 ವರ್ಷದಲ್ಲಿ ಅಮೆರಿಕಾದ ಪಶ್ಚಿಮ ಭಾಗಕ್ಕೆ ಭೇಟಿ ನೀಡಿದ ಭಾರತದ ಮೊದಲ ಪ್ರಧಾನಿಯವರು, 350 ಉದ್ಯಮಿಗಳೊಂದಿಗೆ ಡಿನ್ನರ್ ಮಾಡಿದರು. ಅದರಲ್ಲಿ ಭಾರತದಲ್ಲಿ ಹುಟ್ಟಿದ ಮೈಕ್ರೋಸಾಫ್ಟ್, ಗೂಗಲ್ ಸಿಇಓಗಳೂ ಇದ್ದರು.
ಜ್ಞಾನವನ್ನು ಮತ್ತೆ ಭಾರತಕ್ಕೆ ವಾಪಾಸ್ ಬರುವಂತೆ ಮಾಡುವ ನಿಟ್ಟಿನಲ್ಲಿ ಸಿಲಿಕಾನ್ ವ್ಯಾಲಿಯಲ್ಲಿ ನೆರೆದಿದ್ದ ಭಾರತೀಯರನ್ನೂ ಉದ್ದೇಶಿಸಿ ಪ್ರೇರಣಾದಾಯಕ ಮಾತುಗಳನ್ನು ಅವರು ಆಡಿದರು.
ಆದರೆ ನವಾಝ್ ಶರೀಫ್ ಏನು ಮಾಡಿದರು? ಎಂದು ಪತ್ರಿಕೆ ಪ್ರಶ್ನಿಸಿದೆ.
ಮೋದಿ ಅಮೆರಿಕಾದ ಅನಿವಾಸಿ ಭಾರತೀಯರೊಂದಿಗೆ ಸಂಪರ್ಕ ಜೋಡಿಸುವ ಪ್ರಯತ್ನದಲ್ಲಿದ್ದಾರೆ. ಆದರೆ ನವಾಝ್ ತಮ್ಮ ರಾಷ್ಟ್ರೀಯ ಘನತೆಗೆ ಒತ್ತು ಕೊಡುವ ನಿಟ್ಟಿನಲ್ಲಿ ಒಬಾಮರೊಂದಿಗೆ ಉರ್ದುವಿನಲ್ಲಿ ಮಾತನಾಡುವ ಬಗ್ಗೆ ಯೋಚಿಸುತ್ತಿದ್ದಾರೆ. ಇದೊಂದು ದೊಡ್ಡ ಜೋಕ್ನಂತೆ ಕಾಣುತ್ತಿದೆ. ವ್ಯಕ್ತಿತ್ವ, ವರ್ಚಸ್ಸು ಸೇರಿದಂತೆ ಪಶ್ಚಿಮಕ್ಕೆ ಕೊಡಲು ಪಾಕಿಸ್ಥಾನದ ಬಳಿ ಏನೂ ಇಲ್ಲ.
ಮೋದಿಯವರ ನಡತೆ ಮತ್ತು ಸನ್ನೆಯನ್ನು ಪಾಕಿಸ್ಥಾನ ಶ್ರದ್ಧೆಯಿಂದ ನೋಡಬೇಕು ಎಂದು ಪತ್ರಿಕೆ ಕಿವಿ ಮಾತು ಹೇಳಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.