ಶ್ರೀನಗರ: ಬ್ರಿಟಿಷ್-ಅರಬ್ ಸೋಶಿಯಲ್ ಮೀಡಿಯಾ ಇನ್ಫ್ಲ್ಯುಯನ್ಸರ್ ಅಮ್ಜದ್ ತಾಹಾ ಅವರು ಭೂಲೋಕದ ಸ್ವರ್ಗ ಕಾಶ್ಮೀರದ ಬಗೆಗಿನ ಅದ್ಭುತವಾದ ಚಿತ್ರವನ್ನು ಹಂಚಿಕೊಂಡಿದ್ದಾರೆ. ಆ ವಿಡಿಯೋದಲ್ಲಿ ಮಕ್ಕಳು ತಮ್ಮನ್ನು ತಾವು ʼಕಾಶ್ಮೀರದಲ್ಲಿನ ಹೆಮ್ಮೆಯ ಭಾರತೀಯರುʼ ಎಂದು ಬಣ್ಣಿಸುವ ಮೂಲಕ ಜಗತ್ತಿಗೆ ಮಹತ್ತರವಾದ ಸಂದೇಶವನ್ನು ಸಾರಿದ್ದಾರೆ. ಭಾರತದ ಏಕತೆ ಮತ್ತು ಸೌಹಾರ್ದತೆಯನ್ನು ಈ ಮಕ್ಕಳು ಪುಷ್ಟೀಕರಿಸಿದ್ದಾರೆ.
‘ಭಾರತೀಯ ಮುಸ್ಲಿಮರು’ ಎಂದು ಧೈರ್ಯದಿಂದ ಘೋಷಿಸಿಕೊಳ್ಳುವ ಕಾಶ್ಮೀರದ ಯುವ ಧ್ವನಿಗಳನ್ನು ಅಮ್ಜದ್ ತಾಹಾ ಅವರು ಶ್ಲಾಘಿಸಿದ್ದಾರೆ. ಮಾತ್ರವಲ್ಲ ಕಾಶ್ಮೀರವನ್ನು ಭಾರತದ ಅಧ್ಯಕ್ಷತೆಯಲ್ಲಿನ G20 ಕಾರ್ಯಕ್ರಮಕ್ಕಾಗಿ ಆಯ್ಕೆ ಮಾಡಿಕೊಂಡಿರುವುದನ್ನು ಅವರು ಶ್ಲಾಘಿಸಿದರು. ಇದನ್ನು ಪ್ರಕೃತಿ ಮತ್ತು ಮಾನವೀಯತೆಯನ್ನು ಸಂರಕ್ಷಿಸುವಲ್ಲಿ ಏಕತೆಯ ಪ್ರಬಲ ಲಾಂಛನವಾಗಿದೆ ಎಂದು ಬಣ್ಣಿಸಿದ್ದಾರೆ.
ಕಾಶ್ಮೀರಕ್ಕೆ ತಾಹಾ ಅವರ ಭೇಟಿಯು ಅವರ ಸ್ಫೂರ್ತಿಯನ್ನು ಇಮ್ಮಡಿಗೊಳಿಸಿದೆ, ಈ ಪ್ರದೇಶ ತನ್ನ ಹಿಂದಿನ ಪ್ರಕ್ಷುಬ್ಧತೆಯಿಂದ ಮುಂದಿನ ಪೀಳಿಗೆಗೆ ಭರವಸೆಯ ದಾರಿದೀಪವಾಗಿ ಮಾರ್ಪಟ್ಟಿದೆ ಎಂಬುದನ್ನು ಕಂಡುಕೊಂಡಿರುವುದಾಗಿ ಅವರು ವಿವರಿಸಿದ್ದಾರೆ. ಕಾಶ್ಮೀರದ ಭೂಮಿ, ನಂಬಲಾಗದ ಸೌಂದರ್ಯದಿಂದ ಅಲಂಕರಿಸಲ್ಪಟ್ಟಿದೆ ಮತ್ತು ಅಸಾಧಾರಣ ಜನರ ವಾಸವಾಗಿದೆ ಎಂದು ಅವರು ವಿವರಿಸಿದ್ದಾರೆ. ಕಾಶ್ಮೀರವನ್ನು ಭಾರತದ ಏಕತೆ ಮತ್ತು ಸೌಹಾರ್ದತೆಗೆ ಸಾಕ್ಷಿಯಾಗಿದೆ ಎಂದು ಬಣ್ಣಿಸಿದ್ದಾರೆ.
Asked the children where they were from, and they proudly said Indian Muslims in Kashmir. Thrilled as a Muslim Arab, I applaud India for choosing Kashmir for G20. Their example in embracing diversity, building for the future, and standing against radicals is remarkable. G20India… pic.twitter.com/D3ochg4wav
— Amjad Taha أمجد طه (@amjadt25) August 7, 2023
This is not Switzerland or Austria; this is India, and this is Kashmir where the G20 will take place. It's called the "paradise on Earth," a place that has preserved the Earth and can be the solution for climate change. In Kashmir, we see Muslims, Hindus, Sikhs, and Christians… pic.twitter.com/YgBm4wyTJv
— Amjad Taha أمجد طه (@amjadt25) May 20, 2023
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.