ಬರ್ಲಿನ್: ಈ ದೀಪಾವಳಿಯಂದು ಜರ್ಮನಿಯ ಅತಿದೊಡ್ಡ ಹಿಂದೂ ದೇವಾಲಯ ಲೋಕಾರ್ಪಣೆಗೊಳ್ಳಲಿದೆ. ಬರ್ಲಿನ್ನಲ್ಲಿ ಪ್ರಸ್ತುತ ದೇವಾಲಯದ ಕೊನೆಯ ಹಂತದ ಕಾಮಕಾರಿಗಳು ನಡೆಯುತ್ತಿವೆ. 70 ವರ್ಷದ ವಿಲ್ವನಾಥನ್ ಕೃಷ್ಣಮೂರ್ತಿ ಅವರ ಅನೇಕ ವರ್ಷಗಳ ಪ್ರಯತ್ನದ ಫಲವಾಗಿ ಈ ದೇಗುಲ ತಲೆ ಎತ್ತುತ್ತಿದೆ, ಸುಮಾರು 20 ವರ್ಷಗಳ ಹಿಂದೆ ಪ್ರಾರಂಭವಾದ ನಿರ್ಮಾಣ ಯೋಜನೆಯು ಬಹುತೇಕ ಪೂರ್ಣಗೊಂಡಿದೆ. ಕೃಷ್ಣಮೂರ್ತಿ ಅವರು ಸುಮಾರು 50 ವರ್ಷಗಳ ಹಿಂದೆ ಬರ್ಲಿನ್ಗೆ ಬಂದಿದ್ದು, ಅಂದಿನಿಂದ ತಮ್ಮ ಸಮುದಾಯಕ್ಕಾಗಿ ಅಲ್ಲಿ ದೇವಾಲಯವನ್ನು ಸ್ಥಾಪಿಸುವ ಕನಸು ಕಾಣುತ್ತಿದ್ದರು. ಎಲೆಕ್ಟ್ರಿಕಲ್ ಕಂಪನಿ AEG ಯಲ್ಲಿ ಕೆಲಸ ಮಾಡುತ್ತಿದ್ದ ಅವರು ದೇಗುಲ ನಿರ್ಮಾಣಕ್ಕಾಗಿ ಸಂಘವನ್ನು ಸ್ಥಾಪಿಸಿದರು.
ದೇಗುಲ ನಿರ್ಮಾಣವಾಗುತ್ತಿರುವ ಬಗ್ಗೆ ಸಂತಸ ವ್ಯಕ್ತಪಡಿಸಿರುವ ವಿಲ್ವನಾಥನ್ ಅವರು, ನವೆಂಬರ್ನಲ್ಲಿ ಆರು ದಿನಗಳ ಬೃಹತ್ ದೇವಾಲಯ ಉದ್ಘಾಟನಾ ಸಮಾರಂಭ ನಡೆಯಬಹುದು ಎಂಬ ಭರವಸೆ ಇದೆ, ಅದಕ್ಕಾಗಿ ನಾವು ಕಾಯುತ್ತಿದ್ದೇವೆ” ಎಂದಿದ್ದಾರೆ.
“ಈ ದೇವಸ್ಥಾನ ನನಗೆ ಒಂದು ಕನಸು. ಒಬ್ಬ ಹಿಂದುವಾಗಿ ನಾನು ಮನೆಯಲ್ಲಿ ಎಲ್ಲವನ್ನೂ ಆಚರಿಸಬಹುದು, ಆದರೆ ನಾನು ಅದನ್ನು ಇತರ ಜನರೊಂದಿಗೆ ಬೆರೆತು ಆಚರಿಸಲು ಸಾಧ್ಯವಿಲ್ಲ. ಅದಕ್ಕಾಗಿ ಸ್ಥಳದ ಅಗತ್ಯವಿದೆ. ಹೀಗಾಗಿಯೇ ದೇಗುಲ ನಿರ್ಮಾಣಕ್ಕೆ ಮುಂದಾದೆ” ಎಂದಿದ್ದಾರೆ.
ಶ್ರೀ-ಗಣೇಶ ಹಿಂದೂ ದೇವಾಲಯದ ನಿರ್ಮಾಣಕ್ಕಾಗಿ ಇವರು ಸ್ಥಾಪಿಸಿದ ಸಂಘವು 2004 ರಿಂದ ಸಕ್ರಿಯವಾಗಿದೆ. ಜಿಲ್ಲಾ ಪ್ರಾಧಿಕಾರವು ಕ್ರೂಜ್ಬರ್ಗ್, ನ್ಯೂಕೊಲ್ನ್ ಮತ್ತು ಟೆಂಪೆಲ್ಹಾಫ್ ಜಿಲ್ಲೆಗಳ ನಡುವೆ ಹ್ಯಾಸೆನ್ಹೈಡ್ ಉದ್ಯಾನವನದ ಅಂಚಿನಲ್ಲಿ ಸಂಘಕ್ಕೆ ದೇಗುಲ ನಿರ್ಮಾಣಕ್ಕಾಗಿ ಭೂಮಿಯನ್ನು ನೀಡಿತು. ಆ ಜಾಗದಲ್ಲಿ ಭವ್ಯ ಮಂದಿರ ತಲೆ ಎತ್ತುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.