ನವದೆಹಲಿ: ಚಂದ್ರಯಾನ-3 ಮಿಷನ್ ಮೂಲಕ ಚಂದ್ರನ ಮೇಲೆ ಇಳಿದಿರುವ ಪ್ರಗ್ಯಾನ್ ರೋವರ್, ವಿಕ್ರಮ್ ಲ್ಯಾಂಡರ್ ನಿದ್ರೆಗೆ ಜಾರುವ ಕಾಲ ಸನ್ನಿಹಿತವಾಗಿದೆ ಎಂದು ಇಸ್ರೋ ಮಾಹಿತಿ ನೀಡಿದೆ.
ಪ್ರಸ್ತುತ ಚಂದ್ರಯಾನ-3 ರ ರೋವರ್ ಮತ್ತು ಲ್ಯಾಂಡರ್ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ ಮತ್ತು ಚಂದ್ರನ ಬಗ್ಗೆ ಸಾಕಷ್ಟು ಮಾಹಿತಿಗಳನ್ನು ಕಳುಹಿಸಿಕೊಟ್ಟಿದೆ. ಚಂದ್ರನ ಮೇಲ್ಮೈ ವಾತಾವರಣದ ತಾಪಮಾನ, ಸಲ್ಫರ್ ಇರುವಿಕೆ, ಚಂದ್ರನೊಳಗಿನ ಕಂಪನಗಳು ಸೇರಿದಂತೆ ಹಲವು ವಿಚಾರಗಳ ಬಗ್ಗೆ ಬೆಳಕು ಚೆಲ್ಲಿದೆ.
ಆದರೆ ಚಂದ್ರನನ್ನು ರಾತ್ರಿ ಆವರಿಸುತ್ತಿರುವ ಹಿನ್ನೆಲೆಯಲ್ಲಿ ಇಸ್ರೋ ತನ್ನ ಪ್ರಗ್ಯಾನ್ ರೋವರ್ ಮತ್ತು ವಿಕ್ರಮ್ ಲ್ಯಾಂಡರ್ಗಳನ್ನು ಸ್ಲೀಪಿಂಗ್ ಮೋಡ್ನಲ್ಲಿ ಇಡಲು ಬೇಕಾದ ವ್ಯವಸ್ಥೆಯನ್ನು ಮಾಡಿಕೊಳ್ಳುತ್ತಿದೆ.
ಚಂದ್ರನಲ್ಲಿ ಒಂದು ರಾತ್ರಿ ಎಂದರೆ ಭೂಮಿಯ ಸುಮಾರು 14 ದಿನ. ಚಂದ್ರನಲ್ಲಿ ಇಷ್ಟು ದಿನ ಹಗಲು ಇದ್ದ ಕಾರಣ ರೋವರ್ ಮತ್ತು ಲ್ಯಾಂಡರ್ ತಮ್ಮ ಕಾರ್ಯವನ್ನು ನಿರ್ವಹಿಸಿವೆ. ಇದೀಗ ಚಂದ್ರನಲ್ಲಿ ರಾತ್ರಿಯಾಗುತ್ತಿದ್ದು, ಈ ವೇಳೆ ಚಂದ್ರನ ಮೇಲೆ ಸೂರ್ಯನ ಬೆಳಕು ಬೀಳುವುದಿಲ್ಲ. ಹೀಗಾಗಿ ಆ ಕತ್ತಲಲ್ಲಿ ಕೆಲಸ ಮಾಡುವುದು ಅಸಾಧ್ಯ. ಇದೇ ಕಾರಣಕ್ಕೆ ಇಸ್ರೋ ರೋವರ್ ಮತ್ತು ಲ್ಯಾಂಡರ್ ಗಳನ್ನು ನಿದ್ರೆಗೆ ಜಾರಿಸಲು ಮುಂದಾಗಿದೆ.
ಈ ಬಗ್ಗೆ ಸ್ವತಃ ಇಸ್ರೋ ಅಧ್ಯಕ್ಷ ಎಸ್ ಸೋಮನಾಥ್ ಶನಿವಾರ ಮಾಹಿತಿ ನೀಡಿದ್ದು, ಚಂದ್ರನ ಮೇಲಿನ ರಾತ್ರಿಯನ್ನು ತಡೆದುಕೊಳ್ಳಲು ಅವುಗಳನ್ನು ಶೀಘ್ರದಲ್ಲೇ ಸ್ಲೀಪಿಂಗ್ ಮೋಡ್ನಲ್ಲಿ ಇರಿಸಲಾಗುವುದು ಎಂದು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.