ಕಾಬೂಲ್: ತಾಲಿಬಾನ್ ಅಧಿಕಾರ ವಹಿಸಿಕೊಂಡ ನಂತರ ಅಫ್ಘಾನಿಸ್ತಾನದ ಮಾಜಿ ಮಿಲಿಟರಿ, ಕಾನೂನು ಜಾರಿ ಸಂಸ್ಥೆ ಮತ್ತು ಸರ್ಕಾರದ 200 ಕ್ಕೂ ಹೆಚ್ಚು ಸದಸ್ಯರು ಕೊಲ್ಲಲ್ಪಟ್ಟಿದ್ದಾರೆ ಎಂದು ಅಫ್ಘಾನಿಸ್ತಾನದ ಯುಎನ್ ಮಿಷನ್ ಮಂಗಳವಾರ ಹೇಳಿದೆ. ಹಳೆಯ ಶತ್ರುಗಳಿಗೆ “ಸಾಮಾನ್ಯ ಕ್ಷಮಾದಾನ” ನೀಡುತ್ತೇವೆ ಎಂದು ತಾಲಿಬಾನ್ ಘೋಷಿಸಿದ ಹೊರತಾಗಿಯೂ ಇಂತಹ ಘಟನೆ ನಡೆದಿದೆ.
2021 ರ ಮಧ್ಯದಲ್ಲಿ ಅಫ್ಘಾನಿಸ್ತಾನವನ್ನು ಸ್ವಾಧೀನಪಡಿಸಿಕೊಂಡಾಗಿನಿಂದ ಜೂನ್ ವರೆಗೆ ಕನಿಷ್ಠ 218 ಕಾನೂನುಬಾಹಿರ ಹತ್ಯೆಗಳನ್ನು ದಾಖಲಿಸಲಾಗಿದೆ ಎಂದು ಮಿಷನ್ ವರದಿಯಲ್ಲಿ ತಿಳಿಸಿದೆ. ಕೊಲೆಯಾದ ಹೆಚ್ಚಿನವರು ಭದ್ರತಾ ಪಡೆಗಳಿಗೆ ಸೇರಿದ್ದವರು, ಇವರನ್ನು ಕೊಲೆ ಮಾಡುವ ಮುನ್ನ ಬಂಧನಕ್ಕೆ ಒಳಪಡಿಸಲಾಗಿದೆ ಪಡೆಗಳು” ಎಂದು ಅಫ್ಘಾನಿಸ್ತಾನದಲ್ಲಿನ ಯುಎನ್ ಸಹಾಯ ಮಿಷನ್ (UNAMA) ಹೇಳಿದೆ.
ತಮ್ಮ ಸರ್ವೋಚ್ಚ ನಾಯಕನ ಆದೇಶದ ಮೇರೆಗೆ ಮಾಜಿ ಸರ್ಕಾರಿ ಅಧಿಕಾರಿಗಳು ಮತ್ತು ಮಿಲಿಟರಿ ಸದಸ್ಯರಿಗೆ ಕ್ಷಮಾದಾನ ನೀಡಲಾಗುತ್ತದೆ ಎಂದು ಹಿರಿಯ ತಾಲಿಬಾನ್ ನಾಯಕರು ಹೇಳಿದ್ದಾರೆ. UNAMA ವರದಿಗೆ ಪ್ರತಿಕ್ರಿಯೆ ನೀಡಿರುವ ತಾಲಿಬಾನ್ ವಕ್ತಾರರು, ಆದೇಶವನ್ನು ಅನುಸರಿಸದೆ ಕೊಲೆ ನಡೆಸಿದ ಯಾವುದೇ ಪ್ರಕರಣಗಳ ವರದಿಗಳನ್ನು ನಾವು ಸ್ವೀಕರಿಸಿಲ್ಲ ಮತ್ತು ಸಂಭವಿಸಿದ ಪ್ರಕರಣಗಳನ್ನು ತನಿಖೆ ಮಾಡಲಾಗುವುದು ಎಂದು ಹೇಳಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.