ಶ್ರೀನಗರ: ಕಾನೂನುಬಾಹಿರ ಸಂಘಟನೆ ಅಲ್-ಬದ್ರ್ನೊಂದಿಗೆ ನಂಟು ಹೊಂದಿದ್ದ ಪ್ರಮುಖ ಭಯೋತ್ಪಾದಕನನ್ನು ಶ್ರೀನಗರ ಪೊಲೀಸ್ ತಂಡವು ಶನಿವಾರ ಯಶಸ್ವಿಯಾಗಿ ಬಂಧಿಸಿ ಉಗ್ರ ವಿರೋಧಿ ಕಾರ್ಯಾಚರಣೆಯಲ್ಲಿ ಮಹತ್ವದ ಪ್ರಗತಿ ಸಾಧಿಸಿದೆ.
ಬಂಧಿತ ವ್ಯಕ್ತಿಯನ್ನು ರಾಜ್ಪೋರಾ ಪುಲ್ವಾಮಾ ನಿವಾಸಿ ಅರ್ಫತ್ ಯೂಸುಫ್ ಎಂದು ಗುರುತಿಸಲಾಗಿದೆ. ನಿರ್ದಿಷ್ಟ ಗುಪ್ತಚರ ಮಾಹಿತಿಯನ್ನು ಆಧರಿಸಿ ಕಾರ್ಯಾಚರಣೆಯನ್ನು ನಡೆಸಲಾಯಿತು,ನಂತರ ನಗರದ ಬಟಮಾಲೂ ಸುತ್ತಲಿನ ಪ್ರದೇಶದಲ್ಲಿ ಆತನನ್ನು ಬಂಧಿಸಲಾಯಿತು. ಹೈಬ್ರಿಡ್ ಭಯೋತ್ಪಾದಕ ಎಂದು ಬಣ್ಣಿಸಲಾದ ಅರ್ಫಾತ್ ಯೂಸುಫ್ ಈ ಪ್ರದೇಶದಲ್ಲಿ ಭಯೋತ್ಪಾದನಾ ಚಟುವಟಿಕೆಗಳನ್ನು ಸಕ್ರಿಯವಾಗಿ ಯೋಜಿಸುತ್ತಿದ್ದ.
ಹೈಬ್ರಿಡ್ ಭಯೋತ್ಪಾದಕರು ದಾಳಿಗಳನ್ನು ನಡೆಸುವ ಸಾಮರ್ಥ್ಯಕ್ಕೆ ಕುಖ್ಯಾತರಾಗಿದ್ದಾರೆ. ಅಲ್ಲದೇ ಅವರು ಜನಸಾಮಾನ್ಯರೊಂದಿಗೆ ಸಹಜವಾಗಿ ಬೆರೆತುಕೊಳ್ಳುತ್ತಾರೆ, ಇದರಿಂದಾಗಿ ಅವರನ್ನು ಪತ್ತೆಹಚ್ಚಲು ವಿಶೇಷವಾಗಿ ಸವಾಲುಗಳು ಎದುರಾಗುತ್ತವೆ. ಬಂಧನದ ಸಮಯದಲ್ಲಿ, ಪೊಲೀಸರು ಯೂಸುಫ್ನ ವಶದಿಂದ ಪಿಸ್ತೂಲ್, 20 ಲೈವ್ ರೌಂಡ್ಸ್ ಮತ್ತು ಎರಡು ಮ್ಯಾಗಜೀನ್ಗಳನ್ನು ಒಳಗೊಂಡಂತೆ ಹಲವು ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಈತನ ಬಳಿಯಿಂದ ವಶಪಡಿಸಿಕೊಂಡ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳು ಶ್ರೀನಗರದಲ್ಲಿ ಭಯೋತ್ಪಾದಕ ದಾಳಿಯನ್ನು ಕಾರ್ಯಗತಗೊಳಿಸುವ ಅವರ ಉದ್ದೇಶಗಳ ಗಂಭೀರತೆಯನ್ನು ಸೂಚಿಸುತ್ತದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.