ನವದೆಹಲಿ: ಭಯೋತ್ಪಾದನೆ ವಿರುದ್ಧ ಹೋರಾಡಲು ವಿಶ್ವದಾದ್ಯಂತ ಸಂಸತ್ತುಗಳು ಒಟ್ಟಾಗಿ ಕೆಲಸ ಮಾಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿಯವರು ಹೇಳಿದರು.
ಯಶೋಭೂಮಿ ಕನ್ವೆನ್ಷನ್ ಸೆಂಟರ್ನಲ್ಲಿ ಒಂಬತ್ತನೇ ಜಿ 20 ಸಂಸದೀಯ ಸ್ಪೀಕರ್ಗಳ ಶೃಂಗಸಭೆ (ಪಿ 20) ಉದ್ಘಾಟನಾ ಭಾಷಣದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಭಾರತವು ದಶಕಗಳಿಂದ ಗಡಿಯಾಚೆಗಿನ ಭಯೋತ್ಪಾದನೆಯನ್ನು ಹೇಗೆ ಎದುರಿಸುತ್ತಿದೆ ಎಂಬುದರ ಕುರಿತು ವಿವರಿಸಿದರು.
“ಭಾರತವು ಹಲವು ವರ್ಷಗಳಿಂದ ಗಡಿಯಾಚೆಗಿನ ಭಯೋತ್ಪಾದನೆಯನ್ನು ಎದುರಿಸುತ್ತಿದೆ. ಸುಮಾರು 20 ವರ್ಷಗಳ ಹಿಂದೆ, ಅಧಿವೇಶನ ನಡೆಯುತ್ತಿರುವ ಸಮಯದಲ್ಲಿ ಭಯೋತ್ಪಾದಕರು ನಮ್ಮ ಸಂಸತ್ತಿನ ಮೇಲೆ ದಾಳಿ ನಡೆಸಿದ್ದರು. ಭಯೋತ್ಪಾದನೆಯು ಜಗತ್ತಿಗೆ ಎಷ್ಟು ದೊಡ್ಡ ಸವಾಲಾಗಿದೆ ಮತ್ತು ಅದು ಮಾನವೀಯತೆಯ ವಿರುದ್ಧವಾಗಿದೆ ಎಂಬುದನ್ನು ಜಗತ್ತು ಅರಿತುಕೊಳ್ಳುತ್ತಿದೆ. ಭಯೋತ್ಪಾದನೆಯ ವಿರುದ್ಧದ ಈ ಹೋರಾಟದಲ್ಲಿ ಹೇಗೆ ಒಟ್ಟಾಗಿ ಕೆಲಸ ಮಾಡಬೇಕೆಂದು ವಿಶ್ವದ ಸಂಸತ್ತುಗಳು ಮತ್ತು ಅದರ ಪ್ರತಿನಿಧಿಗಳು ಯೋಚಿಸಬೇಕು” ಎಂದಿದ್ದಾರೆ.
“ಸಂಘರ್ಷಗಳು ಮತ್ತು ಘರ್ಷಣೆಗಳಿಂದ ತುಂಬಿರುವ ಪ್ರಪಂಚವು ಯಾರಿಗೂ ಪ್ರಯೋಜನವನ್ನು ತರುವುದಿಲ್ಲ ಎಂದ ಮೋದಿ, ವಿಭಜಿತ ಜಗತ್ತು ನಮ್ಮ ಮುಂದಿರುವ ಸವಾಲುಗಳಿಗೆ ಪರಿಹಾರವನ್ನು ನೀಡಲು ಸಾಧ್ಯವಿಲ್ಲ. ಇದು ಶಾಂತಿ ಮತ್ತು ಸಹೋದರತ್ವದ ಸಮಯ, ಒಟ್ಟಿಗೆ ಚಲಿಸುವ ಸಮಯ, ಒಟ್ಟಿಗೆ ಮುನ್ನಡೆಯುವ ಸಮಯ. ಇದು ಎಲ್ಲರ ಅಭಿವೃದ್ಧಿ ಮತ್ತು ಕಲ್ಯಾಣದ ಸಮಯ” ಎಂದರು.
#WATCH | PM Modi at the ninth P20 Summit in Delhi, says "India has been facing cross-border terrorism for many years now. Around 20 years ago, terrorists targeted our Parliament at the time when the session was on. The world is also realising how big a challenge terrorism is for… pic.twitter.com/itDjZn3uQ8
— ANI (@ANI) October 13, 2023
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.