ನವದೆಹಲಿ: 1999 ರ ಇಂಡೋ-ಪಾಕ್ ಕಾರ್ಗಿಲ್ ಯುದ್ಧದ ಸ್ಮರಣಾರ್ಥ ಸಮಾರಂಭಗಳು ಲಡಾಖ್ನ ಡ್ರಾಸ್ನಲ್ಲಿ ಬುಧವಾರ ಪ್ರಾರಂಭವಾಗಿವೆ. ಇಂದು ಕಾರ್ಗಿಲ್ ವಿಜಯ್ ದಿವಸ್ನ 24 ನೇ ವಾರ್ಷಿಕೋತ್ಸವವನ್ನು ಗುರುತಿಸಲಾಗುತ್ತಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಡ್ರಾಸ್ನಲ್ಲಿರುವ ಕಾರ್ಗಿಲ್ ಯುದ್ಧ ಸ್ಮಾರಕಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು ಮತ್ತು 1999 ರ ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.
ವಿಜಯ್ ದಿವಸ್ ಸ್ಮರಣಾರ್ಥ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಲು ಇಂದು ಮುಂಜಾನೆ ಡ್ರಾಸ್ಗೆ ಅವರು ಆಗಮಿಸಿದರು. ಚೀಫ್ ಆಫ್ ಡಿಫೆನ್ಸ್ ಸ್ಟಾಫ್ (ಸಿಡಿಎಸ್) ಜನರಲ್ ಅನಿಲ್ ಚೌಹಾಣ್ ಕಾರ್ಗಿಲ್ ಯುದ್ಧ ಸ್ಮಾರಕಕ್ಕೆ ಮಾಲಾರ್ಪಣೆ ಮಾಡಿ ಯುದ್ಧ ವೀರರನ್ನು ಸ್ಮರಿಸಿದರು.
ಏರ್ ಸ್ಟಾಫ್ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ವಿಆರ್ ಚೌಧರಿ ಮತ್ತು ಭಾರತೀಯ ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಆರ್ ಹರಿ ಕುಮಾರ್ ಅವರು ಸ್ಮಾರಕಕ್ಕೆ ಪುಷ್ಪಾರ್ಚನೆ ಮಾಡಿದರು. ಇದಕ್ಕೂ ಮುನ್ನ ಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ ಕಾರ್ಗಿಲ್ ಯುದ್ಧ ಸ್ಮಾರಕಕ್ಕೆ ಪುಷ್ಪಾರ್ಚನೆ ಮಾಡಿದರು.
#WATCH | Defence Minister Rajnath Singh lays a wreath at Kargil War Memorial in Drass and pays tribute to soldiers who lost their lives in the 1999 Kargil War. #KargilVijayDiwas pic.twitter.com/Ev9ZwyMVJa
— ANI (@ANI) July 26, 2023
#WATCH | Ladakh: Defence Minister Rajnath Singh arrives in Drass on #KargilVijayDiwas
He will lay a wreath at Kargil War Memorial here and pay tributes to soldiers who lost their lives in the 1999 Kargil War. pic.twitter.com/wF12A6plwy
— ANI (@ANI) July 26, 2023
#WATCH | Ladakh | Chief of Defence Staff (CDS) General Anil Chauhan lays a wreath at Kargil War Memorial in Drass and pays tribute to soldiers who lost their lives in the 1999 Kargil War.#KargilVijayDiwas pic.twitter.com/Pk92rpMH0Y
— ANI (@ANI) July 26, 2023
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.