ಅಥೆನ್ಸ್: ಗ್ರೀಸ್ಗೆ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿಯವರಿಗೆ ಇಂದು ಗ್ರೀಕ್ ಅಧ್ಯಕ್ಷೆ ಕಟೆರಿನಾ ಎನ್. ಸಕೆಲ್ಲರೊಪೌಲೌ ಅವರು ಗ್ರ್ಯಾಂಡ್ ಕ್ರಾಸ್ ಆಫ್ ದಿ ಆರ್ಡರ್ ಆಫ್ ಆನರ್ ಪ್ರಶಸ್ತಿಯನ್ನು ನೀಡಿ ಗೌರವಿಸಿದರು.
ಗೌರವ ಸ್ವೀಕರಿಸಿದ ನಂತರ ಪ್ರಧಾನಿ ಮೋದಿ ಅವರು ಗ್ರೀಸ್ ಅಧ್ಯಕ್ಷರು ಮತ್ತು ಜನತೆಗೆ ಧನ್ಯವಾದ ಅರ್ಪಿಸಿದರು, ಇದು ಗ್ರೀಸ್ ಜನರು ಭಾರತದ ಬಗ್ಗೆ ಹೊಂದಿರುವ ಗೌರವವನ್ನು ತೋರಿಸುತ್ತದೆ ಎಂದು ಹೇಳಿದರು.
“ಗ್ರ್ಯಾಂಡ್ ಕ್ರಾಸ್ ಆಫ್ ಆನರ್ ಆಫ್ ಆನರ್ ಅನ್ನು ನನಗೆ ನೀಡಿದಕ್ಕಾಗಿ ನಾನು ಅಧ್ಯಕ್ಷೆ ಕಟೆರಿನಾ ಸಕೆಲ್ಲರೊಪೌಲೌ, ಸರ್ಕಾರ ಮತ್ತು ಗ್ರೀಸ್ ಜನರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಇದು ಗ್ರೀಸ್ನ ಜನರು ಭಾರತದ ಬಗ್ಗೆ ಹೊಂದಿರುವ ಗೌರವವನ್ನು ತೋರಿಸುತ್ತದೆ” ಎಂದಿದ್ದಾರೆ.
ದಕ್ಷಿಣಾ ಆಫ್ರಿಕಾದ ಪ್ರವಾಸ ಮುಗಿಸಿದ ಬಳಿಕ ಇಂದು ಮೋದಿ ಗ್ರೀಸ್ ರಾಜಧಾನಿ ಅಥೆನ್ಸ್ಗೆ ಆಗಮಿಸಿದರು. ಅಲ್ಲಿ ಅವರಿಗೆ ಅದ್ಧೂರಿಯಾದ ಸ್ವಾಗತವನ್ನು ನೀಡಲಾಯಿತು. ಭಾರತೀಯ ಸಮುದಾಯವೂ ಅವರನ್ನು ಆತ್ಮೀಯವಾಗಿ ಸ್ವಾಗತಿಸಿದೆ.
ಬರೋಬ್ಬರಿ 40 ವರ್ಷಗಳ ಬಳಿಕ ಭಾರತದ ಪ್ರಧಾನಿಯೊಬ್ಬರು ಗ್ರೀಸ್ಗೆ ಭೇಟಿ ನೀಡಿದ್ದಾರೆ.
#WATCH | PM Narendra Modi conferred with the Grand Cross of the Order of Honour by Greek President Katerina N. Sakellaropoulou in Athens pic.twitter.com/p3Opq0BMyZ
— ANI (@ANI) August 25, 2023
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.