ಜೆರುಸೆಲಂ: “ಪವಾಡ” ಎಂದು ಕರೆಯಲ್ಪಡುವ ಘಟನೆಯೊಂದು ಇಸೇಲಿನಲ್ಲಿ ಸಂಭವಿಸಿದೆ. ಇದು ʼವೈದೋ ನಾರಾಯಣ ಹರಿಃʼ ಎಂಬ ಮಾತನ್ನು ಅಕ್ಷರಶಃ ಸತ್ಯವೆಂದು ಸಾಬೀತು ಮಾಡಿದೆ. ಇಸ್ರೇಲ್ನ ವೈದ್ಯರು 12 ವರ್ಷದ ಬಾಲಕನಿಗೆ ಅಸಾಮಾನ್ಯ ಮತ್ತು ಸಂಕೀರ್ಣವಾದ ಶಸ್ತ್ರಚಿಕಿತ್ಸೆಯನ್ನು ನಡೆಸಿ ಬೇರ್ಪಟ್ಟಿದ್ದ ಆತನ ತಲೆಬುರುಡೆಯನ್ನು ಮತ್ತೆ ಕುತ್ತಿಗೆಗೆ ಮರು ಜೋಡಿಸಿದ್ದಾರೆ.
ಸೈಕಲ್ನಲ್ಲಿ ಹೋಗುವಾಗ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಬಾಲಕನ ತಲೆಬುರುಡೆ ತುಂಡಾಗಿತ್ತು, ವೈದ್ಯರು ಅದನ್ನು ಕುತ್ತಿಗೆಗೆ ಮರು ಜೋಡಿಸಿದ್ದಾರೆ ಎಂದು ಟೈಮ್ಸ್ ಆಫ್ ಇಸ್ರೇಲ್ ವರದಿ ಮಾಡಿದೆ.
ಅಪಘಾತದಲ್ಲಿ ಸುಲೇಮಾನ್ ಹಸನ್ ಅವರು “ಆಂತರಿಕ ಶಿರಚ್ಛೇದ” ವನ್ನು ಅನುಭವಿಸಿದ್ದರು ಅವರ ತಲೆಬುರುಡೆಯು ಕಾರು ಅಪಘಾತದ ನಂತರ ಬೆನ್ನುಮೂಳೆಯ ಮೇಲಿನ ಭಾಗದಿಂದ ಬೇರ್ಪಟ್ಟಿತ್ತು ಎಂದು ವರದಿ ಹೇಳಿದೆ. ಈ ಸ್ಥಿತಿಯನ್ನು ವೈಜ್ಞಾನಿಕವಾಗಿbilateral atlanto occipital joint dislocation ಎಂದು ಕರೆಯಲಾಗುತ್ತದೆ.
ಅಪಘಾತದ ನಂತರ, ಹುಡುಗನನ್ನು ಹಡಸ್ಸಾ ವೈದ್ಯಕೀಯ ಕೇಂದ್ರಕ್ಕೆ ವಿಮಾನದಲ್ಲಿ ಸಾಗಿಸಲಾಯಿತು, ಅಲ್ಲಿ ಅವನನ್ನು ತುರ್ತು ಶಸ್ತ್ರಚಿಕಿತ್ಸೆಗೆ ಕಳುಹಿಸಲಾಯಿತು. ವೈದ್ಯರ ಪ್ರಕಾರ, ಅವನ ತಲೆಯು “ಕತ್ತಿನ ಬುಡದಿಂದ ಬಹುತೇಕ ಸಂಪೂರ್ಣವಾಗಿ ಬೇರ್ಪಟ್ಟಿತ್ತು. ಇದೀಗ ಮರು ಜೋಡಿಸಲಾಗಿದ್ದು ಬಾಲಕ ಆರೋಗ್ಯವಾಗಿದ್ದಾನೆ. ಇಸ್ರೇಲ್ ವೈದ್ಯರ ಸಾಧನೆಗೆ ಜಗತ್ತಿನಾದ್ಯಂತದಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.