ನವದೆಹಲಿ: ರಾಷ್ಟ್ರ ರಾಜಧಾನಿ ಮಹಾಮಳೆಗೆ ಅಕ್ಷರಶಃ ನಲುಗಿ ಹೋಗಿದೆ. ಅಲ್ಲಿ ಸೃಷ್ಟಿಯಾದ ಕೃತಕ ನೆರೆ ಜನತೆಯನ್ನು ಸಂಕಷ್ಟಕ್ಕೆ ದೂಡಿದೆ. ರಾಜಧಾನಿ ನಗರದ ಅತ್ಯಂತ ಜನನಿಬಿಡ ಟ್ರಾಫಿಕ್ ಇಂಟರ್ಸೆಕ್ಷನ್ನ ಬ್ಯಾರೇಜ್ನ ಡ್ರೈನ್ ರೆಗ್ಯುಲೇಟರ್ ಮತ್ತು ಜಾಮ್ಡ್ ಸ್ಲೂಸ್ ಗೇಟ್ಗಳಿಗೆ ಹಾನಿಯಾದ ನಂತರ ಯಮುನಾ ನದಿ ನೀರು ರಸ್ತೆಗಳ ಮೇಲೆ ನಿಂತು ಆತಂಕ ಸೃಷ್ಟಿ ಮಾಡಿದೆ.
ದೆಹಲಿಯಲ್ಲಿ ಪ್ರವಾಹದ ಬಿಕ್ಕಟ್ಟನ್ನು ಪರಿಹರಿಸುವಲ್ಲಿ ಭಾರತೀಯ ಸೇನೆ ಮತ್ತು ನೌಕಾಪಡೆ ನಿರ್ಣಾಯಕ ಪಾತ್ರವನ್ನು ವಹಿಸುತ್ತಿದೆ. ಜುಲೈ 13 ರ ರಾತ್ರಿ ಯಮುನಾ ನದಿ ಅಪಾಯದ ಮಟ್ಟಕ್ಕಿಂತ ಹೆಚ್ಚು ಹರಿಯುತ್ತಿದ್ದಾಗ ಮತ್ತು ತಗ್ಗು ಪ್ರದೇಶಗಳು ಜಲಾವೃತಗೊಂಡಾಗ ದೆಹಲಿ ಆಡಳಿತ ಭಾರತೀಯ ಸೇನೆಯ ಸಹಾಯವನ್ನು ಕೋರಿತ್ತು. ದೆಹಲಿಯ ಮುಖ್ಯ ಕಾರ್ಯದರ್ಶಿ ಮತ್ತು ಸೇನಾ ಅಧಿಕಾರಿಗಳು ಸೇನೆಯ ಮಧ್ಯಸ್ಥಿಕೆಗೆ ಅರ್ಹವಾದ ವಿಷಯಗಳ ಬಗ್ಗೆ ಚರ್ಚಿಸಿದ್ದಾರೆ. ಇದೀಗ ಸೇನೆ ಕಾರ್ಯಾಚರಣೆಗೆ ಇಳಿದಿದೆ.
ವಜೀರಾಬಾದ್ ಜಲ ಸಂಸ್ಕರಣಾ ಘಟಕದಿಂದ ನೀರು ಸರಬರಾಜನ್ನು ಮರುಸ್ಥಾಪಿಸಲು ಸೇನೆಯನ್ನು ನಿಯೋಜಿಸಲಾಗಿದೆ. ನಗರಕ್ಕೆ ನೀರು ಸರಬರಾಜು ಮಾಡುವ ಪಂಪ್ಗಳು ನೀರಿನಲ್ಲಿ ಮುಳುಗಿದ್ದು, ಫಿಲ್ಟರೇಷನ್ ಪ್ಲಾಂಟ್ ಕಾರ್ಯನಿರ್ವಹಿಸುತ್ತಿಲ್ಲ. ನದಿಯಲ್ಲಿ ನೀರಿನ ಮಟ್ಟ ಕಡಿಮೆಯಾದ ನಂತರ ಸ್ಥಾವರದಲ್ಲಿ ಕಾರ್ಯಾಚರಣೆಯನ್ನು ಪುನಃಸ್ಥಾಪಿಸಲು ಸೇನೆಯು ಸಜ್ಜುಗೊಂಡಿದೆ.
ಲಭ್ಯವಿರುವ ಸಂಪನ್ಮೂಲಗಳನ್ನು ಹೆಚ್ಚಿಸಲು ಎರಡು ಹೆಚ್ಚುವರಿ ಸೇನಾ ತಂಡಗಳನ್ನು ನೆರೆಯ ಉತ್ತರ ಪ್ರದೇಶದ ಮೀರತ್ನಿಂದ ಸ್ಥಳಾಂತರಿಸಲಾಗಿದೆ ಎಂದು ವರದಿಗಳು ತಿಳಿಸಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.