ಬೆಂಗಳೂರು: ಅಟಲ್ ಬಿಹಾರಿ ವಾಜಪೇಯಿ ಅವರು ಬಿಜೆಪಿಗೆ ಮುಕುಟಪ್ರಾಯರು ಮತ್ತು ಪಕ್ಷಕ್ಕೊಂದು ಇಮೇಜ್ ನೀಡಿದವರು ಎಂದು ಬಿಜೆಪಿ ರಾಜ್ಯ ಮುಖ್ಯ ವಕ್ತಾರ ಎಂ.ಜಿ.ಮಹೇಶ್ ಅವರು ವಿಶ್ಲೇಷಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಬಿಜೆಪಿಯ ಹಿರಿಯ ನಾಯಕರಾಗಿದ್ದ ಮಾಜಿ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಅವರ ಪುಣ್ಯತಿಥಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಅಟಲ್ಜಿ ಅವರು ಸೋತ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಒಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಭದ್ರಾವತಿಯ ಕಾರ್ಯಕರ್ತರೊಬ್ಬರು ಆಗ ಆತ್ಮಹತ್ಯೆ ಮಾಡಿಕೊಂಡಿದ್ದರು. ನಾವು ಸೋತಿದ್ದೇವೆಂದು ಹಿಂಜರಿಕೆ ಬೇಡ ಎಂದು ಅಟಲ್ಜಿ ಆಗ ಹೇಳಿದ್ದರು. ಆ ಮಾತುಗಳು ಕರ್ನಾಟಕದ ರಾಜಕಾರಣಕ್ಕೆ ಇಂದಿಗೂ ಪ್ರಸ್ತುತ ಎಂದು ವಿವರಿಸಿದರು.
ಸೋತರೂ ನಾವು ಬೆನ್ನುತಿರುಗಿಸಿ ಹೋಗುವುದಿಲ್ಲ ಎಂದು ಅವರು ನುಡಿದಿದ್ದರು ಎಂದರಲ್ಲದೆ, ದೇಶದ, ಚೆನ್ನಾಗಿರುವ ಧರ್ಮದ ಕಾರ್ಯದಲ್ಲಿ ನಾವೆಲ್ಲರೂ ನಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ತಿಳಿಸಿದರು. ಅಟಲ್ಜಿ ಅವರ ಗುಣಗಳನ್ನು ನಾವು ನಮ್ಮಲ್ಲಿ ಅಳವಡಿಸಿಕೊಳ್ಳೋಣ ಎಂದು ತಿಳಿಸಿದರು.
ಸಣ್ಣ ಮಗುವಿನಂತ ವ್ಯಕ್ತಿತ್ವ, ಪ್ರೀತಿಯ ಗುಣ ಅವರದು. ‘ಹೇ ಭಗವಂತ ನನ್ನನ್ನು ಬಹು ಎತ್ತರಕ್ಕೆ ಬೆಳೆಸದಿರು. ಯಾರ ಕಣ್ಣೀರನ್ನೂ ಒರೆಸದಂಥ ರಾಜಕಾರಣಿ ನಾನಾನುಗುವುದು ಬೇಡ’ ಎಂಬ ಆಶಯವನ್ನು ಅವರು ಸದಾಕಾಲ ಹೊಂದಿದ್ದರು ಎಂದು ನುಡಿದರು.
ಅಟಲ್ ಬಿಹಾರಿ ವಾಜಪೇಯಿ ಅವರ ಕುರಿತು ಬಿಜೆಪಿ ಕಾರ್ಯಕರ್ತರು ಸದಾ ತಮ್ಮ ಹೃದಯದಲ್ಲಿ ಭಕ್ತಿಯ ದೀಪದಾರತಿ ಎತ್ತುತ್ತಾರೆ ಎಂದ ಅವರು, ಅಟಲ್ಜಿ ಅವರ ಜೊತೆ ಓಡಾಟ ಮಾಡುವ ಅನೇಕ ಅವಕಾಶಗಳು ನನಗೆ ಲಭಿಸಿದ್ದವು ಎಂದು ನೆನಪಿಸಿಕೊಂಡÀರು. ಅಟಲ್ಜಿ ಅವರ ಭಾಷಣವನ್ನೂ ಹತ್ತಾರು ಬಾರಿ ತರ್ಜುಮೆ ಮಾಡುವ ನನಗೆ ಸಿಕ್ಕಿದೆ ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.