ನವದೆಹಲಿ: 2000 ಮುಖಬೆಲೆಯ ನೋಟುಗಳನ್ನು ಬದಲಾಯಿಸಲು ನೀಡಲಾಗಿದ್ದ ಗಡುವು ಇಂದು ಮುಕ್ತಾಯವಾಗುತ್ತಿದೆ. ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) 2023ರ ಮೇ 19 ರಂದು 2000 ರೂಪಾಯಿ ನೋಟುಗಳನ್ನು ಚಲಾವಣೆಯಿಂದ ಹಿಂತೆಗೆದುಕೊಳ್ಳುವುದಾಗಿ ಘೋಷಿಸಿತ್ತು. ಈ ಹಿನ್ನೆಲೆಯಲ್ಲಿ ಪಿಂಕ್ ನೋಟುಗಳನ್ನು ಬದಲಾಯಿಸಿಕೊಳ್ಳಲು ಸೆಪ್ಟೆಂಬರ್30 ಕೊನೆಯ ದಿನವಾಗಿದೆ. ಹೀಗಾಗಿ ಈ ನೋಟು ಹೊಂದಿರುವವರು ಇಂದು ಸಂಜೆಯೊಳಗೆ ಬದಲಾಯಿಸುವುದು ಅನಿವಾರ್ಯ.
ಸೆಪ್ಟೆಂಬರ್ ಆರಂಭದಲ್ಲಿ ಆರ್ಬಿಐ ಹಂಚಿಕೊಂಡ ಮಾಹಿತಿಯ ಪ್ರಕಾರ, ಚಲಾವಣೆಯಿಂದ ತೆಗೆದುಹಾಕಲಾದ ಒಟ್ಟು 2,000 ರೂಪಾಯಿ ಮೌಲ್ಯದ ನೋಟುಗಳಲ್ಲಿ ಶೇಕಡ 93 ರಷ್ಟು ನೋಟುಗಳನ್ನು ಬ್ಯಾಂಕ್ಗೆ ವಾಪಾಸ್ ನೀಡಲಾಗಿದೆ.
ಆರ್ಬಿಐ ಹೇಳಿಕೆಯ ಪ್ರಕಾರ, ಆಗಸ್ಟ್ 31, 2023 ರಂತೆ ಬ್ಯಾಂಕ್ಗಳಲ್ಲಿ ಡೆಪಾಸಿಟ್ ಮಾಡಲಾದ 2000 ರೂಪಾಯಿ ನೋಟುಗಳ ಒಟ್ಟು ಮೌಲ್ಯವು 3.32 ಲಕ್ಷ ಕೋಟಿ ರೂಪಾಯಿ. ಅಂದರೆ ಆಗಸ್ಟ್ 31 ರಂದು ಕೇವಲ 0.24 ಲಕ್ಷ ಕೋಟಿ ರೂಪಾಯಿ ಮೌಲ್ಯದ 2000 ರೂಪಾಯಿ ನೋಟುಗಳು ಚಲಾವಣೆಯಲ್ಲಿತ್ತು.
2000 ಮುಖಬೆಲೆಯ ಬ್ಯಾಂಕ್ನೋಟನ್ನು ನವೆಂಬರ್ 2016 ರಲ್ಲಿ ದೇಶದಲ್ಲಿ ಚಲಾವಣೆಗೆ ಪರಿಚಯಿಸಲಾಯಿತು. ಆದರೆ ಈ ಮುಖಬೆಲೆಯ ನೋಟುಗಳು ಚಿಲ್ಲರೆ ಸಮಸ್ಯೆಗೆ ಕಾರಣವಾಗಿತ್ತು. ಕದ್ದು ಹಣ ಸಂಗ್ರಹ ಮಾಡುವವರಿಗೂ ಇದು ಪ್ರಯೋಜನಕಾರಿಯಾಗಿದೆ ಎಂಬ ಮಾತುಗಳೂ ಕೇಳಿ ಬಂದಿದ್ದವು. ಹೀಗಾಗಿ ಸರ್ಕಾರ ನಿಧಾನವಾಗಿ ಈ ನೋಟುಗಳನ್ನು ಚಲಾವಣೆಯಿಂದ ಹಿಂದಕ್ಕೆ ಪಡೆದುಕೊಂಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.