ಮಂಗಳೂರು: ಮಹದಾಯಿ ಮತ್ತು ಕಳಸಾ-ಬಂಡೂರಿ ಯೋಜನೆಯ ಅನುಷ್ಠಾನಕ್ಕೆ ಆಗ್ರಹಿಸಿ ರಾಜ್ಯಾದ್ಯಂತ ಶನಿವಾರ ವಿವಿಧ ಕನ್ನಡಪರ ಸಂಘಟನೆಗಳು ಬಂದ್ಗೆ ಕರೆ ನೀಡಿವೆ. ಕರ್ನಾಟಕದ ಹಲವು ಭಾಗಗಳಲ್ಲಿ ಬಂದ್ಗೆ ಉತ್ತಮ ಪ್ರತಿಕ್ರಿಯೆಗಳೂ ಲಭಿಸಿದೆ. ಆದರೆ ದಕ್ಷಿಣಕನ್ನಡದ ಜನತೆ ಮಾತ್ರ ಬಂದ್ನಿಂದ ದೂರ ಉಳಿದಿದ್ದಾರೆ.
ತುಳುನಾಡಿನಲ್ಲಿ ಜನಜೀವನ ಸಾಮಾನ್ಯವಾಗಿದ್ದು, ಶಾಲಾ-ಕಾಲೇಜುಗಳು, ಅಂಗಡಿ ಮುಂಗಟ್ಟುಗಳು ಎಂದಿನಂತೆ ಕಾರ್ಯನಿರ್ವಹಿಸುತ್ತಿವೆ. ಸರ್ಕಾರಿ ಮತ್ತು ಖಾಸಗಿ ಬಸ್ ಸಂಚಾರವೂ ಸಹಜವಾಗಿದೆ. ಹೋಟೆಲ್, ಉದ್ಯಮಗಳೂ ಸಹಜವಾಗಿ ನಡೆಯುತ್ತಿದೆ.
ಇಲ್ಲಿನ ಯಾವುದೇ ಸಂಘಟನೆಗಳು ಬಂದ್ ವಿರೋಧಿಸಿ ಅಥವಾ ಬಂದ್ ಬೆಂಬಲಿಸಿ ಹೇಳಿ ನೀಡಿಲ್ಲ, ಅಲ್ಲದೇ ಈ ಬಗ್ಗೆ ತಟಸ್ಥ ನಿಲುವನ್ನು ತಾಳಿದೆ.
ಇನ್ನೊಂದೆಡೆ ಬಂದ್ ಬೆಂಬಲಿಸದ್ದಕ್ಕೆ ತುಳುನಾಡಿನ ಜನತೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಕನ್ನಡಪರ ಚಳುವಳಿ ಹೋರಾಟಗಾರ ವಾಟಾಳ್ ನಾಗರಾಜ್, ನೀವು ಕರ್ನಾಟಕದಲ್ಲಿದ್ದೀರಾ, ಮರೆಯದಿರಿ ಎಂದು ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ.
ಎತ್ತಿನಹೊಳೆ ಯೋಜನೆಯನ್ನು ವಿರೋಧಿಸಿ ದಕ್ಷಿಣಕನ್ನಡ ನಡೆಸುತ್ತಿರುವ ಹೋರಾಟಕ್ಕೆ ಬೇರೆ ಜಿಲ್ಲೆಗಳು ಬೆಂಬಲ ನೀಡದ ಹಿನ್ನಲೆಯಲ್ಲಿ ಇಂದಿನ ಬಂದ್ಗೆ ಇಲ್ಲಿನ ಜನತೆ ಬೆಂಬಲವನ್ನು ವ್ಯಕ್ತಪಡಿಸಿಲ್ಲ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.