ಮುಂಬಯಿ: ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಆಧಾರಿತ ಸಿರೀಸ್ ಅನ್ನು ನಿರ್ದೇಶಿಸಲು ಆರು ರಾಷ್ಟ್ರೀಯ ಪ್ರಶಸ್ತಿ ವಿಜೇತ ಚಲನಚಿತ್ರ ನಿರ್ಮಾಪಕರು ಒಟ್ಟಾಗಿದ್ದಾರೆ. ಆರಂಭಿಕ ಹಂತದಲ್ಲಿರುವ ಈ ಹೊಸ ಸರಣಿಗೆ ಉದ್ಯಮದ ಜನಪ್ರಿಯ ನಿರ್ದೇಶಕರು ಸಹಕರಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸರಣಿಗೆ ಒನ್ ನೇಷನ್ ಅಥವಾ ಏಕ ರಾಷ್ಟ್ರ (ಹಿಂದಿಯಲ್ಲಿ) ಎಂದು ಹೆಸರಿಸಲಾಗಿದೆ. ವರದಿಯ ಪ್ರಕಾರ, ಒನ್ ನೇಷನ್ ಎಂಬುದು ಆರ್ಎಸ್ಎಸ್ನ 100 ವರ್ಷಗಳ ಇತಿಹಾಸವನ್ನು ಹೇಳುವ ಸರಣಿಯಾಗಿದೆ. ವಿವೇಕ್ ಅಗ್ನಿಹೋತ್ರಿ, ಪ್ರಿಯದರ್ಶನ್, ಡಾ ಚಂದ್ರ ಪ್ರಕಾಶ್ ದ್ವಿವೇದಿ, ಜಾನ್ ಮ್ಯಾಥ್ಯೂ ಮಥನ್, ಮಂಜು ಬೋರಾಹ್ ಮತ್ತು ಸಂಜಯ್ ಪುರನ್ ಸಿಂಗ್ ಸೇರಿದಂತೆ ಆರು ರಾಷ್ಟ್ರೀಯ ಪ್ರಶಸ್ತಿ ವಿಜೇತ ನಿರ್ದೇಶಕರು ಈ ಯೋಜನೆಗಾಗಿ ಒಟ್ಟುಗೂಡಲಿದ್ದಾರೆ.
ವರದಿಗಳ ಪ್ರಕಾರ, ಸರಣಿಯು ಸಂಕಲನದ ರೂಪದಲ್ಲಿ ಬಿಡುಗಡೆಯಾಗುತ್ತದೆ ಮತ್ತು ವಿಭಿನ್ನ ನಿರ್ದೇಶಕರ ವಿಭಿನ್ನ ಕಥೆಗಳನ್ನು ಹೊಂದಿರುತ್ತದೆ, ಇದು ಸಂಪೂರ್ಣವಾಗಿ RSS ಅನ್ನು ಆಧರಿಸಿರುತ್ತದೆ.
ಇತ್ತೀಚೆಗೆ, ಸರಣಿಯ ಫಸ್ಟ್ ಲುಕ್ ಪೋಸ್ಟರ್ ಅನ್ನು ಚಲನಚಿತ್ರ ವಿಶ್ಲೇಷಕ ಮತ್ತು ವಿಮರ್ಶಕ ತರಣ್ ಆದರ್ಶ್ ಅವರು ಬಹಿರಂಗಪಡಿಸಿದ್ದಾರೆ. “ಆರು ರಾಷ್ಟ್ರೀಯ ಪ್ರಶಸ್ತಿ ವಿಜೇತರು ಆರ್ಎಸ್ಎಸ್ನ 100 ವರ್ಷಗಳನ್ನು ಆಚರಿಸಲು ಒಟ್ಟಿಗೆ ಸೇರಿದ್ದಾರಡ. ಆರ್ಎಸ್ಎಸ್ನ ಸಂಸ್ಥಾಪನಾ ದಿನದ ಮಹತ್ವದ ಸಂದರ್ಭವನ್ನು ಆಚರಿಸಲು ಒನ್ ನೇಷನ್ ಅಥವಾ ಏಕ್ ರಾಷ್ಟ್ರ ಎಂಬ ಶೀರ್ಷಿಕೆಯ ಸರಣಿಗಾಗಿ ಆರು ರಾಷ್ಟ್ರೀಯ ಪ್ರಶಸ್ತಿ ವಿಜೇತರಾದ ಪ್ರಿಯದರ್ಶನ್, ವಿವೇಕ್ ರಂಜನ್ ಅಗ್ನಿಹೋತ್ರಿ, ️ ಡಾ.ಚಂದ್ರಪ್ರಕಾಶ್ ದ್ವಿವೇದಿ, ಜಾನ್ ಮ್ಯಾಥ್ಯೂ ಮಥನ್, ಮಂಜು ಬೋರಾಹ್, ಸಂಜಯಪುರನ್ ಸಿಂಗ್ ಚೌಹಾಣ್ ಒಟ್ಟುಗೂಡುತ್ತಾರೆ. ಫಸ್ಟ್ ಲುಕ್ ಪೋಸ್ಟರ್ ಇಲ್ಲಿದೆ” ಎಂದು ಟ್ವಿಟ್ ಮಾಡಿದ್ದಾರೆ.
SIX NATIONAL AWARD WINNERS COME TOGETHER TO CELEBRATE 100 YEARS OF RSS… To celebrate the momentous occasion of the foundation day of #RSS, six #NationalAward winners come together for a series – titled #OneNation / #EkRashtra…
⭐️ #Priyadarshan
⭐️ #VivekRanjanAgnihotri
⭐️ Dr… pic.twitter.com/kfQVeV496b— taran adarsh (@taran_adarsh) October 24, 2023
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.