ಯಾದಗಿರಿ: ಇನ್ಸ್ಟಾಗ್ರಾಮ್ ಇನ್ಫ್ಲ್ಯುಯೆನ್ಸರ್ ಸೈಯದ್ ಅಲಿ ಅಕ್ಬರ್ ಜಾಗೀರದಾರ್ ಎಂಬಾತ ಇನ್ಸ್ಟಾಗ್ರಾಮ್ನಲ್ಲಿ ಪ್ರಚೋದನಕಾರಿ ವೀಡಿಯೊಗಳನ್ನು ಮಾಡಿ ಇದರ ಧರ್ಮಿಯರಿಗೆ ಬೆದರಿಕೆಯನ್ನು ಹಾಕಿದ್ದಾರೆ ಮತ್ತು ಪ್ರವಾದಿ ಮೊಹಮ್ಮದ್ ಅವರನ್ನು ನಿಂದಿಸುವವರ ಶಿರಚ್ಛೇದ ಮಾಡುವಂತೆ ತಮ್ಮ ಸಮುದಾಯದವರಿಗೆ ಕರೆ ನೀಡಿದ್ದಾನೆ.
ಪತ್ರಕರ್ತ ಅಶ್ವಿನಿ ಶ್ರೀವಾಸ್ತವ್ ಅವರು ಸಾಮಾಜಿಕ ಮಾಧ್ಯಮದಲ್ಲಿ ಈತನ ವೀಡಿಯೊಗಳನ್ನು ಹಂಚಿಕೊಂಡ ನಂತರ ಇದು ಬೆಳಕಿಗೆ ಬಂದಿದೆ.
ಪ್ರವಾದಿ ಮುಹಮ್ಮದ್ಗೆ ಅಗೌರವ ತೋರುವವರ ಶಿರಚ್ಛೇದ ಮಾಡುವಂತೆ ಸೈಯದ್ ತನ್ನ ಸಮುದಾಯವನ್ನು ವೀಡಿಯೋದಲ್ಲಿ ಒತ್ತಾಯಿಸಿದ್ದಾನೆ. “ನೀವು ಏನನ್ನೂ ಸಹಿಸಿಕೊಳ್ಳಬಹುದು ಆದರೆ ಅಲ್ಲಾಹನನ್ನು ಅಗೌರವಗೊಳಿಸುವವರನ್ನಲ್ಲ. ಕಾಫಿರರಿಗೆ ಇರುವ ಏಕೈಕ ಸ್ಥಳವೆಂದರೆ ನರಕ. ಮುಸ್ಲಿಂ ಮಹಿಳೆಯರನ್ನು ಮದುವೆಯಾದ ಹಿಂದೂ ಪುರುಷರನ್ನೂ ಕೊಲ್ಲಬೇಕು ಎಂದು ಆತ ವಿಡಿಯೋದಲ್ಲಿ ಹೇಳಿದ್ದಾನೆ.
ಎರಡು ದಿನಗಳ ಹಿಂದೆ ಸೈಯದ್ ಇನ್ಸ್ಟಾಗ್ರಾಂ ಖಾತೆಯಲ್ಲಿ ಈ ವಿಡಿಯೋ ಅಪ್ಲೋಡ್ ಆಗಿದೆ ಎಂದು ತಿಳಿದು ಬಂದಿದೆ.
ವಿಡಿಯೋ ವೈರಲ್ ಆಗಿದ್ದು, ಹಿಂದೂ ಜನ ಜಾಗೃತಿ ಸಮಿತಿಯ ಹಿರಿಯ ಮುಖಂಡ ಮೋಹನ್ ಗೌಡ ಅವರು ಶಿರಚ್ಛೇದನದ ಕರೆ ನೀಡುತ್ತಿರುವ ಅಪರಾಧಿಯ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಬೇಕು ಮತ್ತು ಸಮುದಾಯವನ್ನು ಪ್ರಚೋದಿಸಿದ ಆರೋಪಿಯನ್ನು ಬಂಧಿಸಬೇಕು ಎಂದು ಒತ್ತಾಯಿಸಿದ್ದಾರೆ.
ಯಾದಗಿರಿ ಜಿಲ್ಲಾ ಪೊಲೀಸರು ಮಂಗಳವಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಅದೇ ರಾತ್ರಿ ಪ್ರಕರಣದಲ್ಲಿ ಇಬ್ಬರನ್ನು ಬಂಧಿಸಿದ್ದಾರೆ.
ಬಂಧಿತರನ್ನು 23 ವರ್ಷದ ಅಕ್ಬರ್ ಸೈಯದ್ ಬಹದ್ದೂರ್ ಅಲಿ ಮತ್ತು 21 ವರ್ಷದ ಮೊಹಮ್ಮದ್ ಅಯಾಜ್ ಎಂದು ಗುರುತಿಸಲಾಗಿದೆ. ಇಬ್ಬರ ವಿರುದ್ಧ ಐಪಿಸಿ ಸೆಕ್ಷನ್ 153 ಅಡಿ ಪ್ರಕರಣ ದಾಖಲು ಮಾಡಲಾಗಿದೆ.
He is Syed Ali Akbar Jagirdar (syeds_jagirdar_v18), a popular influencer from congress ruled Karnataka, urging his community members to kill Kafirs (non-muslims)
"Behead those who abuse prophet"; "as per Quran only place for Kafirs is hell"; "kill hindu men in interfaith… pic.twitter.com/RF0KvbK7gx
— Ashwini Shrivastava (@AshwiniSahaya) August 8, 2023
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.