ಬೆಂಗಳೂರು: ಕಾಂಗ್ರೆಸ್ನವರು 4 ವರ್ಷ ಅಧಿಕಾರದಿಂದ ದೂರ ಇದ್ದು ಒಂದು ರೀತಿ ಹಸಿದ ಹುಲಿಗಳಾಗಿದ್ದಾರೆ. ಎಲ್ಲರೂ ಹಣ ಮಾಡಲು ಹೊರಟಿದ್ದಾರೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನಪರಿಷತ್ ಸದಸ್ಯ ಎನ್.ರವಿಕುಮಾರ್ ಅವರು ಆರೋಪಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಗುತ್ತಿಗೆದಾರರು ಯೂ ಟರ್ನ್ ಹೊಡೆದರೆ ಯಾರು ನಂಬುತ್ತಾರೆ? ಅವರು ಕೇಳಿದ್ದು ಸತ್ಯ ಎಂದ ಅವರು, ಈ ಸರಕಾರ ನೂರಕ್ಕೆ ನೂರು ಭ್ರಷ್ಟಾಚಾರದ ಸರಕಾರ ಎಂಬುದು ಎಂಎಲ್ಎಗಳಿಗೆ, ಜನರಿಗೆ ಗೊತ್ತಿದೆ. ಸರಕಾರ ಎರಡು ತಿಂಗಳಾಗುವಾಗಲೇ ಹೀಗಾಗಿದೆ ಎಂದು ಕಾಂಗ್ರೆಸ್ ಶಾಸಕರೇ ಹೇಳುತ್ತಾರೆ. ಮುಖ್ಯಮಂತ್ರಿಗಳು ತಮ್ಮ ಆಪ್ತರ ಬಳಿ ಎರಡೇ ತಿಂಗಳಲ್ಲಿ ನಮ್ಮ ಸರಕಾರದ ಹೆಸರು ಖರಾಬಾಗುತ್ತಿದೆ ಎಂದಿರುವುದು ಗೊತ್ತಾಗಿದೆ ಎಂದು ತಿಳಿಸಿದರು.
ರಾಜ್ಯದ ಕಾಂಗ್ರೆಸ್ ಸರಕಾರ ನೂರಕ್ಕೆ ನೂರು ಭ್ರಷ್ಟ, ಕಮಿಷನ್ ಸರಕಾರ ಎಂದು ಅವರು ಟೀಕಿಸಿದರು. ಸರಕಾರದ ವಿರುದ್ಧ ಪೋಸ್ಟರ್ ಅಭಿಯಾನ, ಶಾಸಕರು, ಸಂಸದರು, ಜನಪ್ರತಿನಿಧಿಗಳಿಂದ ಬಹಳ ದೊಡ್ಡ ಹೋರಾಟವನ್ನು ಹಮ್ಮಿಕೊಳ್ಳುತ್ತೇವೆ ಎಂದು ಪ್ರಕಟಿಸಿದರು.
ಬಹಳಷ್ಟು ಇಲಾಖೆಗಳಲ್ಲಿ ಭ್ರಷ್ಟಾಚಾರ ನಡೆದಿದೆ. ಜನ ಇವರಿಗೆ ಮುಂದಿನ ದಿನಗಳಲ್ಲಿ ಪಾಠ ಕಲಿಸುತ್ತಾರೆ ಎಂದು ವಿಶ್ವಾಸದಿಂದ ನುಡಿದರು. ಇದೇ 16ರ ಬಳಿಕ ರಾಜ್ಯದ ಭ್ರಷ್ಟ, ಕಮಿಷನ್ ಸರಕಾರದ ವಿರುದ್ಧ ರಾಜ್ಯದಾದ್ಯಂತ ಭಾರಿ ದೊಡ್ಡ ಹೋರಾಟ ಮಾಡುತ್ತೇವೆ ಎಂದು ಅವರು ತಿಳಿಸಿದರು.
ಚಲುವರಾಯಸ್ವಾಮಿ ಅವರು ಅಧಿಕಾರಿಗಳ ಬಳಿ ಆರರಿಂದ 8 ಲಕ್ಷ ಕಲೆಕ್ಷನ್ ಮಾಡಲು ಸೂಚಿಸಿದ್ದು ಸುಳ್ಳೇ? ರಾಜ್ಯಪಾಲರಿಗೆ ದೂರು ಕೊಟ್ಟಿದ್ದು ಸುಳ್ಳೇ? ಇವರು ಆವೇಶದಿಂದ ಮಾತನಾಡಿದರೆ ಯಾರು ನಂಬುತ್ತಾರೆ ಎಂದು ಕೇಳಿದರು. ಇದು ಹಣ ಮಾಡಿಕೊಳ್ಳಲು ಬಂದ ಸರಕಾರ. ಇದು ಅಭಿವೃದ್ಧಿಗೆ ಮಾರಕ ಎಂದು ಆಕ್ಷೇಪಿಸಿದರು.
ಭ್ರಷ್ಟಾಚಾರ ವಿಚಾರದಲ್ಲಿ ಶೂನ್ಯ ಸಹಿಷ್ಣು ಎಂದಿದ್ದ ರಾಹುಲ್ ಗಾಂಧಿ ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ? ಗುತ್ತಿಗೆದಾರರ ಕೆಲಸ ಆದುದಕ್ಕೆ ಹಣ ಬಿಡುಗಡೆ ಮಾಡಬೇಕಲ್ಲವೇ? ಎಂದು ಕೇಳಿದರು. ಗುತ್ತಿಗೆದಾರರು ಒತ್ತಡಕ್ಕೆ ಮಣಿದು ಕಮಿಷನ್ ಹಣ ಕೇಳಿಲ್ಲ ಎಂದಿರುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.