ಟೊರೆಂಟೋ: ಕೆನಡಾ ನೆಲದಲ್ಲಿ ಖಲಿಸ್ತಾನಿ ಭಯೋತ್ಪಾದಕನ ಹತ್ಯೆ ಪ್ರಕರಣದ ಕಹಿ ವಿವಾದದ ನಂತರ 41 ರಾಜತಾಂತ್ರಿಕರನ್ನು ಭಾರತದಿಂದ ಹಿಂಪಡೆದಿರುವುದಾಗಿ ಕೆನಡಾ ಗುರುವಾರ ಹೇಳಿದೆ.
ಶುಕ್ರವಾರದ ವೇಳೆಗೆ ಕೆನಡಾದ 21 ರಾಜತಾಂತ್ರಿಕರು ಮತ್ತು ಅವರ ಕುಟುಂಬಗಳ ರಾಜತಾಂತ್ರಿಕ ವಿನಾಯಿತಿಯನ್ನು ಅನೈತಿಕವಾಗಿ ಹಿಂತೆಗೆದುಕೊಳ್ಳಲು ಭಾರತ ಯೋಜಿಸಿತ್ತು, ಇಂದರಿಂದಾಗಿ ಕೆನಡಾ ಅನಿವಾರ್ಯವಾಗಿ 41 ರಾಜತಾಂತ್ರಿರಕನ್ನು ಹಿಂದಕ್ಕೆ ಕರೆಸಿಕೊಳ್ಳಬೇಕಾಯಿತು ಎಂದು ಕೆನಡಾದ ವಿದೇಶಾಂಗ ವ್ಯವಹಾರಗಳ ಸಚಿವ ಮೆಲಾನಿ ಜೋಲಿ ಹೇಳಿದ್ದಾರೆ.
“ಭಾರತದಿಂದ ಅವರ ಸುರಕ್ಷಿತ ನಿರ್ಗಮನವನ್ನು ನಾವು ಸುಗಮಗೊಳಿಸಿದ್ದೇವೆ. ಇದರರ್ಥ ನಮ್ಮ ರಾಜತಾಂತ್ರಿಕರು ಮತ್ತು ಅವರ ಕುಟುಂಬಗಳು ಈಗ ಭಾರತ ತೊರೆದಿದ್ದಾರೆ” ಎಂದಿದ್ದಾರೆ.
ಕಳೆದ ತಿಂಗಳು ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜಾರ್ ಹತ್ಯೆಗೆ ಭಾರತೀಯ ಗುಪ್ತಚರ ಕಾರಣವೆಂದು ಕೆನಡಾದ ಪ್ರಧಾನಿ ಸಾರ್ವಜನಿಕವಾಗಿ ಹೇಳಿಕೆ ನೀಡಿದ ನಂತರ ಭಾರತ ಮತ್ತು ಕೆನಡಾ ನಡುವಿನ ಸಂಬಂಧಗಳು ಹದಗೆಟ್ಟಿವೆ, ಕೆನಡಾ ಆರೋಪವನ್ನು ಭಾರತ ನಿರಾಕರಿಸಿದೆ.
ಭಾರತದಿಂದ ಪಂಜಾಬ್ ಅನ್ನು ಪ್ರತ್ಯೇಕಗೊಳಿಸಿ ಸಿಖ್ ರಾಜ್ಯ ಸ್ಥಾಪನೆ ಮಾಡಬೇಕು ಎಂಬ ಧೊರಣೆ ಹೊಂದಿದ್ದ ನಿಜ್ಜರ್, ಭಯೋತ್ಪಾದನೆ ಮತ್ತು ಕೊಲೆಗೆ ಸಂಚು ರೂಪಿಸಿದ್ದಕ್ಕಾಗಿ ಭಾರತೀಯ ಅಧಿಕಾರಿಗಳಿಗೆ ಬೇಕಾಗಿದ್ದ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.