ಶ್ರೀನಗರ: ಜಮ್ಮು-ಕಾಶ್ಮೀರದ ಶ್ರೀನಗರದಲ್ಲಿನ ಇಂದಿರಾ ಗಾಂಧಿ ಮೆಮೋರಿಯಲ್ ಟುಲಿಪ್ ಗಾರ್ಡನ್ 1.5 ಮಿಲಿಯನ್ ಹೂವುಗಳನ್ನು ಹೊಂದುವ ಮೂಲಕ ಏಷ್ಯಾದ ಅತಿದೊಡ್ಡ ಉದ್ಯಾನವನವಾಗಿ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ (ಯುಕೆ) ಪುಟಕ್ಕೆ ಸೇರಿದೆ.
ಉದ್ಯಾನದಲ್ಲಿನ 68 ವಿಶಿಷ್ಟವಾದ ಟುಲಿಪ್ ಪ್ರಭೇದಗಳು ಅದ್ಭುತ ನೋಟವನ್ನು ನೀಡುತ್ತಿದ್ದು, ಜಬರ್ವಾನ್ ಶ್ರೇಣಿಯ ರಮಣೀಯ ತಪ್ಪಲಿನಲ್ಲಿ ನೆಲೆಸಿರುವ ಈ ಉದ್ಯಾನದ ಸೌಂದರ್ಯಕ್ಕೆ ಪ್ರವಾಸಿಗರು ಮನಸೋಲುತ್ತಿದ್ದಾರೆ.
ಶನಿವಾರ ಉದ್ಯಾನದಲ್ಲಿ ಜಮ್ಮು ಮತ್ತು ಕಾಶ್ಮೀರ ಆಡಳಿತದ ಕಾರ್ಯದರ್ಶಿ (ಹೂಗಾರಿಕೆ, ಉದ್ಯಾನಗಳು ಮತ್ತು ಉದ್ಯಾನವನಗಳು) ಫಯಾಜ್ ಶೇಖ್ ಅವರನ್ನು ವರ್ಲ್ಡ್ ಬುಕ್ ಅಧ್ಯಕ್ಷ ಮತ್ತು ಸಿಇಒ ಸಂತೋಷ್ ಶುಕ್ಲಾ ಅವರು ಪ್ರಮಾಣಪತ್ರ ನೀಡಿ ಗೌರವಿಸಿದರು. ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ ಸಂಪಾದಕ ದಿಲೀಪ್ ಎನ್ ಪಂಡಿತ್, ಜಮ್ಮು ಮತ್ತು ಕಾಶ್ಮೀರ ಹೂಗಾರಿಕಾ ನಿರ್ದೇಶಕರು, ಇತರ ಅಧಿಕಾರಿಗಳು ಮತ್ತು ಉದ್ಯಾನ ಸಿಬ್ಬಂದಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಈ ಉದ್ಯಾನವನ್ನು 2006 ರಲ್ಲಿ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಗುಲಾಂ ನಬಿ ಆಜಾದ್ ಅವರು ಕಲ್ಪಿಸಿದರು ಮತ್ತು ನೂರಾರು ಕಾರ್ಮಿಕರು ಮತ್ತು ತೋಟಗಾರರ ಶ್ರಮದೊಂದಿಗೆ ಇದನ್ನು ನಿರ್ಮಿಸಲಾಯಿತು, ಎರಡು ವರ್ಷಗಳಿಗಿಂತ ಕಡಿಮೆ ಅವಧಿಯಲ್ಲಿ ಉದ್ಯಾನವನದ ಕಾಮಗಾರಿಯನ್ನು ಪೂರ್ಣಗೊಳಿಸಲಾಯಿತು.
ತಮ್ಮ ಭಾಷಣದಲ್ಲಿ, ಕಾರ್ಯದರ್ಶಿ ಶೇಖ್ ಅವರು ಉದ್ಯಾನದ ಭವ್ಯತೆಯನ್ನು ಗುರುತಿಸಿದ್ದಕ್ಕಾಗಿ ವರ್ಲ್ಡ್ ಬುಕ್ ತಂಡಕ್ಕೆ ಕೃತಜ್ಞತೆಯನ್ನು ವ್ಯಕ್ತಪಡಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.