ಅಬುಧಾಬಿ: ಪ್ರಧಾನಿ ನರೇಂದ್ರ ಮೋದಿ ಅವರು ಫ್ರಾನ್ಸ್ಗೆ ಎರಡು ದಿನಗಳ ಭೇಟಿಯನ್ನು ಮುಗಿಸಿದ ನಂತರ ಇಂದು ಯುಎಇಗೆ ಆಗಮಿಸಿದರು. ಪ್ರಧಾನಿ ಮೋದಿ ಅವರನ್ನು ಯುಎಇ ಅಧ್ಯಕ್ಷ ಮತ್ತು ಅಬುಧಾಬಿಯ ಆಡಳಿತಗಾರ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರು ಬರಮಾಡಿಕೊಂಡರು.
ಮೋದಿ ಶೇಖ್ ಮೊಹಮ್ಮದ್ ಬಿನ್ ಅವರೊಂದಿಗೆ ಉನ್ನತ ಮಟ್ಟದ ಮಾತುಕತೆಯನ್ನು ಇಂದು ನಡೆಸಲಿದ್ದಾರೆ.
ಭಾರತೀಯ ವಲಸಿಗ ಸಮುದಾಯವು ಯುಎಇಯಲ್ಲಿನ ಅತಿದೊಡ್ಡ ಜನಾಂಗೀಯ ಸಮುದಾಯವಾಗಿದ್ದು, ದೇಶದ ಜನಸಂಖ್ಯೆಯ ಸರಿಸುಮಾರು 30 ಪ್ರತಿಶತವನ್ನು ಹೊಂದಿದೆ.
ಮೋದಿ ಕಳೆದ ಎರಡು ದಿನಗಳ ಕಾಲ ಫ್ರಾನ್ಸಿನಲ್ಲಿದ್ದು, ಅಲ್ಲಿ ಅವರು ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರೊಂದಿಗೆ ವ್ಯಾಪಕ ಮಾತುಕತೆ ನಡೆಸಿದರು. ಅವರಿಗೆ ದೇಶದ ಅತ್ಯುನ್ನತ ನಾಗರಿಕ ಮತ್ತು ಮಿಲಿಟರಿ ಗೌರವವಾದ ಗ್ರ್ಯಾಂಡ್ ಕ್ರಾಸ್ ಆಫ್ ದಿ ಲೀಜನ್ ಆಫ್ ಆನರ್ ನೀಡಿ ಗೌರವಿಸಲಾಯಿತು.
Landed in Abu Dhabi. I look forward to the deliberations with HH Sheikh Mohamed bin Zayed Al Nahyan, which will further deepen India-UAE cooperation. @MohamedBinZayed pic.twitter.com/l3alPoKjXK
— Narendra Modi (@narendramodi) July 15, 2023
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.