ನ್ಯೂಯಾರ್ಕ್: ಇಸ್ರೇಲ್ ಮಾಡುತ್ತಿರುವುದು ಪ್ರತಿಕಾರವಲ್ಲ, ಅದು ತನ್ನ ಜನರ ಜೀವನವನ್ನು ರಕ್ಷಿಸುವ ಕಾರ್ಯ ಮಾಡುತ್ತಿದೆ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ಹೇಳಿದ್ದಾರೆ.
ಅವರು ಅಕ್ಟೋಬರ್ 13 ರಂದು ಕತಾರ್ ಪ್ರಧಾನಿ ಶೇಖ್ ಮೊಹಮ್ಮದ್ ಬಿನ್ ಅಬ್ದುಲ್ರಹ್ಮಾನ್ ಬಿನ್ ಜಾಸಿಮ್ ಅಲ್ ಥಾನಿ ಅವರೊಂದಿಗೆ ಜಂಟಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
ಹಮಾಸ್ 1,300 ಜನರ ಹತ್ಯೆಗೆ ಕಾರಣವಾದ ಅತ್ಯಂತ ಭಯಾನಕ ರೀತಿಯ ಭಯೋತ್ಪಾದಕ ದಾಳಿಯನ್ನು ನಡೆಸಿದ ಕಾರಣ ಇಸ್ರೇಲ್ ಗಾಜಾದಲ್ಲಿ ಕಾರ್ಯಾಚರಣೆ ನಡೆಸುತ್ತಿದೆ ಎಂದು ಅವರು ಹೇಳಿದರು. ಭಯೋತ್ಪಾದಕ ಗುಂಪು ಹಮಾಸ್ ನಾಗರಿಕರನ್ನು ‘ಮಾನವ ಗುರಾಣಿಗಳಾಗಿ’ ಬಳಸುವುದನ್ನು ಮುಂದುವರೆಸುತ್ತಿರುವುದರಿಂದ ಗಾಜಾಕ್ಕೆ ಮಾನವೀಯ ನೆರವು ತರುವ ಪ್ರಯತ್ನಗಳು ಜಟಿಲವಾಗಿವೆ ಮತ್ತು ಪ್ಯಾಲೆಸ್ಟೀನಿಯಾದವರು ದಕ್ಷಿಣ ಗಾಜಾಕ್ಕೆ ಸ್ಥಳಾಂತರಗೊಳ್ಳುವುದನ್ನು ತಡೆಯಲು ರಸ್ತೆಗಳನ್ನು ನಿರ್ಬಂಧಿಸುತ್ತಿದ್ದಾರೆ ಎಂದು ಬ್ಲಿಂಕನ್ ಹೇಳಿದರು.
ಮಾನವೀಯ ಪರಿಸ್ಥಿತಿಯನ್ನು ತುರ್ತು ಪರಿಸ್ಥಿತಿ ಎಂದು ಹೇಳಿದ ಅವರು, ಅಗತ್ಯವಿರುವವರಿಗೆ ಮಾನವೀಯ ನೆರವು ನೀಡಲು ಕತಾರ್ ಸೇರಿದಂತೆ ಯುಎಸ್ ತನ್ನ ಪಾಲುದಾರರೊಂದಿಗೆ ಸಕ್ರಿಯವಾಗಿ ತೊಡಗಿಸಿಕೊಂಡಿದೆ ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.