ನವದೆಹಲಿ: ರಷ್ಯಾ ಸುಮಾರು 50 ವರ್ಷಗಳ ಬಳಿಕ ಮೊದಲ ಬಾರಿಗೆ ಚಂದ್ರನೆಡೆಗೆ ತನ್ನ ಬಾಹ್ಯಾಕಾಶ ನೌಕೆಯನ್ನು ಕಳುಹಿಸಿದೆ.
ರಷ್ಯಾ ಉಡಾವಣೆ ಮಾಡಿರುವ ಲೂನಾ-25 (Luna-25) ಪ್ರೋಬ್ 1976 ರಿಂದ ರಷ್ಯಾದ ಮೊದಲ ಚಂದ್ರನ ಮೇಲಿನ ಕಾರ್ಯಾಚರಣೆಯಾಗಿದೆ. ಲೂನಾ-25 ಪ್ರೋಬ್ ಅನ್ನು ಹೊತ್ತ ರಾಕೆಟ್ ಗುರುವಾರ ಸ್ಥಳೀಯ ಕಾಲಮಾನ 02:10 ವೇಳೆಗೆ ವೊಸ್ಟೊಚ್ನಿ ಕಾಸ್ಮೊಡ್ರೋಮ್ನಿಂದ ಉಡಾವಣೆಯಾಗಿದೆ ಎಂದು ರಷ್ಯಾದ ಬಾಹ್ಯಾಕಾಶ ಸಂಸ್ಥೆ ರೋಸ್ಕೋಸ್ಮಾಸ್ ತಿಳಿಸಿದೆ.
ಈ ಉಪಗ್ರಹ ಆಗಸ್ಟ್ 21ರ ವೇಳಗೆ ಚಂದ್ರನ ಮೇಲೆ ಇಳಿಯುವ ಸಾಧ್ಯತೆಯಿದೆ. ಈ ನೌಕೆ 5 ದಿನಗಳಲ್ಲಿ ಚಂದ್ರನ ಕಕ್ಷೆಯನ್ನು ತಲುಪಲಿದೆ. ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿ ಇಳಿಯಲಿರುವ ಉಪಗ್ರಹ ಅದಕ್ಕೂ ಮೊದಲು ಸರಿಯಾದ ಸ್ಥಳವನ್ನು ಆಯ್ಕೆ ಮಾಡಲು 3-7 ದಿನಗಳನ್ನು ತೆಗೆದುಕೊಳ್ಳಲಿದೆ.
ಕಳೆದ ಒಂದು ವರ್ಷದಿಂದ ಉಕ್ರೇನ್ನೊಂದಿಗೆ ಸಂಘರ್ಷದಲ್ಲಿ ತೊಡಗಿರುವ ರಷ್ಯಾ ಇದೀಗ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಸಾಧನೆಗೆ ಹೆಜ್ಜೆ ಇಟ್ಟಿದೆ. ಭಾರತದ ಚಂದ್ರಯಾನ-3 ಬೆನ್ನಲ್ಲೇ ರಷ್ಯಾ ಕೂಡ ಚಂದ್ರನತ್ತ ಬಾಹ್ಯಾಕಾಶ ಮಿಷನ್ ನಡೆಸಿದ್ದು ವಿಶೇಷವಾಗಿದೆ.
ಚಂದ್ರನ ದಕ್ಷಿಣ ಧ್ರುವದಲ್ಲಿ ಲೂನಾ-25 ಇಳಿಯಲಿದೆ ಎಂದು ಹೇಳಲಾಗಿದೆ. ಇದು ಯಶಸ್ವಿಯಾದರೆ ಇತಿಹಾಸ ರಚನೆಯಾಗಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.