ನವದೆಹಲಿ: ತನ್ನ ಡಿಜಿಟಲ್ ಇಂಡಿಯಾ ಯೋಜನೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ, ಪ್ರಧಾನಿ ನರೇಂದ್ರ ಮೋದಿಯವರು ಭಾನುವಾರ ಅಮೆರಿಕಾದಲ್ಲಿ ಗೂಗಲ್ ಮತ್ತು ಫೇಸ್ಬುಕ್ ಪ್ರಧಾನ ಕಛೇರಿಗೆ ಭೇಟಿ ನೀಡಿದರು.
ಮೋದಿ ಒಟ್ಟು 40 ಸಾವಿರ ಪ್ರಶ್ನೆಗಳನ್ನು ಇಲ್ಲಿ ಸ್ವೀಕರಿಸಿದರು, ಇದರಲ್ಲಿ ಆರಕ್ಕೆ ಮಾತ್ರ ಅವರು ಉತ್ತರಿಸಿದರು. ಇದರಲ್ಲಿ ಎರಡು ಝುಕರ್ಬರ್ಗ್ ಕೇಳಿದ ಪ್ರಶ್ನೆಗಳಾಗಿವೆ. ಅವರು ತಮ್ಮ ತಾಯಿಯ ಬಗ್ಗೆ ಕೇಳಿದ ಪ್ರಶ್ನೆಗೆ ಮೋದಿ ಭಾವುಕರಾಗಿ ಉತ್ತರಿಸಿದರು.
ನೆರೆದ ಗುಂಪಿನಲ್ಲಿ ತಮ್ಮ ತಂದೆ-ತಾಯಿಯೂ ಉಪಸ್ಥಿತರಿದ್ದಾರೆ, ನಿಮ್ಮ ತಾಯಿಯಯವರ ಬಗ್ಗೆಯೂ ನಮಗೆ ಸ್ವಲ್ಪ ತಿಳಿಸಿ ಎಂಬ ಝುಕರ್ಬರ್ಗ್ ಪ್ರಶ್ನೆಗೆ ಉತ್ತರಿಸಿದ ಮೋದಿ, ಝುಕರ್ಬರ್ಗ್ ನ ತಂದೆತಾಯಿಯವರಿಗೆ ಎಲ್ಲರೂ ನಿಮ್ಮನ್ನು ನೋಡಬಯಸುತ್ತಾರೆ, ಹಾಗಾಗಿ ತಾವು ಎದ್ದು ನಿಲ್ಲಿ ಎಂದು ಹೇಳಿ, ಅವರಿಗೆ ಧನ್ಯವಾದಗಳನ್ನು ತಿಳಿಸಿದರು. ನಂತರ ತಮ್ಮ ತಾಯಿ ಪಟ್ಟ ಕಷ್ಟವನ್ನು ನೆನೆದು ಭಾವುಕರಾದ ಅವರು ನನ್ನ ತಾಯಿ ನಮ್ಮನ್ನು ಬೆಳೆಸಲು ಅಕ್ಕ ಪಕ್ಕದ ಮನೆಯಲ್ಲಿ ಮನೆಗೆಲಸ ಮಾಡುತ್ತಿದ್ದರು, ಪಾತ್ರೆ ತೊಳೆಯುತ್ತಿದ್ದರು. ಇಂತಹ ಹಲವಾರು ತಾಯಂದಿರು ನಮ್ಮ ದೇಶದಲ್ಲಿ ಇದ್ದಾರೆ. ಮಕ್ಕಳಿಗಾಗಿ ಎಂತಹಾ ತ್ಯಾಗವನ್ನೂ ಮಾಡಲು ಹಿಂಜರಿಯುವುದಿಲ್ಲ ಎಂದರು. ನಂತರ ’ಥ್ಯಾಂಕ್ಸ್ ಮಾ’ ಎಂದರು.
ಡಿಜಿಟಲ್ ಇಂಡಿಯಾ ಯೋಜನೆ, ಬಂಡಾವಳದಾರರ ಹೆಚ್ಚಿದ ಉತ್ಸಾಹ, ಆಡಳಿತದಲ್ಲಿ ಶೀಘ್ರತೆ ಮುಂತಾದ ಬಗೆಗೆ ಮಾತುಕತೆ ನಡೆಸಿದರು.
ಡಿಜಿಟಲ್ ಇಂಡಿಯಾ ಯೋಜನೆಗೆ ಬೆಂಬಲ ನೀಡುವುದಾಗಿ ಫೇಸ್ಬುಕ್ ಮುಖ್ಯಸ್ಥ ಮಾರ್ಕ್ ಝುಕರ್ಬರ್ಗ್ ಹೇಳಿಕೊಂಡಿದ್ದಾರೆ. ಅಲ್ಲದೇ ತಮ್ಮ ಪ್ರೊಫೈಲ್ ಪಿಕ್ ಮೇಲೆ ಭಾರತದ ಧ್ವಜದ ಮೂರು ಬಣ್ಣಗಳನ್ನು ಹಾಕಿ ಅಭಿಮಾನ ಮೆರೆದಿದ್ದಾರೆ.
ಫೇಸ್ಬುಕ್ಗೆ ಸಂದರ್ಶನ ನೀಡಿದ ಬಳಿಕ ಅವರು ನೇರವಾಗಿ ಗೂಗಲ್ ಹೆಡ್ಕ್ವಾಟರ್ಗೆ ತೆರಳಿದರು. ಇಲ್ಲೂ ಅವರು ಡಿಜಿಟಲ್ ಯೋಜನೆಯ ಬಗ್ಗೆ ಮಾತುಕತೆ ನಡೆಸಿದ್ದಾರೆ. ಮೈಕ್ರೋಸಾಫ್ಟ್ ಸಿಇಓ ಸತ್ಯಾ ನಡೆಲ್ಲಾ ಅವರೂ ಮೋದಿಯೊಂದಿಗೆ ಸಂಭಾಷಣೆ ನಡೆಸಿದರು.
ಇದೇ ರೀತಿ ಮೋದಿಯವರ ಕನಸಿನ ಡಿಜಿಟಲ್ ಇಂಡಿಯಾ ಯೋಜನೆಗೆ ಅಮೆರಿಕಾದ ಪ್ರತಿಷ್ಠಿತ ಉದ್ಯಮಿಗಳಿಂದ ಬೆಂಬಲದ ಮಹಾಪೂರವೇ ಹರಿದಿದೆ. ಇದು ಪ್ರಧಾನಿಯವರ ಅಮೆರಿಕಾ ಭೇಟಿ ಯಶಸ್ವಿಗೊಳ್ಳುವಂತೆ ಮಾಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.