ನ್ಯೂಯಾರ್ಕ್: ಭಾರತದ ಒಡಿಶಾ ರಾಜ್ಯದಲ್ಲಿರುವ ಕೋನಾರ್ಕ್ ಸೂರ್ಯ ದೇವಾಲಯದಿಂದ ಸ್ಫೂರ್ತಿ ಪಡೆದ ಅದ್ಭುತವಾದ ಕಲ್ಲಿನ ಕಲೆಯನ್ನು ನ್ಯೂಯಾರ್ಕ್ನ ಟೈಮ್ಸ್ ಸ್ಕ್ವೇರ್ ಬಳಿ ಅನಾವರಣಗೊಳಿಸಲಾಗಿದೆ. ಭಾರತದ 77 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಗುರುತಿಸಿ ಮಂಗಳವಾರ ಭಾರತೀಯ ಪ್ರಸಿದ್ಧ ಬಾಣಸಿಗ ವಿಕಾಸ್ ಖನ್ನಾ ಅವರು ಮರಳುಗಲ್ಲಿನಿಂದ ಮಾಡಿದ ಕಲಾಕೃತಿಯನ್ನು ಅನಾವರಣಗೊಳಿಸಿದರು.
ಕಲಾಕೃತಿಯು ಕೋನಾರ್ಕ್ ಸೂರ್ಯ ದೇವಾಲಯದ 24 ಚಕ್ರಗಳನ್ನು ಹೊಂದಿದ್ದು, ಶ್ರೀಮಂತ ಭಾರತೀಯ ಪರಂಪರೆಯ ಒಂದು ನೋಟವನ್ನು ನೀಡುತ್ತದೆ ಮತ್ತು ದೇವಾಲಯದ ವಾಸ್ತುಶಿಲ್ಪದ ಕಲ್ಪನೆಯನ್ನು ಪಡೆಯಲು ಅಮೆರಿಕನ್ನರಿಗೆ ಅವಕಾಶ ನೀಡುತ್ತದೆ. ಕೋನಾರ್ಕ್ ದೇವಾಲಯದಿಂದ ಸ್ಫೂರ್ತಿ ಪಡೆದ ಈ ಭವ್ಯವಾದ ಕಲ್ಲಿನ ಕಲೆ ಆಗಸ್ಟ್ 22 ರವರೆಗೆ ಪ್ರದರ್ಶಿಸಲಾಗುತ್ತದೆ. ಒಡಿಶಾದ ಅದ್ಭುತ ಕಲಾವಿದರ ಪ್ರತಿಭೆ ನೋಡಲು ದಯವಿಟ್ಟು ನಿಮ್ಮ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಟೈಮ್ಸ್ ಸ್ಕ್ವೇರ್ಗೆ ಭೇಟಿ ನೀಡಿ ಎಂದು ಖನ್ನಾ ಮನವಿ ಮಾಡಿದ್ದಾರೆ.
ಮಾಧ್ಯಮ ವರದಿಗಳ ಪ್ರಕಾರ, ಈ ಪ್ರತಿಕೃತಿಯನ್ನು ಮಂಗಳವಾರ ಆಗಸ್ಟ್ 22 ರವರೆಗೆ ಟೈಮ್ಸ್ ಸ್ಕ್ವೇರ್ನಲ್ಲಿ ಪ್ರದರ್ಶಿಸಲಾಗುತ್ತದೆ. ಈ ಕಲಾಕೃತಿಯನ್ನು ನಂತರ 2024 ರಲ್ಲಿ ನ್ಯೂಯಾರ್ಕ್ ನಗರದಲ್ಲಿ ತನ್ನ ಮುಂಬರುವ ಪ್ರಮುಖ ರೆಸ್ಟೋರೆಂಟ್ನಲ್ಲಿ ಸ್ಥಾಪಿಸಲು ಖನ್ನಾ ಮುಂದಾಗಿದ್ದಾರೆ.
Congratulate entrepreneur & celebrity chef @TheVikasKhanna on unveiling a replica of #KonarkTemple wheel at Times Square, New York on the occasion of India’s 77th #IndependenceDay. Thank Mr Khanna for showcasing #Odisha’s timeless sculpture before the world and appreciate the… pic.twitter.com/j4KxJlp8f4
— Naveen Patnaik (@Naveen_Odisha) August 16, 2023
This majestic Stone Art inspired by The Konark Temple will be displayed until Tuesday, Aug 22nd. (44th & Broadway) Please visit Times Square with your friends & family to fall in love with Odisha’s brilliant artists. ❤️
Afterwards it will be installed at my upcoming flagship… pic.twitter.com/aAa6MJ4dOA
— Vikas Khanna (@TheVikasKhanna) August 16, 2023
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.