ಹೈದರಾಬಾದ್: ಇಲ್ಲಿನ ಐಟಿ ಹಾಗೂ ಐಟಿಇಎಸ್ ವಲಯದ ನೌಕರರನ್ನು ಸಾರ್ವಜನಿಕ ಸಾರಿಗೆ, ಸೈಕಲ್ಗಳು ಹಾಗೂ ಕಾಲ್ನಡಿಗೆ ಮೂಲಕ ತಮ್ಮ ಉದ್ಯೋಗ ಸಂಸ್ಥೆಗಳಿಗೆ ತೆರಳುವಂತೆ ಉತ್ತೇಜಿಸಲು ’ಕಾರ್ ರಹಿತ ಗುರುವಾರ’ (Car Free Thursday) ಕ್ರಮವನ್ನು ಜಾರಿಗೆ ತರಲಾಗಿದೆ.
ಹೈದರಾಬಾದ್ ಸಾಫ್ಟವೇರ್ ರಫ್ತು ಸಂಘ (HYSEA) ಸಂಸ್ಥೆಯು ತೆಲಂಗಾಣ ಸಾರಿಗೆ ಇಲಾಖೆಯ ಸಹಯೋಗದೊಂದಿಗೆ, ತೆಲಂಗಾಣ ರಾಜ್ಯ ಮೂಲಭೂತ ಕೈಗಾರಿಕಾ ಸೈಬರಾಬಾದ್ ಭದ್ರತಾ ಮಂಡಳಿ ಸಂಸ್ಥೆಯನ್ನೊಳಗೊಂಡ ಈ ಯೋಜನೆಯನ್ನು ಆ. 6 ರಂದು ಜಾರಿಗೊಳಿಸಲಾಗಿತ್ತು. ರಸ್ತೆಗಳಲ್ಲಿ ವಾಹನಗಳ ಸಂಖ್ಯೆ ಕಡಿಮೆ ಮಾಡಲು ಮತ್ತು ಐಟಿ ಕಂಪೆನಿಗಳಲ್ಲಿ ಪಾರ್ಕಿಂಗ್ ಸಮಸ್ಯೆಯನ್ನು ಪರಿಹರಿಸುವ ಸಲುವಾಗಿ ಈ ಯೋಜನೆಯನ್ನು ಜಾರಿಗೆ ತರಲಾಗಿದೆ.
ಈ ಯೋಜನೆಯ ಪ್ರಚಾರದಿಂದ ಐಟಿ ವಿಭಾಗದ ಕಂಪೆನಿಗಳಲ್ಲಿ ಪ್ರತಿ ಗುರುವಾರಗಳಂದು ಶೇ.10 ರಿಂದ 20ರಂತೆ 10,000 ಕಾರುಗಳ ಸಂಖ್ಯೆ ಕಡಿಮಯಾಗಿದೆ ಎಂದು ಹೈದರಾಬಾದ್ ಸಾಫ್ಟವೇರ್ ರಫ್ತು ಸಂಘ (ಹೈಸಿ)ದ ಅಧ್ಯಕ್ಷ ರಮೇಶ್ ಲೋಗನಾಥನ್ ತಿಳಿಸಿದ್ದಾರೆ.
ಇಲ್ಲಿನ ಐಟಿ ಕಂಪೆನಿಯಲ್ಲಿ 3.5 ಲಕ್ಷ ನೌಕರರು ನೇರವಾಗಿ ಮತ್ತು 70,000 ನೌಕರರು ಪರೋಕ್ಷವಾಗಿ ದುಡಿಯುತ್ತಿದ್ದು, ಕಾರ್ ಫ್ರೀ ಡೇ ಕ್ರಮದಿಂದ ನೌಕರರಿಗೆ ಸಂಚಾರದ ಸಮಯ ಉಳಿತಾಯವಾಗಿದೆ. ಅಲ್ಲದೇ 1 ಲಕ್ಷ ಲೀಟರ್ಗಳಷ್ಟು ಇಂಧನ ಉಳಿತಾಯ ಮತ್ತು ವಾಯು ಮಾಲಿನ್ಯ ಕಡಿಮೆಯಾಗಿದೆ ಎಂದು ಅವರು ತಿಳಿಸಿದ್ದಾರೆ. ಸುಮಾರು 40,000 ದಷ್ಟು ಕಾರುಗಳ ಸಂಖ್ಯೆ ಕಡಿಮೆಯಾಗಿದೆ. ಐಟಿಗಳಲ್ಲಿ ಈ ಕ್ರಮದ ಜಾಗೃತಿ ಕಾರ್ಯ ಮುಂದುವರೆಸಲಾಗುವುದು ಎಂದೂ ಅವರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.