ನ್ಯೂಯಾರ್ಕ್: ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಶೃಂಗಸಭೆಯನ್ನು ಉದ್ದೇಶಿಸಿ ಶುಕ್ರವಾರ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿಯವರು, ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಸುಧಾರಣೆಗಳನ್ನು ತರಬೇಕು ಎಂದು ಪ್ರತಿಪಾದಿಸಿದರು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ’ಭದ್ರತಾ ಮಂಡಳಿ ಸೇರಿದಂತೆ ವಿಶ್ವಸಂಸ್ಥೆಯನ್ನು ಸುಧಾರಣೆ ಮಾಡಬೇಕು, ಆಗ ಮಾತ್ರ ಅದು ವಿಶ್ವಾಸಾರ್ಹತೆ ಮತ್ತು ನ್ಯಾಯಸಮ್ಮತತೆಯನ್ನು ಪಡೆಯುತ್ತದೆ ಎಂದಿದ್ದಾರೆ.
ಪ್ರತಿಯೊಬ್ಬರಲ್ಲೂ ನಾವು ಸುರಕ್ಷಿತ ಮತ್ತು ಗೌರವಾತ್ಮಕವಾಗಿ ಬದುಕುತ್ತಿದ್ದೇವೆ ಎಂಬ ಭಾವನೆ ಮೂಡಿಸುವಂತ ಸಮಾಜವನ್ನು ನಾವು ನಿರ್ಮಿಸಬೇಕಿದೆ.
ಬಡತನವನ್ನು ನಿವಾರಿಸುವುದು ನಮ್ಮ ಪ್ರಮುಖ ಆದ್ಯತೆ. ಅದಕ್ಕಾಗಿ ಅನೇಕ ಕಾರ್ಯಕ್ರಮಗಳನ್ನು ನಾವು ಆರಂಭಿಸಿದ್ದೇವೆ. ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿಗೂ ಹೆಚ್ಚಿನ ಪ್ರಾಧಾನ್ಯತೆ ನೀಡುತ್ತಿದ್ದೇವೆ.
ಅಭಿವೃದ್ಧಿಗೆ ಭಾರತ ಅನುಸರಿಸುತ್ತಿರುವ ಮಾರ್ಗ ಮತ್ತು ಸುಸ್ಥಿರ ಅಭಿವೃದ್ಧಿಗೆ ವಿಶ್ವಸಂಸ್ಥೆಯ ಗುರಿ ಇವೆರಡಕ್ಕೂ ಸಾಮ್ಯತೆ ಇದೆ. ಇದು ಭಾರತದ ಜನರಿಗೆ ಇದು ಸಂತೃಪ್ತಿಯ ವಿಚಾರ.
ಇಂದು ಜಗತ್ತು ಸಾರ್ವಜನಿಕ ಮತ್ತು ಖಾಸಗಿ ವಲಯದ ಬಗ್ಗೆ ಮಾತನಾಡುತ್ತಿದೆ. ನಾವು ವೈಯಕ್ತಿಕ ವಲಯದ ಬಗ್ಗೆ ನೋಡುತ್ತಿದ್ದೇವೆ. ಇದರರ್ಥ ವೈಯಕ್ತಿ ಉದ್ಯಮ ಮತ್ತು ನಾವೀನ್ಯತೆ.
ಕೃಷಿಯನ್ನು ಹೆಚ್ಚು ಉತ್ಪಾದಕವನ್ನಾಗಿಸಲು ಮತ್ತು ಪಾಕೃತಿಕ ವಿಕೋಪದಿಂದ ಸಂಕಷ್ಟದಲ್ಲಿರುವ ರೈತರಿಗೆ ಸಹಾಯ ಮಾಡುವುದಕ್ಕಾಗಿ ಕಾರ್ಯನಿರ್ವಹಿಸುತ್ತಿದ್ದೇವೆ.
ಈ ಜಗತ್ತಿನಲ್ಲಿ ಎಲ್ಲರೂ ಒಬ್ಬರಿಗೊಬ್ಬರು ಅವಲಂಭಿತವಾಗಿದ್ದಾರೆ, ನಮ್ಮ ಅಂತಾರಾಷ್ಟ್ರೀಯ ಸಂಬಂಧಗಳು ಮಾನವೀಯತೆಯ ಪ್ರಗತಿ ಕೇಮದ್ರಿತವಾಗಿರಬೇಕು.
ಭೂಮಿಯನ್ನು ತಾಯಿಯೆಂದು ಪರಿಗಣಿಸುವ ಸಂಸ್ಕೃತಿಯನ್ನು ನಾನು ಪ್ರತಿನಿಧಿಸುತ್ತಿದ್ದೇನೆ. ಇಡೀ ಜಗತ್ತು ನಮಗೆ ಕುಟುಂಬವಿದ್ದಂತೆ.
ಇಡೀ ಜಗತ್ತು ಶಾಂತಿಯುತವಾಗಿ, ಅಭಿವೃದ್ಧಿದಾಯಕವಾಗಿ ಇರಬೇಕೆಂದಾದರೆ ಮೊದಲು ನಾವು ಬಡತನವನ್ನು ನಿವಾರಿಸಬೇಕು ಎಂದು ಮೋದಿ ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.