ನವದೆಹಲಿ: ಪಾಕಿಸ್ತಾನದ ದಕ್ಷಿಣ ಸಿಂಧ್ ಪ್ರಾಂತ್ಯದಲ್ಲಿ ಭಾನುವಾರ ಹಿಂದೂ ದೇವಾಲಯವೊಂದರ ಮೇಲೆ ಡಕಾಯಿತರ ತಂಡವೊಂದು ರಾಕೆಟ್ ಲಾಂಚರ್ಗಳಿಂದ ದಾಳಿ ನಡೆಸಿದೆ. ಸಿಂಧ್ ಪ್ರಾಂತ್ಯದ ಕಾಶ್ಮೋರ್ ಪ್ರದೇಶದಲ್ಲಿ ಹಿಂದೂಗಳಿಗೆ ಸೇರಿದ ಸಣ್ಣ ದೇವಾಲಯ ಮತ್ತು ಪಕ್ಕದ ಮನೆಗಳ ಮೇಲೆ ದಾಳಿಕೋರರು ದಾಳಿ ನಡೆಸಿದ್ದಾರೆ.
ಸ್ಥಳೀಯ ಹಿಂದೂ ಸಮುದಾಯದವರು ನಿರ್ಮಿಸಿದ ದೇವಾಲಯದ ಮೇಲೆ ದಾಳಿಕೋರರು ಭಾನುವಾರ ಮನಬಂದಂತೆ ಗುಂಡು ಹಾರಿಸಿದ್ದು, ಪೊಲೀಸರು ಘಟನಾ ಸ್ಥಳಕ್ಕೆ ತಲುಪಿ ಪರಿಸ್ಥಿತಿ ಅವಲೋಕಿಸಿದ್ದಾರೆ. ದಾಳಿಯ ಸಮಯದಲ್ಲಿ ದೇಗುಲ ಮುಚ್ಚಿತ್ತು. ದೇಗುಲನ್ನು ಬಾಗ್ರಿ ಸಮುದಾಯವು ನಡೆಸುವ ಧಾರ್ಮಿಕ ಸೇವೆಗಳಿಗಾಗಿ ವಾರ್ಷಿಕವಾಗಿ ಮಾತ್ರ ತೆರೆಯಲಾಗುತ್ತದೆ ಎನ್ನಲಾಗಿದೆ.
“ಭಾನುವಾರ ಮುಂಜಾನೆ ದಾಳಿ ನಡೆದಿದೆ. ಪೊಲೀಸರು ಸ್ಥಳಕ್ಕಾಗಮಿಸುವಷ್ಟರಲ್ಲಿ ಮನಬಂದಂತೆ ಗುಂಡು ಹಾರಿಸಿ ಪರಾರಿಯಾಗಿದ್ದಾರೆ. ಪಾಕಿಸ್ಥಾನದಲ್ಲಿ ದೇಗುಲಗಳ ಮೇಲೆ ದಾಳಿ ನಡೆಯುತ್ತಿರುವುದು ಹೊಸತ್ತೇನೂ ಅಲ್ಲ. ಈ ಹಿಂದೆಯೂ ಸಾಕಷ್ಟು ದಾಳಿಗಳು ನಡೆದಿದೆ. ಪಾಕ್ ಮಹಿಳೆ ಸೀಮಾ ಹೈದರ್ ಭಾರತಕ್ಕೆ ಬಂದ ನಂತರ ಹಿಂದುಗಳ ಮೇಲೆ ದಾಳಿ ನಡೆಸುವ ಬೆದರಿಕೆಯನ್ನು ಹಾಕಲಾಗಿತ್ತು. ಅದರಂತೆ ದಾಳಿ ನಡೆದಿದೆ ಎನ್ನಲಾಗಿದೆ.
ಎಂಟು ಅಥವಾ ಒಂಬತ್ತು ಬಂದೂಕುಧಾರಿಗಳು ದಾಳಿಯಲ್ಲಿ ಭಾಗಿಯಾಗಿದ್ದಾರೆ ಎಂದು ಪೊಲೀಸ್ ಅಧಿಕಾರಿ ಅಂದಾಜಿಸಿದ್ದಾರೆ. ಡಕಾಯಿತರು ಹಾರಿಸಿದ ರಾಕೆಟ್ ಲಾಂಚರ್ಗಳು ಸ್ಫೋಟಗೊಳ್ಳಲು ವಿಫಲವಾಗಿದ್ದು, ಯಾವುದೇ ಪ್ರಾಣಹಾನಿಯಾಗಿಲ್ಲ ಎಂದು ಬಗ್ರಿ ಸಮುದಾಯದ ಸದಸ್ಯ ಡಾ.ಸುರೇಶ್ ಹೇಳಿದ್ದಾರೆ. ಈ ಘಟನೆಯು ನಿವಾಸಿಗಳನ್ನು ಭಯಭೀತರನ್ನಾಗಿಸಿದೆ ಎಂದ ಅವರು, ಸಮುದಾಯವನ್ನು ರಕ್ಷಿಸಲು ಪೊಲೀಸರಿಗೆ ಮನವಿ ಮಾಡಿದ್ದಾರೆ.
KARACHI: A Hindu temple was attacked with rocket launchers by a gang of dacoits in the Southern Sindh province of Pakistan on Sunday, in the second such incident of vandalism of a place of worship belonging to the minority community in less than two days.
Read more at:… pic.twitter.com/j1xl7I8266
— JAMMU LINKS NEWS (@JAMMULINKS) July 16, 2023
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.