ಸಾನ್ ಜೋಸ್: ಮುಂದಿನ ವರ್ಷದೊಳಗೆ ಗೂಗಲ್ ಸಹಕಾರದೊಂದಿಗೆ ಭಾರತೀಯ ರೈಲ್ವೇ ದೇಶದ 500 ರೈಲ್ವೇ ಸ್ಟೇಶನ್ಗಳಲ್ಲಿ ಉಚಿತ ವೈಫೈ ಸೇವೆಗಳನ್ನು ನೀಡಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ.
ಗೂಗಲ್ ಹೆಡ್ಕ್ವಾಟರ್ಗೆ ತೆರಳಿ ಅಲ್ಲಿ ಗೂಗಲ್ ಸಿಇಓ ಸುಂದರ್ ಪಿಚೈಯವರನ್ನು ಭೇಟಿಯಾದ ಬಳಿಕ ಮೋದಿ ಈ ಘೋಷಣೆ ಮಾಡಿದ್ದಾರೆ.
ಇದು ಗೂಗಲ್ನ ಅತಿದೊಡ್ಡ ವೈಫೈ ಯೋಜನೆಯಾಗಿದ್ದು, ಭಾರತೀಯ ರೈಲ್ವೇಯೊಂದಿಗೆ ಮುಂಬಯಿ ಸೆಂಟ್ರಲ್ನಿಂದ ಈ ಯೋಜನೆ ಆರಂಭಗೊಳ್ಳಲಿದೆ.
ಗೂಗಲ್ ಕ್ಯಾಂಪಸ್ಗೆ ಭೇಟಿ ನೀಡಿದ ಮೋದಿ, ಹೊಚ್ಚ ಹೊಸ ಉತ್ಪನ್ನ, ಸಂಶೋಧನೆಗಳನ್ನು ಪರಿಶೀಲಿಸಿದರು. ಅಲ್ಲದೇ ಈ ವೇಳೆ ಅವರ ವಾರಣಾಸಿ ಕ್ಷೇತ್ರದ ಘಾಟ್ಗಳ ಗೂಗಲ್ ಅರ್ಥ್ ಪ್ರಸಂನ್ಟೇಶನ್ ಮಾಡಲಾಯಿತು.
ಅಲ್ಲದೇ ಸಾಮಾನ್ಯರಿಗಾಗಿ ಅಪ್ಲಿಕೇಶನ್ ತಯಾರಿಸುವ ಗೂಗಲ್ ಕ್ರಮವನ್ನು ಶ್ಲಾಘಿಸಿ, ಪ್ರೇರೇಪಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.