ಇಸ್ಲಾಮಾಬಾದ್: ಪಾಕಿಸ್ಥಾನದ ಇಮ್ರಾನ್ ಖಾನ್ ಸರ್ಕಾರದ ಅವಧಿಯಲ್ಲಿ ಮಾಹಿತಿ ಮತ್ತು ಪ್ರಸಾರ ಸಚಿವರಾಗಿದ್ದ ಫವಾದ್ ಚೌಧರಿ ಅವರು ಭಾರತದ ಚಂದ್ರಯಾನ-3 ಅನ್ನು ಕೊಂಡಾಡಿದ್ದು, ಪಾಕಿಸ್ತಾನದ ಮಾಧ್ಯಮಗಳು ಚಂದ್ರಯಾನ-3 ಲ್ಯಾಂಡಿಂಗ್ ಕಾರ್ಯಕ್ರಮವನ್ನು ಪ್ರಸಾರ ಮಾಡಬೇಕು ಎಂದು ಸಲಹೆ ನೀಡಿದ್ದಾರೆ. ಮಹತ್ವದ ಮೈಲಿಗಲ್ಲಿಗಾಗಿ ಅವರು ಭಾರತೀಯ ವಿಜ್ಞಾನಿಗಳು ಮತ್ತು ಬಾಹ್ಯಾಕಾಶ ಸಮುದಾಯವನ್ನು ಅಭಿನಂದಿಸಿದ್ದು, ಈ ಮಿಷನ್ ಅನ್ನು “ಮನುಕುಲದ ಐತಿಹಾಸಿಕ ಕ್ಷಣ” ಎಂದು ಬಣ್ಣಿಸಿದ್ದಾರೆ.
ಮಂಗಳವಾರ ಟ್ವಿಟ್ ಮಾಡಿರುವ ಫವಾದ್ ಚೌಧರಿ, “ಪಾಕ್ ಮಾಧ್ಯಮಗಳು ನಾಳೆ ಸಂಜೆ 6:15 ಕ್ಕೆ ಚಂದ್ರಯಾನ್ ಚಂದ್ರನ ಲ್ಯಾಂಡಿಂಗ್ ಅನ್ನು ನೇರಪ್ರಸಾರ ಮಾಡಬೇಕು. ಮಾನವ ಕುಲಕ್ಕೆ ವಿಶೇಷವಾಗಿ ಜನರಿಗೆ, ವಿಜ್ಞಾನಿಗಳಿಗೆ ಇದು ಐತಿಹಾಸಿಕ ಕ್ಷಣ ಮತ್ತು ಭಾರತದ ಬಾಹ್ಯಾಕಾಶ ಸಮುದಾಯಕ್ಕೆ ಅನಂತ ಅಭಿನಂದನೆಗಳು” ಎಂದಿದ್ದಾರೆ.
ಈ ನಡುವೆ, ಚಂದ್ರಯಾನ-3 ಇಂದು ಸಂಜೆ ಚಂದ್ರನ ಮೇಲ್ಮೈಯಲ್ಲಿ ಇಳಿಯಲು ಸಿದ್ಧವಾಗುತ್ತಿದ್ದಂತೆ ಭಾರತದ ಕುತೂಹಲ, ನಿರೀಕ್ಷೆ ಹೆಚ್ಚಾಗಿದೆ. ಪ್ರಾರ್ಥನೆಗಳನ್ನು ನಡೆಸಲಾಗುತ್ತಿದೆ, ವಿಜ್ಞಾನಿಗಳು ಟಚ್ಡೌನ್ಗೆ ಮೊದಲ “20 ನಿಮಿಷಗಳು ಟೆರರ್” ಆಗಿರುತ್ತದೆ ಎಂದು ಭವಿಷ್ಯ ನುಡಿದಿದ್ದಾರೆ.
ಲ್ಯಾಂಡಿಂಗ್ ಸಂಜೆ 6.04 ಕ್ಕೆ – ದೇಶಾದ್ಯಂತ ನೇರ ಪ್ರಸಾರವಾಗಲಿದೆ. ಶಾಲೆಗಳನ್ನು ನೇರ ಪ್ರಸಾರ ವೀಕ್ಷಣೆಗಾಗಿ ತೆರೆಯಲಾಗುತ್ತದೆ ಮತ್ತು ಐತಿಹಾಸಿಕ ಕ್ಷಣದ ನಿರೀಕ್ಷೆಯಲ್ಲಿ ಬಾಹ್ಯಾಕಾಶ ಉತ್ಸಾಹಿಗಳು ಪಾರ್ಟಿಗಳನ್ನು ಆಯೋಜಿಸುತ್ತಿದ್ದಾರೆ. ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿರುವ ಬ್ರಿಕ್ಸ್ ಶೃಂಗಸಭೆಯಲ್ಲಿ ಪಾಲ್ಗೊಳ್ಳುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರು ಆನ್ಲೈನ್ನಲ್ಲಿ ನೇರಪ್ರಸಾರದಲ್ಲಿ ಸೇರಿಕೊಳ್ಳಲಿದ್ದಾರೆ.
Pak media should show #Chandrayan moon landing live tomorrow at 6:15 PM… historic moment for Human kind specially for the people, scientists and Space community of India…. Many Congratulations
— Ch Fawad Hussain (@fawadchaudhry) August 22, 2023
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.