ನವದೆಹಲಿ: ಭಾರತವು ಚಂದ್ರನ ಮೇಲ್ಮೈಯ ದಕ್ಷಿಣ ಧ್ರುವದಲ್ಲಿ ಐತಿಹಾಸಿಕವಾಗಿ ಇಳಿಯುವುದಕ್ಕೆ ಕ್ಷಣಗಣನೆ ಆರಂಭವಾಗಿದೆ. ಖ್ಯಾತ ಮರಳು ಕಲಾವಿದ ಸುದರ್ಶನ್ ಪಟ್ನಾಯಕ್ ಅವರು ಯುನೈಟೆಡ್ ಸ್ಟೇಟ್ಸ್ನ ಕೊಲೊರಾಡೋದ ಡೆನ್ವರ್ನಲ್ಲಿ ಚಂದ್ರಯಾನ-3 ರ ಮರಳಿನ ಶಿಲ್ಪವನ್ನು ರಚಿಸಿ “ಜೈ ಹೋ” ಸಂದೇಶ ಬರೆದಿದ್ದಾರೆ.
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ತನ್ನ ಮಹತ್ವಾಕಾಂಕ್ಷೆಯ ಚಂದ್ರನ ಕಾರ್ಯಾಚರಣೆಯ ಅಂತಿಮ ಗುರಿಯನ್ನು ಇದು ತಲುಪಲಿದೆ. ಈ ಬಗೆಗಿನ ಮರಳು ಶಿಲ್ಪವನ್ನು ರಚಿಸಲು ಪಟ್ನಾಯಕ್ ಅವರು ಸುಮಾರು 25 ಕಿಲೋ ಮರಳನ್ನು ಬಳಸಿದ್ದಾರೆ ಮತ್ತು ಅದನ್ನು ರಚಿಸಲು 45 ನಿಮಿಷಗಳನ್ನು ತೆಗೆದುಕೊಂಡಿದ್ದಾರೆ.
ತನ್ನ ಕಲಾಕೃತಿಯ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಅವರು, “ಜೈ ಹೋ! ಇಸ್ರೋ ಆಲ್ ದಿ ಬೆಸ್ಟ್! ಯುಎಸ್ಎಯ ಕೊಲೊರಾಡೋದ ಡೆನ್ವರ್ನಲ್ಲಿ ನಾನು ಮಾಡಿದ ಮರಳಿನ ಶಿಲ್ಪ. ಈ ಕಲೆಯನ್ನು ರಚಿಸಲು ನಾನು 45 ನಿಮಿಷಗಳಲ್ಲಿ 25 ಕೆಜಿ ಮರಳನ್ನು ಬಳಸಿದ್ದೇನೆ” ಎಂದಿದ್ದಾರೆ.
ಪಟ್ನಾಯಕ್ ಅವರು ಮಂಗಳವಾರ ಒಡಿಶಾದ ಕಡಲತೀರದಲ್ಲಿ ಚಂದ್ರಯಾನ-3 ಯಶಸ್ಸನ್ನು ಬಯಸಿ ತಮ್ಮ ವಿದ್ಯಾರ್ಥಿಗಳು ರಚಿಸಿದ ಮರಳು ಕಲೆಯ ಚಿತ್ರವನ್ನು ಹಂಚಿಕೊಂಡಿದ್ದರು. “ಆಲ್ ದಿ ಬೆಸ್ಟ್ ಚಂದ್ರಯಾನ-3. ನನ್ನ ವಿದ್ಯಾರ್ಥಿಗಳು ಒಡಿಶಾದ ಪುರಿ ಬೀಚ್ನಲ್ಲಿ ‘ಜೈ ಹೋ’ ಸಂದೇಶದೊಂದಿಗೆ ಚಂದ್ರಯಾನ-3 ನಲ್ಲಿ ಮರಳು ಕಲೆಯನ್ನು ರಚಿಸಿದ್ದಾರೆ ಎಂದು ಬರೆದುಕೊಂಡಿದ್ದರು.
Jai Ho 🇮🇳 @isro all the best!
My miniature sand sculpture at Denver, Colorado in the USA, with message “Jai Ho “ for wishing successful lunar landing of #Chandrayaan-3. I have used 25 KG sand in 45 minutes to create this art. pic.twitter.com/fsrgpNNPdt— Sudarsan Pattnaik (@sudarsansand) August 23, 2023
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.