ನವದೆಹಲಿ: ರಿಯಾಲಿಟಿ ಶೋನಲ್ಲಿ ಪಾಲ್ಗೊಳ್ಳುವ ತಮ್ಮ ಕನಸನ್ನು ಈಡೇರಿಸಲು ಹಣ ಸಂಗ್ರಹಿಸುವ ಉದ್ದೇಶದಿಂದ ಓರ್ವ ಬಾಲಕನನ್ನು ಅಪಹರಿಸಿ ಹತ್ಯೆ ಮಾಡಿರುವ ಘಟನೆ ದೆಹಲಿಯಲ್ಲಿ ನಡೆದಿದೆ.
ಸ್ವಪ್ನೇಶ್ ಗುಪ್ತಾ (13)ನನ್ನು ಹತ್ಯೆ ಮಾಡಲಾಗಿದ್ದು, ಈ ಸಂಬಂಧ ಓರ್ವ ಬಾಲಕ ಹಾಗೂ ಬಾಲಕಿಯನ್ನು ಬಂಧಿಸಲಾಗಿದೆ.
ಈ ಮೂವರೂ ಒಂದೇ ನೃತ್ಯ ತಂಡದಲ್ಲಿದ್ದು ನೃತ್ಯ ಪ್ರದರ್ಶನಗಳನ್ನು ನೀಡಲು ಜೊತೆಯಾಗಿ ಹೋಗುತ್ತಿದ್ದರು. ಮುಂಬಯಿಯಲ್ಲಿ ನಡೆಯುವ ರಿಯಾಲಿಟಿ ಶೋವೊಂದರಲ್ಲಿ ಪಾಲ್ಗೊಳ್ಳುವ ಸಲುವಾಗಿ ಗುಪ್ತಾನನ್ನು ಅಪಹರಿಸಿ ಆತನ ತಂದೆಯ ಬಳಿ ಹಣಕ್ಕಾಗಿ ಬೇಡಿಕೆಯಿಟ್ಟಿದ್ದಾರೆ.
ಸೆ.16ರಂದು ಬಾಲಕನ ಅಪಹರಣವಾಗಿದೆ. ರಿಯಾಲಿಟಿ ಶೋಗೆ ಹೋಗುತ್ತಿದ್ದೇವೆ ಎಂದು ಹೇಳಿ ಆತನನ್ನು ಅಪಹರಿಸಲಾಗಿದೆ. ಬಳಿಕ ತಂದೆಗೆ ಕರೆ ಮಾಡಿ ರೂ.60,000 ನೀಡುವಂತೆ ಬೆದರಿಸಿದ್ದಾರೆ. ನಂತರ ಉತ್ತರಾಖಂಡ್ನ ರಾಣಿಖೇತ್ಗೆ ಕರೆದೊಯ್ದು ಬೆಲ್ಟ್ನ ಸಹಾಯದಿಂದ ಕತ್ತು ಹಿಸುಕಿ ಹತ್ಯೆ ನಡೆಸಲಾಗಿದೆ ಎನ್ನಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.