ನವದೆಹಲಿ: ಸಂಜೆ ಆರು ಗಂಟೆಯೊಳಗೆ ಪೊಲೀಸರಿಗೆ ಶರಣಾಗುವಂತೆ ಎಎಪಿ ಮುಖಂಡ ಸೋಮನಾಥ್ ಭಾರ್ತಿಯವರಿಗೆ ಸುಪ್ರೀಂಕೋರ್ಟ್ ಸೋಮವಾರ ಸೂಚನೆ ನೀಡಿದೆ.
ಇವರ ವಿರುದ್ಧ ಪತ್ನಿ ಕೊಲೆ ಪ್ರಯತ್ನದ ಪ್ರಕರಣ ದಾಖಲಿಸಿದ್ದರು, ಆದರೆ ಪೊಲೀಸರ ಕೈಗೆ ಸಿಕ್ಕದೆ ಇವರು ಎಸ್ಕೇಪ್ ಆಗುತ್ತಿದ್ದಾರೆ. ಅಲ್ಲದೇ ಸುಪ್ರೀಂಗೆ ನಿರೀಕ್ಷಣಾ ಜಾಮೀನಿಗೆ ಮನವಿ ಸಲ್ಲಿಸಿ ಬಂಧನದಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದರು.
ಆದರೆ ಇವರನ್ನು ರಕ್ಷಿಸಲು ಸುಪ್ರೀಂ ನಿರಾಕರಿಸಿದ್ದು, ನೀವು ಜವಾಬ್ದಾರಿಯುತ ಪ್ರಜೆಯೇ ಆಗಿದ್ದರೆ ತಪ್ಪಿಸಿಕೊಂಡು ಹೋಗಬೇಡಿ, ಮೊದಲು ಶರಣಾಗಿ ಬಳಿಕ ನ್ಯಾಯಾಲಯಕ್ಕೆ ಬನ್ನಿ’ ಎಂದಿದೆ.
ಭಾರ್ತಿ ಪತ್ನಿ ಲಿಪಿಕ ಮಿತ್ರಾ ಅವರು ಅವರ ವಿರುದ್ಧ ದೌರ್ಜನ್ಯ ಮತ್ತು ಕೊಲೆ ಯತ್ನದ ಪ್ರಕರಣ ದಾಖಲಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.