ಬೀಜಿಂಗ್: ಚೀನಾ ಈ ವಾರ ತನ್ನ ಅತಿದೊಡ್ಡ ರಾಜತಾಂತ್ರಿಕ ಕಾರ್ಯಕ್ರಮವನ್ನು ಆಯೋಜಿಸಿತ್ತು. ಬಹುಕೋಟಿ ಡಾಲರ್ ಮೂಲಸೌಕರ್ಯ ಯೋಜನೆಯಾದ ಬೆಲ್ಟ್ ಆಂಡ್ ರೋಡ್ (BRI) ಯೋಜನೆಯನ್ನು ಆಚರಿಸಲು ಶೃಂಗಸಭೆಯನ್ನು ನಡೆಸಿತ್ತು. ಅಧ್ಯಕ್ಷ ಕ್ಸಿ ಜಿನ್ಪಿಂಗ್ ಬುಧವಾರ ಬೀಜಿಂಗ್ನ ಗ್ರೇಟ್ ಹಾಲ್ ಆಫ್ ಪೀಪಲ್ನಲ್ಲಿ ಹಲವಾರು ವಿಶ್ವ ನಾಯಕರು ಮತ್ತು 1,000 ಕ್ಕೂ ಹೆಚ್ಚು ಪ್ರತಿನಿಧಿಗಳ ಸಮ್ಮುಖದಲ್ಲಿ ಸಮಾರಂಭವನ್ನು ಪ್ರಾರಂಭಿಸಿದರು ಮತ್ತು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ವೇದಿಕೆ ಹಂಚಿಕೊಂಡರು.
ಆದರೆ ಪುಟಿನ್ ಅವರು ಭಾಷಣ ಆರಂಭಿಸುವುದಕ್ಕೂ ಮೊದಲು ಯುರೋಪಿಯನ್ ಪ್ರತಿನಿಧಿಗಳು ಸೇರಿದಂತೆ ಹಲವಾರು ಜನರು ಶೃಂಗಸಭೆಯಿಂದ ಹೊರನಡೆದರು. ಆ ಪ್ರತಿನಿಧಿಗಳಲ್ಲಿ ಯುರೋಪಿಯನ್ ಜೀನ್-ಪಿಯರೆ ರಾಫರಿನ್, ಫ್ರಾನ್ಸ್ನ ಮಾಜಿ ಪ್ರಧಾನಿ ಸೇರಿದ್ದರು ಎಂದು ವರದಿಗಳು ತಿಳಿಸಿವೆ.
ತಮ್ಮ ಭಾಷಣದಲ್ಲಿ, ಪುಟಿನ್ ಚೀನಾದ ನಾಯಕರ ಆಹ್ವಾನಕ್ಕಾಗಿ ಧನ್ಯವಾದಗಳನ್ನು ಅರ್ಪಿಸಿದರು ಮತ್ತು ಚೀನಾದ ಆಧುನಿಕ ದಿನದ ಪುನರುಜ್ಜೀವನದಲ್ಲಿ ರಷ್ಯಾ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಹೇಳಿದರು.
ಉಕ್ರೇನ್ ಜೊತೆಗಿನ ಸಂಘರ್ಷದ ಬಳಿಕ ಚೀನಾಗೆ ಪ್ರಮುಖ ಭೇಟಿಯನ್ನಿತ್ತಿರುವ ಪುಟಿನ್ ಅಲ್ಲಿ ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.