ನವದೆಹಲಿ: ಬುಧವಾರದಂದು ಚಂದ್ರನ ಮೇಲೆ ಚಂದ್ರಯಾನ-3 ನೌಕೆಯ ಲ್ಯಾಂಡಿಂಗ್ ಆಗಲಿರುವ ಬಗ್ಗೆ ಭಾರತೀಯ-ಅಮೆರಿಕನ್ ಗಗನಯಾತ್ರಿ ಸುನೀತಾ ವಿಲಿಯಮ್ಸ್ ಅವರು ಉತ್ಸಾಹ ಮತ್ತು ನಿರೀಕ್ಷೆಯನ್ನು ವ್ಯಕ್ತಪಡಿಸಿದ್ದಾರೆ.
ಬಾಹ್ಯಾಕಾಶ ಯಾತ್ರೆಗೆ ನೀಡಿದ ಗಮನಾರ್ಹ ಕೊಡುಗೆಗಳಿಗೆ ಹೆಸರುವಾಸಿಯಾಗಿರುವ ವಿಲಿಯಮ್ಸ್, , ವೈಜ್ಞಾನಿಕ ಆವಿಷ್ಕಾರಗಳಿಗೆ ಮಹತ್ತರವಾದ ಭರವಸೆಯನ್ನು ಹೊಂದಿರುವ ಚಂದ್ರನ ದಕ್ಷಿಣ ಧ್ರುವದಲ್ಲಿ ಪ್ರಗ್ಯಾನ್ ರೋವರ್ನ ಪರಿಶೋಧನೆಗಾಗಿ ಕುತೂಹಲದಿಂದ ಎದುರು ನೋಡುತ್ತಿರುವುದಾಗಿ ಅವರು ಹೇಳಿದ್ದಾರೆ. ಅಲ್ಲದೇ ಬಾಹ್ಯಾಕಾಶ ಪರಿಶೋಧನೆಯ ಕ್ಷೇತ್ರವನ್ನು ರೂಪಿಸುವಲ್ಲಿ ಭಾರತದ ಗಣನೀಯ ಪಾತ್ರವನ್ನು ಅವರು ಶ್ಲಾಘಿಸಿದ್ದಾರೆ.
ನ್ಯಾಷನಲ್ ಜಿಯೋಗ್ರಾಫಿಕ್ ಇಂಡಿಯಾಗೆ ಪ್ರತಿಕ್ರಿಯೆ ನೀಡಿರುವ ಅವರು, ಚಂದ್ರನ ಪರಿಶೋಧನೆಯ ಪ್ರಾಮುಖ್ಯತೆಯನ್ನು ಒತ್ತಿಹೇಳಿದರು, ಇದು ಕೇವಲ ಜ್ಞಾನಕ್ಕಾಗಿ ಮಾತ್ರವಲ್ಲದೆ ನಮ್ಮ ಗ್ರಹದ ಆಚೆಗೆ ಸುಸ್ಥಿರ ಜೀವನಕ್ಕಾಗಿ ಇರುವ ಸಾಮರ್ಥ್ಯ ಹುಡುಕುಲೂ ಮಹತ್ವದ್ದಾಗಿದೆ ಎಂದರು.
“ಚಂದ್ರನ ಮೇಲೆ ಇಳಿಯುವುದರಿಂದ ನಮಗೆ ಅಮೂಲ್ಯವಾದ ಜ್ಞಾನಗಳು ಮತ್ತು ಮಾಹಿತಿಗಳು ದೊರಕುತ್ತವೆ. ಭಾರತವು ಬಾಹ್ಯಾಕಾಶ ಪರಿಶೋಧನೆ ಮತ್ತು ಚಂದ್ರನ ಮೇಲೆ ಸುಸ್ಥಿರ ಜೀವನದ ಹುಡುಕಾಟದಲ್ಲಿ ಮುಂಚೂಣಿಯಲ್ಲಿದೆ ಎಂಬ ಕಾರಣಕ್ಕೆ ನಾನು ನಿಜವಾಗಿಯೂ ರೋಮಾಂಚನಗೊಂಡಿದ್ದೇನೆ” ಎಂದು ವಿಲಿಯಮ್ಸ್ ಹೇಳಿದ್ದಾರೆ.
ಮಿಷನ್ನ ಫಲಿತಾಂಶಗಳಿಗಾಗಿ ತನ್ನ ನಿರೀಕ್ಷೆಯ ಕುರಿತು ಮಾತನಾಡಿದ ಅವರು, ಚಂದ್ರಯಾನ-3 ರ ಲ್ಯಾಂಡಿಂಗ್ ಮತ್ತು ರೋವರ್ನ ಚಟುವಟಿಕೆಗಳಿಂದ ಉಂಟಾಗುವ ವೈಜ್ಞಾನಿಕ ಸಂಶೋಧನೆ ಬಗ್ಗೆ ಉತ್ಸಾಹವನ್ನು ವ್ಯಕ್ತಪಡಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.