ನವದೆಹಲಿ: ಖಲಿಸ್ಥಾನಿಗಳು ಮತ್ತೊಮ್ಮೆ ಭಾರತವನ್ನು ಕೆಣಕುವ ಪ್ರಯತ್ನ ನಡೆಸಿದ್ದಾರೆ. ನಿಷೇಧಿತ ಗುಂಪು ಸಿಖ್ ಫಾರ್ ಜಸ್ಟಿಸ್ (SFJ) ಸಂಘಟನೆ ಕೆನಡಾದಲ್ಲಿನ ಭಾರತೀಯ ರಾಜತಾಂತ್ರಿಕ ಸಂಜಯ್ ಕುಮಾರ್ ವರ್ಮಾ ಅವರ ಬಗ್ಗೆ ಮಾಹಿತಿ ನೀಡುವವರಿಗೆ ಬಹುಮಾನವನ್ನು ನೀಡುವುದಾಗಿ ಘೋಷಣೆ ಮಾಡಿದೆ.
ಕೆನಡಾದಲ್ಲಿರುವ ಭಾರತೀಯ ಹೈಕಮಿಷನರ್ ಸಂಜಯ್ ಕುಮಾರ್ ವರ್ಮಾ ಅವರ ನಿವಾಸದ ವಿಳಾಸ ಮತ್ತು ಇತರ ಮಾಹಿತಿ ನೀಡುವ ಯಾರಿಗಾದರೂ USD 10,000 ಬಹುಮಾನವನ್ನು ನೀಡುವುದಾಗಿ ಘೋಷಿಸಿರುವ ಪೋಸ್ಟರ್ ಅನ್ನು ಸಿಖ್ ಫಾರ್ ಜಸ್ಟೀಸ್ ಬಿಡುಗಡೆ ಮಾಡಿದೆ.
ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಗೆ SFJ ಪ್ರತೀಕಾರ ತೀರಿಸಿಕೊಳ್ಳುತ್ತದೆ ಎಂದು ಪೋಸ್ಟರ್ನಲ್ಲಿ ಬರೆಯಲಾಗಿದೆ. ಕೆನಡಾದಲ್ಲಿ ಇಬ್ಬರು ಮುಸುಕುಧಾರಿ ಬಂದೂಕುಧಾರಿಗಳು ಸಿಖ್ ನಾಯಕ ನಿಜ್ಜರ್ನನ್ನು ಆತನ ಟ್ರಕ್ನಲ್ಲಿ ಗುಂಡಿಕ್ಕಿ ಕೊಂದಿದ್ದರು. ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯನ್ನು ಪ್ರತಿಭಟಿಸಿ, ಸಾವಿರಾರು ಸಿಖ್ ಪ್ರತ್ಯೇಕತಾವಾದಿಗಳು ಲಂಡನ್ ಮತ್ತು ಮೆಲ್ಬೋರ್ನ್ ಸೇರಿದಂತೆ ಪ್ರಪಂಚದಾದ್ಯಂತ ಟೊರೊಂಟೊ ಮತ್ತು ಇತರ ನಗರಗಳಲ್ಲಿ ಬೀದಿಗಿಳಿದಿದ್ದರು. ಇದನ್ನು ಭಾರತವೇ ಮಾಡಿಸಿದೆ ಎಂಬ ಆರೋಪವನ್ನು ಅವರು ಹಾಕಿದ್ದಾರೆ.
ಸಿಖ್ ಫಾರ್ ಜಸ್ಟಿಸ್ ಬಿಡುಗಡೆ ಮಾಡಿದ ಪೋಸ್ಟರ್ನಲ್ಲಿ “ಶಹೀದ್ ಜತೇದಾರ್ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ” ಎಂಬ ಶೀರ್ಷಿಕೆ ಇದೆ. SFJ ಕೆನಡಾದಲ್ಲಿ ನಿಜ್ಜರ್ ಕೊಲೆಗಾರರ ಮೇಲೆ ಕ್ರಿಮಿನಲ್ ಮೊಕದ್ದಮೆಯನ್ನು ಪ್ರಾರಂಭಿಸುತ್ತದೆ ಎಂದಿದೆ. “ಟೊರೊಂಟೊ, ವ್ಯಾಂಕೋವರ್, ಒಟ್ಟಾವಾದಲ್ಲಿ ಶಹೀದ್ ನಿಜ್ಜರ್ ಹಂತಕರ ನಿವಾಸದ ವಿಳಾಸ ನೀಡಿದವರಿಗೆ USD 10,000 ಬಹುಮಾನ” ಎಂದು ಬರೆಯಲಾಗಿದೆ. ಪೋಸ್ಟರ್ನಲ್ಲಿ ಭಾರತೀಯ ಹೈಕಮಿಷನರ್ ಸಂಜಯ್ ಕುಮಾರ್ ವರ್ಮಾ, ಕಾನ್ಸುಲೇಟ್ ಜನರಲ್ ಅಪೂರ್ವ ಶ್ರೀವಾಸ್ತವ ಮತ್ತು ಕಾನ್ಸುಲೇಟ್ ಜನರಲ್ ಮನೀಶ್ ಅವರ ಚಿತ್ರಗಳೂ ಇವೆ. ಅದರಲ್ಲಿ ಹರ್ದೀಪ್ ಸಿಂಗ್ ನಿಜ್ಜರ್ ಚಿತ್ರವನ್ನೂ ಹಾಕಲಾಗಿದೆ.
Fresh threat by Khalistani terrorists in a poster to top Indian diplomat Sanjay Kumar Verma in Canada. Banned Khalistani terror group SFJ announced $10,000 reward for those who provide his residential address. SFJ is funded/supported by Pakistan ISI. Desperate publicity gimmick. pic.twitter.com/joBCxeZdPT
— Aditya Raj Kaul (@AdityaRajKaul) August 9, 2023
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.