ಬೈರುತ್: ಸಮಯ ಬಂದಾಗ ಇಸ್ರೇಲ್ ವಿರುದ್ಧದ ಯುದ್ಧದಲ್ಲಿ ಪ್ಯಾಲೆಸ್ತೀನ್ ಮಿತ್ರ ಹಮಾಸ್ನೊಂದಿಗೆ ಸೇರಲು ಸಂಪೂರ್ಣವಾಗಿ ಸಿದ್ಧವಾಗಿದ್ದೇವೆ ಎಂದು ಲೆಬನಾನ್ನ ಇರಾನ್ ಬೆಂಬಲಿತ ಹೆಝ್ಬೊಲ್ಹಾ ಮೂವ್ಮೆಂಟ್ ಎಂಬ ಉಗ್ರ ಸಂಘಟನೆ ಶುಕ್ರವಾರ ಹೇಳಿದೆ.
ಶನಿವಾರದಂದು ನೂರಾರು ಹಮಾಸ್ ಬಂದೂಕುಧಾರಿಗಳು ಗಾಜಾದಿಂದ ಇಸ್ರೇಲ್ಗೆ ಗಡಿಯುದ್ದಕ್ಕೂ ನುಗ್ಗಿ 1,300 ಕ್ಕೂ ಹೆಚ್ಚು ಜನರನ್ನು ಕೊಂದ ನಂತರ, ಹಮಾಸ್ ಮತ್ತು ಇಸ್ರೇಲ್ ಸಂಘರ್ಷದಲ್ಲಿ ತೊಡಗಿದ್ದು, ಸಂಘರ್ಷ ಏಳನೇ ದಿನಕ್ಕೆ ಕಾಲಿಟ್ಟಿದೆ. ಈ ನಡುವೆ ಹೆಝ್ಬೊಲ್ಹಾ ಉಪ ಮುಖ್ಯಸ್ಥ ನಯಿಮ್ ಕಾಸ್ಸೆಮ್ ಹೇಳಿಕೆ ಮಹತ್ವ ಪಡೆದುಕೊಂಡಿದೆ.
ಪ್ಯಾಲೇಸ್ಟಿನಿಯನ್ ಆರೋಗ್ಯ ಸಚಿವಾಲಯದ ಪ್ರಕಾರ, ಗಾಜಾ ಪಟ್ಟಿಯಲ್ಲಿರುವ ಹಮಾಸ್ ಗುರಿಗಳ ಮೇಲೆ ಬಾಂಬ್ ದಾಳಿ ಮಾಡುವ ಮೂಲಕ ಇಸ್ರೇಲ್ ಪ್ರತೀಕಾರ ತೀರಿಸಿಕೊಂಡಿದೆ, ಕನಿಷ್ಠ 1,900 ಜನರನ್ನು ಕೊಂದಿದೆ, ಹೆಚ್ಚಾಗಿ ನಾಗರಿಕರು ಮತ್ತು 600 ಕ್ಕೂ ಹೆಚ್ಚು ಮಕ್ಕಳು ಹತರಾಗಿದ್ದಾರೆ ಎಂದಿದೆ.
“ಹೆಝ್ಬೊಲ್ಹಾ ಸಂಘಟನೆಯಾಗಿ ನಾವು ಹಮಾಸ್ ಹೋರಾಟಕ್ಕೆ ಕೊಡುಗೆ ನೀಡುತ್ತಿದ್ದೇವೆ ಮತ್ತು ನಮ್ಮ ದೃಷ್ಟಿ ಮತ್ತು ಯೋಜನೆಯಲ್ಲಿ ಅದಕ್ಕೆ ಕೊಡುಗೆ ನೀಡುವುದನ್ನು ಮುಂದುವರೆಯುತ್ತೇವೆ” ಎಂದು ಬೈರುತ್ನ ದಕ್ಷಿಣ ಉಪನಗರಗಳಲ್ಲಿ ಪ್ಯಾಲೇಸ್ಟಿನಿಯನ್ ಪರ ರ್ಯಾಲಿಯಲ್ಲಿ ಕಾಸ್ಸೆಮ್ ಹೇಳಿದ್ದಾನೆ.
“ನಾವು ಸಂಪೂರ್ಣವಾಗಿ ಸಿದ್ಧರಿದ್ದೇವೆ ಮತ್ತು ಸಮಯ ಬಂದಾಗ ನಾವು ಹೋರಾಟಕ್ಕೆ ಮುಂದಾಗುತ್ತೇವೆ” ಎಂದಿದ್ದಾನೆ.
“ಪ್ರಮುಖ ರಾಷ್ಟ್ರಗಳು, ಅರಬ್ ದೇಶಗಳು ಮತ್ತು ವಿಶ್ವಸಂಸ್ಥೆಯ ರಾಯಭಾರಿಗಳು ನೇರವಾಗಿ ಮತ್ತು ಪರೋಕ್ಷವಾಗಿ ಯುದ್ಧದಲ್ಲಿ ಮಧ್ಯಪ್ರವೇಶಿಸದಂತೆ ನಮ್ಮನ್ನು ಕೇಳುವುದು ನಮ್ಮ ಮೇಲೆ ಪರಿಣಾಮ ಬೀರುವುದಿಲ್ಲ” ಎಂದು ಆತ ಹೇಳಿಕೊಂಡಿದ್ದಾನೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.