ನವದೆಹಲಿ: ಕೆನಡಾದಲ್ಲಿ ಭಾರತ ವಿರೋಧಿ ಅಂಶಗಳು ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊರನ್ನು ಪ್ರಧಾನಿ ನರೇಂದ್ರ ಮೋದಿ ಜಿ20 ಶೃಂಗಸಭೆ ವೇಳೆ ಪ್ರಶ್ನಿಸಿದ್ದರು. ಇದರ ಬೆನ್ನಲ್ಲೇ ಮುಕ್ತ ವ್ಯಾಪಾರ ಒಪ್ಪಂದದ ಕುರಿತು ಕೆನಡಾದೊಂದಿಗಿನ ಮಾತುಕತೆಯನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ ಎಂದು ಶುಕ್ರವಾರ ಕೇಂದ್ರ ಸರ್ಕಾರ ಪ್ರಕಟಿಸಿದೆ.
ರಾಜಕೀಯ ಸಮಸ್ಯೆಗಳ ಪರಿಹಾರದ ನಂತರವೇ ಉಭಯ ದೇಶಗಳ ನಡುವಿನ ಪುನರಾರಂಭ ಕಾರ್ಯಕ್ರಮ ಎಂದು ಸರ್ಕಾರ ಹೇಳಿದೆ.
ಈ ವರ್ಷಾಂತ್ಯದೊಳಗೆ ವ್ಯಾಪಾರ ಒಪ್ಪಂದಕ್ಕೆ ಮುದ್ರೆ ಹಾಕುವ ಇಚ್ಛೆಯನ್ನು ಉಭಯ ದೇಶಗಳು ಸುಮಾರು ನಾಲ್ಕು ತಿಂಗಳ ಹಿಂದೆಯೇ ವ್ಯಕ್ತಪಡಿಸಿದ್ದವು. ಆದರೆ ಪರಿಸ್ಥಿತಿಗಳು ಉಭಯ ದೇಶಗಳ ನಡುವಣ ಸ್ನೇಹವನ್ನು ಹದಗೆಡುವಂತೆ ಮಾಡಿವೆ. ಇದಕ್ಕೆ ಅಲ್ಲಿನ ಆಡಳಿತ ಭಾರತ ವಿರೋಧಿ ಅಂಶಗಳನ್ನು ಬೆಂಬಲಿಸುತ್ತಿರುವುದೇ ಕಾರಣ.
ದೆಹಲಿಯಲ್ಲಿ ನಡೆದ ಜಿ 20 ಶೃಂಗಸಭೆಯಲ್ಲಿ ಭಾಗವಹಿಸಿದ್ದನ್ನು ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಜಸ್ಟಿನ್ ಟ್ರುಡೋ ಭೇಟಿಯಾಗಿದ್ದನ್ನು ಕೆನಡಾದ ವಿರೋಧ ಪಕ್ಷದ ನಾಯಕ ಪಿಯರೆ ಪೊಯ್ಲಿವ್ರೆ ಟೀಕಿಸಿದ್ದರು. ಭಾರತದಲ್ಲಿ ಟ್ರುಡೋಗೆ ಅವಮಾನವಾಗಿದೆ ಎಂದಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.