ನವದೆಹಲಿ: ಹವಾಮಾನ ಬದಲಾವಣೆ ಮತ್ತು ಜಾಗತಿಕ ತಾಪಮಾನದ ವಿರುದ್ಧದ ಹೋರಾಟದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಭಾರತವು ವಿಶ್ವ ನಾಯಕನಾಗಿ ಹೊರಹೊಮ್ಮಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಇಂದು ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದಲ್ಲಿರುವ ಸೆಂಟ್ರಲ್ ರಿಸರ್ವ್ ಪೊಲೀಸ್ ಫೋರ್ಸ್ (ಸಿಆರ್ಪಿಎಫ್) ಗ್ರೂಪ್ ಸೆಂಟರ್ನಲ್ಲಿ ನಾಲ್ಕು ಕೋಟಿ ಸಸಿಗಳ ಪೈಕಿ ಕೊನೆ ಸಸಿಯನ್ನು ನೆಟ್ಟ ನಂತರ ಸಭೆಯನ್ನುದ್ದೇಶಿಸಿ ಮಾತನಾಡಿದ ಶಾ, ಗಿಡ ನೆಡುವ ಅಭಿಯಾನ, ಪರಿಸರ ಸವಾಲುಗಳನ್ನು ಎದುರಿಸಲು ವಿವಿಧ ಹಸಿರು ಉಪಕ್ರಮಗಳು ಜಾಗತಿಕ ತಾಪಮಾನ ಮತ್ತು ಇಂಗಾಲದ ಹೊರಸೂಸುವಿಕೆಯ ಪರಿಣಾಮವನ್ನು ತಗ್ಗಿಸಲು ಸಹಾಯ ಮಾಡುತ್ತದೆ ಎಂದು ಹೇಳಿದರು.
ಪ್ರಧಾನಿ ಮೋದಿಯವರು ಆರಂಭಿಸಿದ ಮಿಷನ್ ಲೈಫ್ ವಿಶ್ವದಲ್ಲಿ ಅನುರಣಿಸುತ್ತಿವೆ ಎಂದ ಅಮಿತ್ ಶಾ, ಇದು ಜಾಗರೂಕ ಸಮಾಜದ ಸಂದೇಶವನ್ನು ನೀಡುತ್ತದೆ ಎಂದರು.
ಈ ಗಿಡ ನೆಡುವ ಅಭಿಯಾನಕ್ಕಾಗಿ ಅವರು ಕೇಂದ್ರ ಸಶಸ್ತ್ರ ಪಡೆಗಳನ್ನು ಶ್ಲಾಘಿಸಿದರು. ಇಂದು ಮೂರು ವರ್ಷಗಳ ಅವಧಿಯಲ್ಲಿ 4 ಕೋಟಿಯ ಪೈಕಿ ಕೊನೆ ಸಸಿ ನೆಡುವ ಮೂಲಕ ದಾಖಲೆಯನ್ನು ರಚಿಸಲಾಗಿದೆ ಎಂದು ಹೇಳಿದರು. ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳು ಗಡಿಗಳನ್ನು ರಕ್ಷಿಸಲು ಮಾತ್ರವಲ್ಲದೆ ಪರಿಸರವನ್ನು ಸಂರಕ್ಷಿಸಲು ತಮ್ಮ ಸಮರ್ಪಣೆಯನ್ನು ತೋರಿಸಿವೆ ಎಂದು ಗೃಹ ಸಚಿವರು ಹೇಳಿದರು.
ಈ ಪ್ಲಾಂಟೇಶನ್ ಡ್ರೈವ್ನಲ್ಲಿ ಭಾಗವಹಿಸಿದ ಅರೆಸೈನಿಕ ಪಡೆಗಳ ಕುಟುಂಬಗಳನ್ನು ಶಾ ಅಭಿನಂದಿಸಿದರು. ಈ ಸಂದರ್ಭದಲ್ಲಿ ಗೃಹ ಸಚಿವರು ಸಿಆರ್ಪಿಎಫ್ನ ಎಂಟು ವಿವಿಧ ಕ್ಯಾಂಪಸ್ಗಳಲ್ಲಿ ಹೊಸದಾಗಿ ನಿರ್ಮಿಸಲಾದ ವಿವಿಧ ರೀತಿಯ 15 ಕಟ್ಟಡಗಳನ್ನು ಉದ್ಘಾಟಿಸಿದರು.
2020 ರ ಜುಲೈ 12 ರಂದು ಶ್ರೀ ಷಾ ಅವರು ದೇಶದಾದ್ಯಂತ ಪ್ಲಾಂಟೇಶನ್ ಡ್ರೈವ್ ಅನ್ನು ಪ್ರಾರಂಭಿಸಿದರು. CAPF ಗಳು 2020 ರಿಂದ 2022 ರ ಮೂರು ವರ್ಷಗಳ ಅವಧಿಯಲ್ಲಿ ರಾಷ್ಟ್ರದಾದ್ಯಂತ 3.55 ಕೋಟಿಗೂ ಹೆಚ್ಚು ಸಸಿಗಳನ್ನು ನೆಟ್ಟಿವೆ.
ಈ ವರ್ಷ ಎಲ್ಲಾ ಕೇಂದ್ರೀಯ ಮೀಸಲು ಪೊಲೀಸ್ ಪಡೆಗಳಿಂದ 1.5 ಕೋಟಿ ಸಸಿಗಳನ್ನು ನೆಡುವ ಸಾಮೂಹಿಕ ಗುರಿಯನ್ನು ತಲುಪಿವೆ. ಒಟ್ಟು ಸಸಿ ನೆಡುವಿಕೆಯನ್ನು ಐದು ಕೋಟಿಗೆ ಕೊಂಡೊಯ್ಯುವುದು ರಾಷ್ಟ್ರದ ಒಟ್ಟಾರೆ ಪರಿಸರ ಸಂರಕ್ಷಣಾ ಪ್ರಯತ್ನಗಳಿಗೆ CAPF ಗಳ ಕೊಡುಗೆಯಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.