ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಇಸ್ಲಾಮಿಕ್ ರಾಷ್ಟ್ರಗಳನ್ನು ತಲುಪುವ ಪ್ರಯತ್ನ ಮಾಡಿದ್ದು, ಇದು ಅನುಕರಣೀಯ ನಡೆ ಎಂದು ಕಾಂಗ್ರೆಸ್ ನಾಯಕ ಶಶಿ ತರೂರ್ ಅವರು ಹೇಳಿದ್ದಾರೆ.
ಅಲ್ಲದೇ ತರೂರ್ ಅವರು G20 ಅನ್ನು ಯಶಸ್ಸು ಮಾಡುವಲ್ಲಿ ಮೋದಿ ಸರ್ಕಾರದ ಯಶಸ್ಸನ್ನು ಶ್ಲಾಘಿಸಿದರು, ಆದರೆ ಚೀನಾದ ಅಪ್ಲಿಕೇಶನ್ಗಳ ಮೇಲಿನ ನಿಷೇಧವನ್ನು ಮೀರಿ ದೇಶದ ಚೀನಾ ನೀತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದರು.
CNN-News18 ರ ಸಮಾವೇಶದಲ್ಲಿ ಮಾತನಾಡಿದ ತಿರುವನಂತಪುರಂ ಸಂಸದ ತರೂರ್, “ವಿದೇಶಿ ನೀತಿಯ ಬಗ್ಗೆ ನಾನು ಮೋದಿ ಆಡಳಿತದ ಆರಂಭದಲ್ಲಿ ಟೀಕೆ ಮಾಡುತ್ತಿದ್ದೆ. ಆದರೆ ಅವರು ಎಲ್ಲಾ ನೆಲೆಗಳನ್ನು ಸಮಂಜಸವಾಗಿ ಸ್ಪರ್ಶಿಸಿದ್ದಾರೆ ಎಂದು ನಾನು ಭಾವಿಸುತ್ತೇನೆ” ಎಂದು ತರೂರ್ ಹೇಳಿದ್ದಾರೆ.
“ನನಗೆ ನೆನಪಿದೆ, ಮೋದಿಯವರ ಪ್ರಧಾನಿಯಾದ ಮೊದಲ ವರ್ಷದಲ್ಲಿ ಅವರು 27 ದೇಶಗಳಿಗೆ ಪ್ರವಾಸ ಮಾಡಿದರು ಮತ್ತು ಅವುಗಳಲ್ಲಿ ಒಂದು ಇಸ್ಲಾಮಿಕ್ ದೇಶವಿರಲಿಲ್ಲ. ಆ ಬಗ್ಗೆ ಕಾಂಗ್ರೆಸ್ ಸಂಸದನಾಗಿ ಟೀಕೆ ಮಾಡಿದ್ದೆ. ಆದರೆ ಅವರು ಇಸ್ಲಾಮಿಕ್ ಜಗತ್ತನ್ನು ತಲುಪಲು ನಂತರ ಏನು ಮಾಡಿದ್ದಾರೆಂದು ಹೇಳಲು ನಾನು ಸಂತೋಷಪಡುತ್ತೇನೆ. ಪ್ರಮುಖ ಮುಸ್ಲಿಂ ರಾಷ್ಟ್ರಗಳೊಂದಿಗಿನ ನಮ್ಮ ಸಂಬಂಧ ಎಂದಿಗೂ ಇಷ್ಟೊಂದು ಉತ್ತಮವಾಗಿರಲಿಲ್ಲ. ನನ್ನ ಆರಂಭಿಕ ಟೀಕೆಗಳನ್ನು ಹಿಂಪಡೆಯಲು ನನಗೆ ಸಂತೋಷವಾಗಿದೆ” ಎಂದು ತರೂರ್ ಹೇಳಿದ್ದಾರೆ.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಬಿಜೆಪಿಯ ಅಮಿತ್ ಮಾಳವಿಯಾ ಅವರು, ಕೊನೆಗೂ ಶಶಿ ತರೂರ್ ಅವರು ಸತ್ಯ ಹೇಳಿದ್ದಾರೆ ಎಂದಿದ್ದಾರೆ.
Prime Minister Modi’s outreach to the Islamic world has been exemplary, it couldn’t have been better. Our relations are outstanding, especially with the Arab world…
Shashi Tharoor, perhaps in a moment of weakness, finally spoke the truth. pic.twitter.com/XgwD21NBee
— Amit Malviya (@amitmalviya) July 17, 2023
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.