ಬೆಂಗಳೂರು: ಮುಂದಿನ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಶತಾಯ ಗತಾಯ ಸೋಲಿಸಲೇ ಬೇಕು ಎಂದು ಪಣತೊಟ್ಟಿರುವ 26 ಪಕ್ಷಗಳು ಮಹಾಮೈತ್ರಿ ಮಾಡಿಕೊಂಡಿದ್ದು, ಈಗ ತಮ್ಮ ಮೈತ್ರಿಗೆ I-N-D-I-A ಎಂದು ನಾಮಕರಣ ಮಾಡಿದೆ.
I-N-D-I-A – ಇಂಡಿಯನ್ ನ್ಯಾಷನಲ್ ಡೆವಲಪ್ಮೆಂಟ್ ಇನ್ಕ್ಲೂಸಿವ್ ಅಲೈಯನ್ಸ್ – ಇದು ವಿರೋಧ ಪಕ್ಷಗಳ ಮಹಾಮೈತ್ರಿಗೆ ಇಡಲಾದ ಹೊಸ ಹೆಸರು. ಈ ಮೂಲಕ 26 ಪಕ್ಷಗಳು 2024 ರ ಸಾರ್ವತ್ರಿಕ ಚುನಾವಣೆಗೆ “NDA Vs INDIA” ಕದನವನ್ನು ಸ್ಥಾಪಿಸಲು ನಿರ್ಧರಿಸಿವೆ. ಬೆಂಗಳೂರಿನಲ್ಲಿ ನಡೆದ ನಿರ್ಣಾಯಕ ಸಭೆಯಲ್ಲಿ ಹೆಸರನ್ನು ಅಂತಿಮಗೊಳಿಸಲಾಗಿದೆ.
ಹೊಸ ಹೆಸರು ಪಡೆದ ಬಳಿಕ ಮಹಾಮೈತ್ರಿ ಸದಸದ್ಯರು “ಚಕ್ ದೇ ಇಂಡಿಯಾ” ಎಂದು ಈಗಾಗಲೇ ತಮ್ಮನ್ನು ತಾವು ಚಿಯರ್ ಅಪ್ ಮಾಡಿಕೊಳ್ಳುತ್ತಿದ್ದಾರೆ.
“ಎನ್ಡಿಎ ಇಂಡಿಯಾಗೆ ಸವಾಲು ಹಾಕಬಹುದೇ? ಬಿಜೆಪಿ ಇಂಡಿಯಾಗೆ ಸವಾಲು ಹಾಕಬಹುದೇ?” ಎಂದು ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಭೆಯ ಬಳಿಕ ಬಿಜೆಪಿಗೆ ಪ್ರಶ್ನೆ ಹಾಕಿದ್ದಾರೆ.
ಮೆಗಾ ಸಭೆಯ 2 ನೇ ದಿನದಂದು ಹೆಚ್ಚಿನ ಚರ್ಚೆಯ ನಂತರ ಹೆಸರನ್ನು ಬದಲಾಯಿಸಲಾಗಿದೆ. ರಾಹುಲ್ ಗಾಂಧಿ ನೀಡಿದ ಹೆಸರನ್ನು ಅಂತಿಮಗೊಳಿಸಲಾಗಿದೆ ಎನ್ನಲಾಗಿದೆ. ಎನ್ಸಿಪಿಯ ಜಿತೇಂದ್ರ ಅಹದ್ ಅವರು ರಾಹುಲ್ ಗಾಂಧಿ ಅವರ ಸೃಜನಾತ್ಮಕತೆಯನ್ನು ಟ್ವಿಟ್ನಲ್ಲಿ ಶ್ಲಾಘಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.