ಶ್ರೀನಗರ: ಜಮ್ಮು-ಕಾಶ್ಮೀರದ ಅನಂತನಾಗ್ನಲ್ಲಿ ಭಯೋತ್ಪಾದಕರೊಂದಿಗಿನ ಗುಂಡಿನ ಚಕಮಕಿಯಲ್ಲಿ ಹುತಾತ್ಮರಾದ ಮೂವರಲ್ಲಿ ಒಬ್ಬರಾಅದ ಕರ್ನಲ್ ಮನ್ಪ್ರೀತ್ ಸಿಂಗ್ ಅವರ ಆರು ವರ್ಷದ ಮಗ, ಪಂಜಾಬ್ನ ಮೊಹಾಲಿ ಜಿಲ್ಲೆಯ ಮುಲ್ಲನ್ಪುರದಲ್ಲಿ ತನ್ನ ತಂದೆಯ ಪಾರ್ಥಿವ ಶರೀರ ಮನೆಗೆ ತಲುಪುತ್ತಿದ್ದಂತೆ ಮಿಲಿಟರಿ ಧಿರಿಸಿನಲ್ಲಿ ಸೆಲ್ಯೂಟ್ ಮಾಡಿದ ರೀತಿ ನಿಜಕ್ಕೂ ಮನಕಲುಕುವಂತಿತ್ತು.
ಪುಟ್ಟ ಕಂದ ತನ್ನ ತಂದೆಗೆ ಗೌರವ ಸಲ್ಲಿಸಿದಾಗ ಅಲ್ಲಿದ್ದವರ ಕಣ್ಣಾಲಿಗಳು ಒದ್ದೆಯಾದವು. ಅವನ ಎರಡು ವರ್ಷದ ಸಹೋದರಿ ಪಕ್ಕದಲ್ಲೇ ನಿಂತು ತನ್ನ ಅಣ್ಣನನ್ನು ಅನುಕರಿಸುತ್ತಿದ್ದಳು. ಈ ಪುಟಾಣಿಗಳು ತಮ್ಮ ಕುಟುಂಬಕ್ಕೆ ಎಷ್ಟು ದೊಡ್ಡ ಆಘಾತ ಸಂಭವಿಸಿದೆ ಎಂಬುದನ್ನು ಅರ್ಥ ಮಾಡಿಕೊಳ್ಳುವಷ್ಟು ವಯಸ್ಸಿನವರಲ್ಲ. ಆದರೆ ಪಾರ್ಥಿವ ಶರೀರಕ್ಕೆ ಅವರು ಅರ್ಪಿಸಿದ ಗೌರವ ಎಲ್ಲರನ್ನೂ ಭಾವುಕಗೊಳಿಸಿದೆ.
ವೀರ ಯೋಧನಿಗೆ ಅಂತಿಮ ನಮನ ಸಲ್ಲಿಸಲು ಅಪಾರ ಜನಸ್ತೋಮ ನೆರೆದಿದ್ದರಿಂದ ಸ್ಥಳೀಯರು ಮಕ್ಕಳನ್ನು ಎತ್ತಿ ಹಿಡಿದರು. ಕರ್ನಲ್ ಮನ್ಪ್ರೀತ್ ಸಿಂಗ್ ಅವರ ಪತ್ನಿ, ಸಹೋದರಿ, ತಾಯಿ ಮತ್ತು ಇತರ ಕುಟುಂಬ ಸದಸ್ಯರು ಅತ್ತು ಅತ್ತು ಅಸ್ವಸ್ಥರಾಗಿದ್ದು, ಇವರ ಹುತಾತ್ಮತೆಗೆ ಇಡೀ ದೇಶ ಕಂಬನಿ ಮಿಡಿಯುತ್ತಿದೆ.
#WATCH | Son of Col. Manpreet Singh salutes before the mortal remains of his father who laid down his life in the service of the nation during an anti-terror operation in J&K's Anantnag on 13th September
The last rites of Col. Manpreet Singh will take place in Mullanpur… pic.twitter.com/LpPOJCggI2
— ANI (@ANI) September 15, 2023
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.