ನವದೆಹಲಿ: ಇಸ್ರೋದ ಚಂದ್ರಯಾನ – 3 ನೌಕೆ ಚಂದ್ರನ ಅದ್ಭುತವಾದ ಫೋಟೋವನ್ನು ಕಳುಹಿಸಿಕೊಟ್ಟಿದೆ. ಇಸ್ರೋ ತನ್ನ ಟ್ವಿಟರ್ ಹ್ಯಾಂಡಲ್ನಲ್ಲಿ ವಿಕ್ರಮ್ ಲ್ಯಾಂಡರ್ ಸೆರೆ ಹಿಡಿದಿರುವ ಚಂದ್ರನ ಮೇಲ್ಮೈಯ ಹೊಸ ವೀಡಿಯೊವನ್ನು ಬಿಡುಗಡೆ ಮಾಡಿದೆ. ವಿಕ್ರಮ್ ಲ್ಯಾಂಡರ್ನಲ್ಲಿ ಅಳವಡಿಸಿರುವ ಲ್ಯಾಂಡರ್ ಪೊಸಿಷನ್ ಡಿಟೆಕ್ಷನ್ ಕ್ಯಾಮೆರಾ(LPDC) ಈ ವೀಡಿಯೊವನ್ನು ಸೆರೆಹಿಡಿದಿದೆ.
ಚಿತ್ರಗಳಲ್ಲಿ ಚಂದ್ರನ ಮೇಲ್ಮೈನ ಕುಳಿಗಳಾದ ಅರಿಸ್ಟಾರ್ಕಸ್, ಎಡಿಂಗ್ಟನ್ ಮತ್ತು ಪೈಥಾಗರಸ್ ಸೆರೆಯಾಗಿದೆ. ಅಲ್ಲದೇ ಚಂದ್ರನ ಮೇಲಿರುವ ಕಪ್ಪು ಬಯಲು ಪ್ರದೇಶ ಓಷಿಯನಸ್ ಪ್ರೋಸೆಲ್ಲಾರಮ್ ಪ್ರದೇಶ ಕೂಡ ಸ್ಪಷ್ಟವಾಗಿ ಕಾಣಿಸುತ್ತದೆ. ಹಂಚಿಕೊಳ್ಳಲಾದ ಫೋಟೋಗಳಲ್ಲಿ ಜುಲೈ 14ರಂದು ತೆಗೆಯಲಾದ ಭೂಮಿಯ ಚಿತ್ರವೂ ಸೇರಿದೆ.
ವಿಕ್ರಮ್ ಲ್ಯಾಂಡರ್ನ ಕೆಳಭಾಗದಲ್ಲಿ LPDC ಅಳವಡಿಸಲಾಗಿದೆ. ವಿಕ್ರಮ್ ತನಗಾಗಿ ಸರಿಯಾದ ಮತ್ತು ಸಮತಟ್ಟಾದ ಲ್ಯಾಂಡಿಂಗ್ ಸ್ಥಳವನ್ನು ಕಂಡುಕೊಳ್ಳಲು ಇದನ್ನು ಸ್ಥಾಪಿಸಲಾಗಿದೆ. ಈ ಕ್ಯಾಮೆರಾದ ಸಹಾಯದಿಂದ ವಿಕ್ರಮ್ ಲ್ಯಾಂಡರ್ ಯಾವುದೇ ಉಬ್ಬು ಪ್ರದೇಶಕ್ಕೆ ಇಳಿಯುತ್ತಿಲ್ಲ ಎಂಬುದನ್ನು ನೋಡಬಹುದು.
ಲ್ಯಾಂಡಿಂಗ್ಗೂ ಮೊದಲು ಈ ಕ್ಯಾಮೆರಾವನ್ನು ಮತ್ತೆ ಆನ್ ಮಾಡಬಹುದು. ಏಕೆಂದರೆ ಈಗ ಬಂದಿರುವ ಚಿತ್ರವನ್ನು ನೋಡಿದರೆ ಈ ಕ್ಯಾಮೆರಾವನ್ನು ಪ್ರಯೋಗಕ್ಕಾಗಿ ಆನ್ ಮಾಡಲಾಗಿದೆ ಎಂದು ತೋರುತ್ತದೆ. ಇದರಿಂದ ಅದು ಎಷ್ಟು ಚೆನ್ನಾಗಿ ಕೆಲಸ ಮಾಡುತ್ತಿದೆ ಎಂಬುದನ್ನು ಚಿತ್ರಗಳು ಅಥವಾ ವೀಡಿಯೊಗಳಿಂದ ತಿಳಿಯಬಹುದು. ಈ ಸಂವೇದಕವನ್ನು ಚಂದ್ರಯಾನ-2 ರಲ್ಲೂ ಬಳಸಲಾಗಿತ್ತು.
Chandrayaan-3 Mission:
🌎 viewed by
Lander Imager (LI) Camera
on the day of the launch
&
🌖 imaged by
Lander Horizontal Velocity Camera (LHVC)
a day after the Lunar Orbit InsertionLI & LHV cameras are developed by SAC & LEOS, respectively https://t.co/tKlKjieQJS… pic.twitter.com/6QISmdsdRS
— ISRO (@isro) August 10, 2023
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.