ನವದೆಹಲಿ: ಶಿರೋಮಣಿ ಅಕಾಲಿದಳ (ಎಸ್ಎಡಿ) ಸಂಸದೆ ಹರ್ಸಿಮ್ರತ್ ಕೌರ್ ಬಾದಲ್ ಬುಧವಾರ ಲೋಕಸಭೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ‘ಭಾರತ್ ಜೋಡೋ ಯಾತ್ರೆ’ ಕುರಿತು ಮಾಡಿದ ಭಾಷಣದ ಬಗ್ಗೆ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ವಿರುದ್ಧ ಸಿಡಿದೆದ್ದ ಬಾದಲ್, ಮಣಿಪುರದ ವಿಷಯ ಮತ್ತು ಅಲ್ಲಿನ ದೌರ್ಜನ್ಯದ ವಿರುದ್ಧ ನಿಷ್ಕ್ರಿಯತೆಯನ್ನೂ ಪ್ರಸ್ತಾಪಿಸಿದರು.
“ನಾನು ಎರಡೂ ಕಡೆ (ಕಾಂಗ್ರೆಸ್ ಮತ್ತು ಬಿಜೆಪಿ)ಯ ಮಾತು ಕೇಳಿ ನನಗೆ ತುಂಬಾ ಆಘಾತವಾಯಿತು. ರಾಹುಲ್ ಗಾಂಧಿ ಅವರ ಯಾತ್ರೆಯ ಬಗ್ಗೆ ಮಾತನಾಡಿದರು. ನೀವು ಇಡೀ ದೇಶವನ್ನು ಸುತ್ತಿದ್ದೀರಿ, ನೀವು 1984 ರಲ್ಲಿ ವಿಧವೆಯರದ ಸಾವಿರಾರು ಮಹಿಳೆಯರು ನೆಲೆಸಿದ್ದ ವಿಧವೆ ಕಾಲೋನಿಗೆ ಭೇಟಿ ನೀಡಬೇಕೆಂದು ನಾನು ಬಯಸುತ್ತೇನೆ” ಎಂದು ರಾಹುಲ್ಗೆ ಹೇಳಿದರು. ಅವರು ದೆಹಲಿಯ ತಿಲಕ್ ವಿಹಾರ್ ಕಾಲೋನಿಯನ್ನು ಉಲ್ಲೇಖಿಸಿ ಈ ಮಾತು ಹೇಳಿದ್ದಾರೆ ಮತ್ತು ಇದನ್ನು ವಿಧವೆ ಕಾಲೋನಿ ಎಂದೂ ಕರೆಯುತ್ತಾರೆ, ಅಲ್ಲಿ 1984 ರ ಸಿಖ್ ವಿರೋಧಿ ದಂಗೆಯಲ್ಲಿ ಬದುಕುಳಿದವರು ನೆಲೆಸಿದ್ದಾರೆ.
“ಸಿಖ್ ಸಮುದಾಯದವಳಾಗಿ ನಾವು ಯಾರ ಮೇಲೆ ವಿಶ್ವಾಸ ಇಡಬೇಕು ಎಂದು ಕೇಳುತ್ತಿದ್ದೇನೆ? 1984ರ ಗಲಭೆಗೆ ಸಿಖ್ಖರು ಇನ್ನೂ ನ್ಯಾಯಕ್ಕಾಗಿ ಕಾಯುತ್ತಿದ್ದಾರೆ” ಎಂದು ಬಾದಲ್ ಪ್ರಶ್ನಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.