ನವದೆಹಲಿ: ಬಾಲಿವುಡ್ ನಟಿ ಕಂಗನಾ ರಣಾವತ್ ಅವರು ದೆಹಲಿಯಲ್ಲಿನ ಇಸ್ರೇಲ್ ರಾಯಭಾರ ಕಛೇರಿಗೆ ಭೇಟಿ ನೀಡಿ ಸುದ್ದಿ ಮಾಡಿದ್ದಾರೆ. ಪ್ರಸ್ತುತ ತಮ್ಮ ಮುಂಬರುವ ಚಿತ್ರ ತೇಜಸ್ ಪ್ರಚಾರದಲ್ಲಿ ನಿರತರಾಗಿರುವ ಅವರು ನಿನ್ನೆ ದೆಹಲಿಯಲ್ಲಿ ರಾವಣ ದಹನ ಮಾಡಿದ್ದರು.
ಅವರ ಬಹುನಿರೀಕ್ಷಿತ ಸಿನಿಮಾ ತೇಜಸ್ ಅಕ್ಟೋಬರ್ 27ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಇದರ ಪ್ರಚಾರ ಕಾರ್ಯದಲ್ಲಿ ಅವರು ನಿರತರಾಗಿದ್ದಾರೆ. ನಟಿ ನಿನ್ನೆ ಭಾರತದ ಇಸ್ರೇಲ್ನ ರಾಯಭಾರಿ ನೌರ್ ಗಿಲೋನ್ ಅವರನ್ನು ಭೇಟಿ ಮಾಡಿ ಪ್ರಸ್ತುತ ಸನ್ನುವೇಶದ ಬಗ್ಗೆ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.
ಇಸ್ರೇಲ್ ಮತ್ತು ಹಮಾಸ್ ನಡುವೆ ನಡೆಯುತ್ತಿರುವ ಬಿಕ್ಕಟ್ಟಿನ ಕುರಿತು ಅವರು ಮಾತನಾಡಿದ್ದಾರೆ. ಇನ್ಸ್ಟಾಗ್ರಾಂ ಹ್ಯಾಂಡಲ್ನಲ್ಲಿ ಈ ಫೋಟೋಗಳನ್ನು ಹಂಚಿಕೊಂಡು,”ಭಾರತದಲ್ಲಿ ಇಸ್ರೇಲ್ ರಾಯಭಾರಿ ಶ್ರೀ ನಾರ್ ಗಿಲೋನ್ ಜಿ ಅವರನ್ನು ಆತ್ಮೀಯವಾಗಿ ಭೇಟಿಯಾದೆ. ಇಂದು ಇಡೀ ಜಗತ್ತು, ವಿಶೇಷವಾಗಿ ಇಸ್ರೇಲ್ ಮತ್ತು ಭಾರತವು ಭಯೋತ್ಪಾದನೆಯ ವಿರುದ್ಧ ತಮ್ಮ ಯುದ್ಧವನ್ನು ನಡೆಸುತ್ತಿದೆ. ನಿನ್ನೆ ನಾನು ರಾವಣನನ್ನು ದಹಿಸಲು ದೆಹಲಿಗೆ ಬಂದಾಗ, ಇಂದಿನ ಆಧುನಿಕ ರಾವಣ ಹಮಾಸ್ನಂತಹ ಭಯೋತ್ಪಾದಕರನ್ನು ಸೋಲಿಸುತ್ತಿರುವ ಇಸ್ರೇಲ್ನ ರಾಯಭಾರ ಕಚೇರಿಗೆ ಬಂದು ಭೇಟಿಯಾಗಬೇಕು ಎಂದು ನನಗೆ ಅನಿಸಿತು. ಚಿಕ್ಕ ಮಕ್ಕಳು ಮತ್ತು ಮಹಿಳೆಯರನ್ನು ಗುರಿಯಾಗಿಸುವ ರೀತಿ ಹೃದಯ ವಿದ್ರಾವಕವಾಗಿದೆ. ಇಸ್ರೇಲ್ ಗೆಲ್ಲುತ್ತದೆ ಎಂದು ನನಗೆ ಸಂಪೂರ್ಣ ಭರವಸೆ ಇದೆ.ಭಯೋತ್ಪಾದನೆಯ ವಿರುದ್ಧ ಈ ಯುದ್ಧ” ಎಂದು ನಟಿ ಬರೆದಿದ್ದಾರೆ.
Had a very soulful meeting with Israel’s ambassador to Bharat Shri Naor Gilon ji.
आज पूरी दुनिया, ख़ासकर इज़राइल और भारत आतंकवाद के ख़िलाफ़ अपनी जंग लड़ रहे हैं । कल जब मैं रावण दहन करने दिल्ली पहुँची, तो मुझे लगा कि इज़रायल एम्बेसी आकर उन लोगो से मिलना चाहिए जो आज के आधुनिक… pic.twitter.com/syCkDxJCze— Kangana Ranaut (@KanganaTeam) October 25, 2023
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.