ನವದೆಹಲಿ: ಖ್ಯಾತ ನಟ ಆರ್.ಮಾಧವನ್ ಅವರು ಫಿಲ್ಮ್ ಅಂಡ್ ಟೆಲಿವಿಷನ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ (ಎಫ್ಟಿಐಐ)ದ ಹೊಸ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.
ಮಾಧವನ್ ಅವರು ತಮ್ಮ ಮೊಚ್ಚಲ ನಿರ್ದೇಶನದ “ರಾಕೆಟ್ರಿ: ದಿ ನಂಬಿ ಎಫೆಕ್ಟ್” ಸಿನಿಮಾಗಾಗಿ ರಾಷ್ಟ್ರೀಯ ಪ್ರಶಸ್ತಿಯನ್ನು ಗೆದ್ದ ನಂತರ ಅವರನ್ನು ಸೆಪ್ಟೆಂಬರ್ 1 ರಂದು ಫಿಲ್ಮ್ ಅಂಡ್ ಟೆಲಿವಿಷನ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ (ಎಫ್ಟಿಐಐ) ಹೊಸ ಅಧ್ಯಕ್ಷರಾಗಿ ನೇಮಿಸಲಾಯಿತು.
ಮಾಧವನ್ ಈಗ ಆಡಳಿತ ಮಂಡಳಿಯ ಅಧ್ಯಕ್ಷರೂ ಆಗಿದ್ದಾರೆ. ನಟ-ನಿರ್ದೇಶಕನಾಗಿರುವ ಅವರು ಚಲನಚಿತ್ರ ನಿರ್ಮಾಪಕ ಶೇಖರ್ ಕಪೂರ್ ಅವರ ಉತ್ತರಾಧಿಕಾರಿಯಾಗಿ ನೇಮಕವಾಗಿದ್ದಾರೆ. ಶೇಖರ್ ಕಪೂರ್ ಅಧಿಕಾರಾವಧಿಯು ಈ ವರ್ಷದ ಮಾರ್ಚ್ 3 ರಂದು ಕೊನೆಗೊಂಡಿತು.
ಎಫ್ಟಿಐಐ ರಿಜಿಸ್ಟ್ರಾರ್ ಸಯ್ಯದ್ ರಬೀಹಶ್ಮಿ ಹೇಳಿಕೆಯಲ್ಲಿ, “ಶ್ರೀ ಆರ್ ಮಾಧವನ್ ಅವರನ್ನು ಎಫ್ಟಿಐಐ ಸೊಸೈಟಿಯ ಅಧ್ಯಕ್ಷ ಮತ್ತು ಆಡಳಿತ ಮಂಡಳಿಯ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಈ ನಿರ್ಧಾರವನ್ನು ಸಚಿವಾಲಯವು ನಮಗೆ ಔಪಚಾರಿಕವಾಗಿ ತಿಳಿಸಿದೆ” ಎಂದಿದ್ದಾರೆ.
ಕೇಂದ್ರ ಸಚಿವ ಅನುರಾಗ್ ಠಾಕೂರ್ ಅವರು ಟ್ವಿಟರ್ ಮೂಲಕ ಆರ್.ಮಾಧವನ್ ಅವರಿಗೆ ಟ್ವಿಟ್ ಮಾಡಿ ಶುಭಕೋರಿದ್ದಾರೆ.
Thank you so very much for the honor and kind wishes @ianuragthakur Ji. I will do my very best to live up to all the expectations. 🙏🙏 https://t.co/OHCKDS9cqt
— Ranganathan Madhavan (@ActorMadhavan) September 1, 2023
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.