ಸಿಡ್ನಿ: ಪ್ರಪಂಚದಾದ್ಯಂತದ ಭಾರತೀಯರು ಭಾರತದ 77 ನೇ ಸ್ವಾತಂತ್ರ್ಯ ದಿನವನ್ನು ಸಂಭ್ರಮದಿಂದ ಆಚರಿಸುತ್ತಿರುವ ಸಮಯದಲ್ಲಿ, ಕೆಲವು ಖಲಿಸ್ತಾನಿ ಪ್ರತ್ಯೇಕತಾವಾದಿಗಳು ಸಂಭ್ರಮಕ್ಕೆ ಅಡ್ಡಿಪಡಿಲು ಮುಂದಾಗಿದ್ದರು, ಆದರೆ ಇವರಿಗೆ ದೇಸಿ ಶೈಲಿಯಲ್ಲೇ ಭಾರತೀಯರು ಉತ್ತರಿಸಿದ್ದಾರೆ.
ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಭಾರತೀಯ ಸಮುದಾಯದ ಸ್ವಾತಂತ್ರ್ಯ ದಿನಾಚರಣೆಗೆ ಅಡ್ಡಿಪಡಿಸಲು ಮುಂದಾದ ಖಲಿಸ್ಥಾನಿಗಳಿಗೆ ‘ಗಲಿ ಗಲಿ ಮೇ ಶೋರ್ ಹೈ, ಖಲಿಸ್ತಾನಿ ಚೋರ್ ಹೇ’ ಎಂಬ ಘೋಷಣೆಗಳನ್ನು ಕೂಗಿ ಭಾರತೀಯರು ಪ್ರತ್ಯುತ್ತರ ನೀಡಿದ್ದಾರೆ.
ಈ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ. ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಭಾರತೀಯರು ಆಯೋಜಿಸಿದ್ದ ಕಾರ್ಯಕ್ರಮದ ಎದುರು ಬದಿಯ ರಸ್ತೆಯಲ್ಲಿ ಖಲಿಸ್ತಾನಿ ಬೆಂಬಲಿಗರು ಜಮಾಯಿಸಿರುವುದನ್ನು ವೀಡಿಯೊದಲ್ಲಿ ಕಾಣಬಹುದು. ಭಾರತೀಯರು ಪ್ರತ್ಯೇಕತಾವಾದಿ ಗುಂಪಿನ ವಿರುದ್ಧ ಘೋಷಣೆಗಳನ್ನು ಕೂಗಿ ಅವರನ್ನು ಹಿಮ್ಮೆಟ್ಟಿಸಿದ್ದಾರೆ.
ಭಾರತೀಯರ ಘೋಷಣೆಗಳನ್ನು ಕೇಳಿದ ಖಲಿಸ್ತಾನಿಯೊಬ್ಬ ರಸ್ತೆಗಿಳಿದು ಕಾರ್ಯಕ್ರಮದತ್ತ ನುಗ್ಗಲು ಪ್ರಯತ್ನಿಸಿದಾಗ ಪೊಲೀಸರು ಮಧ್ಯಪ್ರವೇಶಿಸಿ ಖಲಿಸ್ತಾನಿ ಬೆಂಬಲಿಗನನ್ನು ಹಿಂದೆ ಸರಿಯುವಂತೆ ಮಾಡಿದ್ದಾರೆ.
"Gali gali mai shor hai, Khalistanis chor hai" Indians give back to Khalistanis who went to disrupt an event celebrating India's Independence Day in Sydney, Australia. pic.twitter.com/0C4gvFpNfE
— Megh Updates 🚨™ (@MeghUpdates) August 15, 2023
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.